ಕುಮಟಾದ ಪ್ರಗತಿ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಾವರದ ಮಹಾಬಲೇಶ್ವರ ಮುಕ್ರಿ ಅವರು ಶಾಲಾ ಆವರಣದಲ್ಲಿಯೇ ಸಾವನಪ್ಪಿದ್ದಾರೆ. ಈ ಬಗ್ಗೆ ಅವರ ತಮ್ಮ ರಾಮಾ ಮುಕ್ರಿ ಅವರು ಪೊಲೀಸ್ ದೂರು ನೀಡಿದ್ದಾರೆ.
ಹೊನ್ನಾವರದ ಹೊನ್ನಾವರ ಕಡತೋಕಾ ಹೆಬಳೆಕೊಪ್ಪ ಮಹಾಬಲೇಶ್ವರ ನಾರಾಯಣ ಮುಕ್ರಿ (46) ಅವರು ಕುಮಟಾದ ಮೂರೂರಿನಲ್ಲಿರುವ ಪ್ರಗತಿ ವಿದ್ಯಾಲಯದಲ್ಲಿ ಕೆಲಸಕ್ಕಿದ್ದರು. ಅಲ್ಲಿ ಅವರು ಬಸ್ ಕಂಡೆಕ್ಟರ್ ಆಗಿ ಶ್ರಮಿಸುತ್ತಿದ್ದರು. ಶಾಲೆ ಆವರಣದಲ್ಲಿಯೇ ಬಸ್ ನಿಲ್ಲಿಸಲಾಗುತ್ತಿದ್ದು, ವಿರಾಮದ ವೇಳೆ ಮಹಾಬಲೇಶ್ವರ ಮುಕ್ರಿ ಅವರು ಬಸ್ಸಿನಲ್ಲಿಯೇ ವಿಹರಮಿಸುತ್ತಿದ್ದರು.
ಅಕ್ಟೊಬರ್ 18ರಂದು ಸಹ ಮಹಾಬಲೇಶ್ವರ ಮುಕ್ರಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಶಾಲಾ ಆವರಣದಲ್ಲಿ ನಿಲ್ಲಿಸಿದ ಬಸ್ ಒಳಗೆ ಅವರು ಪ್ರವೇಶಿಸಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಬಸ್ ಒಳಗೆ ಪ್ರವೇಶಿಸಿದ ಅವರು ಮಧ್ಯಾಹ್ನ 1.30 ಆದರೂ ಹೊರ ಬರಲಿಲ್ಲ. ಗಮನಿಸಿದಾಗ ಬಸ್ಸಿನ ಒಳಗೆ ಅವರು ಮಲಗಿದ್ದ ಸ್ಥಿತಿಯಲ್ಲಿದ್ದರು.
ಹತ್ತಿರ ಹೋಗಿ ಪರಿಶೀಲಿಸಿದಾ ಮಹಾಬಲೇಶ್ವರ ಮುಕ್ರಿ ಅವರು ಅಲ್ಲಿಯೇ ಸಾವನಪ್ಪಿದ್ದರು. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಲಿಲ್ಲ. ಅಣ್ಣನ ಸಾವಿನ ಬಗ್ಗೆ ಅರಿತ ರಾಮ ಮುಕ್ರಿ ಅವರು ಅಲ್ಲಿಗೆ ಹೋದರು. ಸಾವನಪ್ಪಿರುವುದನ್ನು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ.