ಜೊಯಿಡಾದ ರಾಮನಗರದ ಶಾಲಾ ಮೈದಾನದಲ್ಲಿ ಶುಕ್ರವಾರ ಶವವೊಂದು ಸಿಕ್ಕಿದೆ. ಬೆಳಗ್ಗೆ ಶವ ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜೋಯಿಡಾ ತಾಲೂಕಿನ ಕುಂಭಾರವಾಡದ ಉಮೇಶ್ ನಾಯಕ (42) ಅವರು ಇಲ್ಲಿ ಸಾವನಪ್ಪಿದ್ದಾರೆ. ಉಮೇಶ ನಾಯಕ ಅವರು ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಾಮನಗರದ ಕಲ್ಲು ಖಾನೆಯಲ್ಲಿನ ವಾಹನಕ್ಕೆ ಅವರು ನೇಮಕವಾಗಿದ್ದರು.
ಉಮೇಶ್ ನಾಯಕ್ ಅವರು ಎರಡು ದಿನದಿಂದ ಆಹಾರ ಸೇವಿಸರಲಿಲ್ಲ. ವಿಪರೀತ ಮದ್ಯಪಾನ ಮಾಡಿದ್ದು, ಅದೇ ಸಾವಿಗೆ ಕಾರಣ ಎಂಬ ಮಾಹಿತಿಯಿದೆ. ವಾಕಿಂಗ್ ಹೊರಟ ಸ್ಥಳೀಯರಿಗೆ ಮೊದಲು ಉಮೇಶ ನಾಯಕ ಅವರ ಶವ ಕಾಣಿಸಿದೆ. ಶಾಲೆ ಪಕ್ಕ ಶವ ನೋಡಿದ ಜನ ಪೊಲೀಸರನ್ನು ಕರೆಯಿಸಿದ್ದು, ರಾಮನಗರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.






