ಅಂದರ್ ಬಾಹರ್, ಕುಟುಕುಟಿ ಮಂಡಳ ಸೇರಿ ವಿವಿಧ ಕಾನೂನುಬಾಹಿರ ಆಟಗಳಿಗೆ ಅವಕಾಶ ಕೊಡಬೇಕು ಎಂದು ಸಂಘಟನೆಯೊoದು ಪೊಲೀಸ್ ಅಧೀಕ್ಷಕರಿಗೆ ಪತ್ರ ರವಾನಿಸಿದೆ. `ಈ ಆಟಗಳಿಗೆ ಅವಕಾಶ ಕೊಡದೇ ಜಾತ್ರೆ-ಉತ್ಸವಗಳಿಗೆ ಸಹ ಅನುಮತಿ ಕೊಡಬಾರದು’ ಎಂದು ಆ ಸಂಘಟನೆ ಒತ್ತಾಯಿಸಿದೆ!
ADVERTISEMENT
ಕುಮಟಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಉತ್ತರ ಕನ್ನಡ ಜಿಲ್ಲಾ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘ ಪೊಲೀಸರ ಮುಂದೆ ಇಂಥಹದೊAದು ವಿಚಿತ್ರ ಬೇಡಿಕೆಯಿಟ್ಟಿದೆ. ಸಂಘದ ಜಿಲ್ಲಾಧ್ಯಕ್ಷ ಮಂಜು ಜೈನ್ ಅವರು ಕುಮಟಾ ಪೊಲೀಸ್ ವೃತ್ತ ನಿರೀಕ್ಷಕರ ಮೂಲಕ ಪೊಲೀಸ್ ಅಧೀಕ್ಷಕರಿಗೆ ಈ ಪತ್ರ ಕೊಡಲು ಮುಂದಾಗಿದ್ದಾರೆ.
ADVERTISEMENT
`ದೀಪಾವಳಿ ಹಬ್ಬದ ಅವಧಿಯಲ್ಲಾದರೂ ಈ ಆಟಗಳಿಗೆ ಮುಕ್ತ ಅವಕಾಶ ಕೊಡಬೇಕು. ಸಾಂಪ್ರದಾಯಿಕ ಆಟಗಳಾದ ಹೊಂಡೆ, ಕಲರ್ ಚಾಯ್ಸ, ಸೋಲಕಾಯಿಗಳಿಗೂ ತೊಂದರೆ ಕೊಡಬಾರದು’ ಎಂದು ಈ ಸಂಘಟನೆಯವರು ಕೇಳಿಕೊಂಡಿದ್ದಾರೆ. `ಅಕ್ಟೊಬರ್ 19ರಿಂದ 22ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಈ ಎಲ್ಲಾ ಬಗೆಯ ಜೂಜಾಟಗಳಿಗೆ ಅವಕಾಶ ಕೊಡಿ’ ಎಂದು ಮನವಿ ಮಾಡಿದ್ದಾರೆ.
ADVERTISEMENT
`ಒಂದಾನು ವೇಳೆ ಇದಕ್ಕೆ ಅವಕಾಶ ಕೊಡದೇ ಇದ್ದರೆ ಕುಮಟಾ ಹಬ್ಬ, ಜಾತ್ರೆ ಉತ್ಸವಕ್ಕೂ ಅನುಮತಿ ಕೊಡಬೇಡಿ’ ಎಂದು ಹೇಳಿದ್ದಾರೆ. `ನಾವು ಸೂಚಿಸಿದ ಆಟಗಳಿಗೆ ಅನುಮತಿ ಕೊಡದೇ ಉತ್ಸವ-ಜಾತ್ರೆಗಳಿಗೆ ಮಾತ್ರ ಅನುಮತಿ ಕೊಟ್ಟರೆ ಉಗ್ರ ಹೋರಾಟ ನಡೆಸುವುದಾಗಿಯೂ ಸಂಘಟನೆಯ ಅಧ್ಯಕ್ಷ ಮಂಜು ಜೈನ್ ಜೊತೆ ಎಂ ಉಮೇಶ, ದಾಮೋದರ ಉಪ್ಪಾರ್ ಇನ್ನಿತರರು ಎಚ್ಚರಿಸಿದ್ದಾರೆ!
ಅಕ್ರಮ ಆಟಕ್ಕೆ ಅನುಮತಿ ಕೋರಿದವರು ಹೇಳಿದ್ದೇನು? ವಿಡಿಯೋ ನೋಡಿ..