ಕುಮಟಾದ ಮಹೇಶ ಭಟ್ಟ ಹಾಗೂ ನರೇಂದ್ರ ಆಚಾರಿ ಅವರು ಸಂಚರಿಸುತ್ತಿದ್ದ ಕಾರಿಗೆ ಹೊನ್ನಾವರದ ಗಣೇಶ ಪಟಗಾರ ಅವರು ತಮ್ಮ ಬೈಕ್ ಗುದ್ದಿದ್ದಾರೆ. ಬೈಕಿನಿಂದ ಬಿದ್ದ ಗಣೇಶ ಅವರಿಗೆ ಪೆಟ್ಟಾಗಿದ್ದು, ಅತಿ ವೇಗವಾಗಿ ಬೈಕ್ ಚಲಾಯಿಸಿದ ಕಾರಣ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಕುಮಟಾದ ವಾಲ್ಗಳ್ಳಿಯ ಗಣಪತಿ ದೇವಾಲಯದ ಹತ್ತಿರದ ಮಹೇಶ ಭಟ್ಟ ವೈದಿಕರಾಗಿದ್ದಾರೆ. ಅದೇ ಊರಿನಲ್ಲಿ ಕಾರ್ಪರೇಂಟರ್ ಆಗಿರುವ ನರೇಂದ್ರ ಆಚಾರಿ ಅವರು ಮಹೇಶ ಭಟ್ಟ ಅವರ ಗೆಳೆಯರಾಗಿದ್ದು, ಈ ಇಬ್ಬರು ಒಟ್ಟಿಗೆ ಇರುತ್ತಾರೆ. ಹೀಗಿರುವಾಗ ಅಕ್ಟೊಬರ್ 22ರಂದು ಮಧ್ಯಾಹ್ನ ನರೇಂದ್ರ ಆಚಾರಿ ಅವರು ತಮ್ಮ ದೊಡ್ಡಪ್ಪನ ಜೊತೆ ಕಾರಿನಲ್ಲಿ ಹೋಗುತ್ತಿದ್ದರು. ಶ್ರೀಪಾದ ಆಚಾರಿ, ಜಾನಕಿ ಆಚಾರಿ, ಆಶಾ ಆಚಾರಿ ಹಾಗೂ ಆಶಾ ಅವರ ಮಗಳು ಗಾನವಿ ಆಚಾರಿ ಅವರ ಜೊತೆ ಮಹೇಶ ಭಟ್ಟ ಅವರು ಕಾರಿನಲ್ಲಿದ್ದರು. ನರೇಂದ್ರ ಆಚಾರಿ ಅವರು ಆ ಕಾರು ಓಡಿಸುತ್ತಿದ್ದರು.
ಕಾರಿನಲ್ಲಿದ್ದವರನ್ನು ಹೊನ್ನಾವರಕ್ಕೆ ಬಿಟ್ಟು ನರೇಂದ್ರ ಆಚಾರಿ ಹಾಗೂ ಮಹೇಶ ಭಟ್ಟ ಅವರು ಊರಿಗೆ ಮರಳುವವರಾಗಿದ್ದರು. ಆದರೆ, ಹೊನ್ನಾವರದ ರಾಮತೀರ್ಥ ಕ್ರಾಸಿನ ಬಳಿ ವೇಗವಾಗಿ ಬೈಕ್ ಒಂದು ಬಂದು ಅವರ ಕಾರಿಗೆ ಗುದ್ದಿತು. ಹೊನ್ನಾವರ ನವಿಲುಗೋಣ ಕಲ್ಕಟಕೇರಿಯ ಗಣೇಶ ಪಟಗಾರ ಅವರು ಆ ಬೈಕು ಓಡಿಸುತ್ತಿದ್ದು, ಅದೇ ಬೈಕಿನಲ್ಲಿ ಹೊನ್ನಾವರ ಮುಗ್ವಾದ ಹಳಕೇರಿಯ ವಿಶ್ವನಾಥ ಗೌಡ ಅವರು ಇದ್ದರು. ಮುಂದಿನಿAದ ಕಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದು ಗಾಯಗೊಂಡರು. ಆಗ, ಕಾರಿನಲ್ಲಿದ್ದವರೇ ಅವರನ್ನು ಉಪಚರಿಸಿದರು.
ಈ ಅಪಘಾತದಲ್ಲಿ ಕಾರು ಕೊಂಚ ಹಾಳಾಗಿದ್ದು, ಬೈಕ್ ಜಖಂ ಆಯಿತು. ಅತಿವೇಗವಾಗಿ ಬೈಕ್ ಓಡಿಸಿ ಅಪಘಾತ ಮಾಡಿದ ಕಾರಣ ಮಹೇಶ ಭಟ್ಟ ಅವರು ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು.






