ಕುಮಟಾದ ಉದ್ದಂಡ ನಾಯಕ ಅವರು ಕಾಣೆಯಾಗಿ 28 ವರ್ಷ ಕಳೆದರೂ ತಲೆಕೆಡಿಸಿಕೊಳ್ಳದ ಅವರ ಅಣ್ಣ ನಿತ್ಯಾನಂದ ನಾಯಕ ಅವರು ಇದೀಗ ಪಿತ್ರಾರ್ಜಿತ ಆಸ್ತಿಯನ್ನು ವಾಟಣಿ ಮಾಡಿಸುವುದಕ್ಕಾಗಿ ತಮ್ಮನ ಹುಡುಕಾಟ ಶುರು ಮಾಡಿದ್ದಾರೆ. `ಆಸ್ತಿ ಭಾಗ ಮಾಡಲು ಹಕ್ಕುದಾರನಾದ ಆತನ ಅವಶ್ಯಕತೆಯಿದ್ದು, ಹೀಗಾಗಿ ತಮ್ಮನನ್ನು ಹುಡುಕಿಕೊಡಿ’ ಎಂದು ಅವರು ಎರಡುವರೆ ದಶಕದ ನಂತರ ಪೊಲೀಸರ ಮೊರೆ ಹೋಗಿದ್ದಾರೆ!
ಕುಮಟಾ ಹಿರೆಗುತ್ತಿಯ ಉದ್ದಂಡ ಪರಮೇಶ್ವರ ನಾಯಕ (58) ಅವರು ಲಾರಿ ಕ್ಲೀನರ್ ಆಗಿದ್ದರು. 1997ರಲ್ಲಿ ಅವರು ಕೆಲಸಕ್ಕೆ ಹೊರಟವರು ಈವರೆಗೂ ಮನೆಗೆ ಮರಳಿ ಬರಲಿಲ್ಲ. ಆ ಅವಧಿಯಲ್ಲಿ ಅಲ್ಲಿ-ಇಲ್ಲಿ ಅವರನ್ನು ಕುಟುಂಬದವರು ಹುಡುಕಿದರು. ಅದಾದ ನಂತರ ಉದ್ದಂಡ ನಾಯಕ ಅವರ ಹುಡುಕಾಟವನ್ನು ಎಲ್ಲರೂ ಮರೆತರು. ಅದಾದ ನಂತರ ಉದ್ದಂಡ ನಾಯಕ ಅವರು ಮನೆಗೆ ಮರಳಲಿಲ್ಲ. ಯಾರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಸದ್ಯ ಉದ್ದಂಡ ನಾಯಕ ಹಾಗೂ ನಿತ್ಯಾನಂದ ನಾಯಕ ಅವರ ತಂದೆ ಪರಮೇಶ್ವರ ನಾಯಕ ಅವರ ಒಡೆತನದಲ್ಲಿರುವ ಭೂಮಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಷಯ ಮುನ್ನಲೆಗೆ ಬಂದಿತು. ಪಿತ್ರಾರ್ಜಿತ ಆಸ್ತಿಯನ್ನು ವಾಟಣಿ ಮಾಡುವ ಸಮಯದಲ್ಲಿ ಉದ್ದಂಡ ನಾಯಕ ಅವರು ಇದಕ್ಕೆ ಸಮಾನ ಹಕ್ಕುದಾರರು ಎಂಬ ಸಂಗತಿ ಹೊರಬಿದ್ದಿತು. 28 ವರ್ಷಗಳ ಹಿಂದೆ ಕಾಣೆಯಾದ ವ್ಯಕ್ತಿಯ ಬಗ್ಗೆ ಗಂಭೀರ ಹುಡುಕಾಟ ನಡೆಸಿದ ಕಾರಣ ಇದೀಗ ಸಮಸ್ಯೆ ಶುರುವಾಯಿತು.
ಹೀಗಾಗಿ ನಿತ್ಯಾನಂದ ನಾಯಕ ಅವರು ಪೊಲೀಸರ ಮೊರೆ ಹೋದರು. ಪಿತ್ರಾರ್ಜಿತ ಆಸ್ತಿಯಲ್ಲಿ ಸಾಮಾಯಿಕ ಹಕ್ಕುದಾರನಾಗಿರುವ ಉದ್ದಂಡ ನಾಯಕ ಅವರ ಅವಶ್ಯಕತೆಯ ಬಗ್ಗೆ ಪೊಲೀಸರಲ್ಲಿ ವಿವರಿಸಿದರು. 28 ವರ್ಷದ ಹಿಂದೆ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ದೂರು ದಾಖಲಿಸಿದರು. ನಿತ್ಯಾನಂದ ನಾಯಕ ಅವರ ಸಂಕಟ ಅರಿತ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿ, ಅದರ ಪ್ರತಿಯನ್ನು ದೂರುದಾರರಿಗೆ ಒದಗಿಸಿದರು.