ಮೇಷ ರಾಶಿ: ಕಚೇರಿ ಕೆಲಸದಲ್ಲಿ ನೆಮ್ಮದಿಯ ವಾತಾವರಣ ಸಿಗಲಿದೆ. ನಿಮ್ಮ ಶ್ರಮಕ್ಕೆ ಮೆಚ್ಚುಗೆಯ ಮಾತು ಕೇಳಿಬರಲಿದೆ. ಸಾಲಗಳು ದೂರವಾಗಲಿದೆ.
ವೃಷಭ ರಾಶಿ: ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಸ್ವಂತ ಉದ್ಯೋಗ ಶುರು ಮಾಡುವವರಿಗೆ ಲಾಭ ಸಾಧ್ಯವಿದೆ. ಅನಿರೀಕ್ಷಿತ ಲಾಭ ಹಾಗೂ ವಾಹನ-ಮನೆ ಖರಿದಿ ಯೋಗವಿದೆ.
ಮಿಥುನ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸವಾಲುಗಳನ್ನು ಧೈರ್ಯವಾಗಿ ಎದುರುಸುತ್ತೀರಿ. ಉದ್ಯೋಗದಲ್ಲಿ ಲಾಭ ಆಗಲಿದ್ದು, ಹೂಡಿಕೆಯಲ್ಲಿಯೂ ಯಶಸ್ಸು ಸಾಧ್ಯವಿದೆ.
ಕರ್ಕ ರಾಶಿ: ನಿಮ್ಮ ಮನಸ್ಸು ಶಾಂತಿ ಬಯಸುತ್ತಿದ್ದು, ಧ್ಯಾನ ಮಾಡಿ. ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ. ಕುಟುಂಬದವರ ಜೊತೆ ಕಾಲ ಕಳೆಯುವುದು ಮುಖ್ಯ.
ಸಿಂಹ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಆಗಲಿದೆ. ಹಣಕಾಸು ವಿಷಯದಲ್ಲಿ ಉನ್ನತಿ ಸಾಧ್ಯವಿದೆ. ಪ್ರೀತಿ-ಪ್ರೇಮ ವಿಚಾರವಾಗಿ ಮಾತನಾಡಲು ಸೂಕ್ತ ಸಮಯ.
ಕನ್ಯಾ ರಾಶಿ: ಗಂಭೀರ ವಿಷಯಗಳ ಬಗ್ಗೆ ಈ ದಿನ ಚಿಂತಿಸಬೇಡಿ. ಹಾಸ್ಯದಿಂದ ಜೀವನ ನಡೆಸಿ. ಒಳ್ಳೆಯ ಮಾತುಗಳು ನಿಮಗೆ ಪ್ರೇರಣೆ ನೀಡಲಿದೆ.
ತುಲಾ ರಾಶಿ: ಹಣಕಾಸು ವ್ಯವಹಾರ ಸರಾಗವಾಗಿರಲಿದೆ. ಕೆಲಸದ ವಿಷಯದಲ್ಲಿ ಜಾಗೃತಿ ಅಗತ್ಯ. ಕೋಪ ಮಾಡಿಕೊಂಡರೆ ನಿಮಗೆ ಹಾನಿ.
ವೃಶ್ಚಿಕ: ಹೊಸ ಬಗೆಯ ಯೋಜನೆಗಳಿಗೆ ಇದು ಸಕಾಲ. ಆಂತರಿಕ ಬೆಳವಣಿಗೆಗೆ ಓದು ಸಹಕಾರಿ. ಸಂವಹನದ ವಿಷಯದಲ್ಲಿ ಎಚ್ಚರಿಕೆವಹಿಸಿ.
ಧನು ರಾಶಿ: ಈ ದಿನ ನಿಮಗೆ ಸಾಹಸಮಯ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಧೈರ್ಯದಿಂದ ಕೆಲಸ ಮಾಡಿ. ಸ್ನೇಹಿತರ ಜೊತೆ ಕಾಲ ಕಳೆಯಿರಿ.
ಮಕರ ರಾಶಿ: ಕಠಿಣ ಶ್ರಮದಿಂದ ಮಾತ್ರ ಉನ್ನತಿ ಸಾಧ್ಯವಿದೆ. ಆದಾಯಕ್ಕೆ ಹೊಸ ಮಾರ್ಗ ಸಿಗಲಿದ್ದರೂ ಆರೋಗ್ಯದ ಬಗ್ಗೆ ಯೋಚಿಸುವುದು ಅಗತ್ಯ. ಹಳೆಯ ಕೆಲಸಗಳನ್ನು ಮೊದಲು ಮುಗಿಸುವುದು ಉತ್ತಮ.
ಕುಂಭ ರಾಶಿ: ನಿಮ್ಮ ಬುದ್ಧಿವಂತಿಕೆಯ ಬಗ್ಗೆ ಜನರಲ್ಲಿ ಮೆಚ್ಚುಗೆ ಸಿಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ.
ಮೀನ ರಾಶಿ: ನಿಮ್ಮೊಳಗಿನ ಕ್ರಿಯಾತ್ಮಕ ಚಟುವಟಿಕೆಗಳು ಹೊರ ಬರಲಿದೆ. ಕಷ್ಟ ದೂರವಾಗಿ ನೆಮ್ಮದಿ ಸಿಗಲಿದೆ. ಪ್ರೇಮ ವಿಚಾರಗಳಲ್ಲಿ ಯಶಸ್ಸು ಸಾಧ್ಯವಿದೆ.