ಮೇಷ ರಾಶಿ: ಯೋಜನೆಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಉದ್ಯೋಗದಲ್ಲಿ ಏರುಪೇರಾಗಲಿದೆ. ಹೊಸ ಬಗೆಯ ಅವಕಾಶ ಬಂದರೆ ಒಪ್ಪಿಕೊಳ್ಳಿ.
ವೃಷಭ ರಾಶಿ: ಸಂತೋಷಕರ ಸಮಯ ಸಿಗಲಿದೆ. ದುಡಿಮೆಗೆ ತಕ್ಕ ಗೌರವ ದೊರೆಯಲಿದೆ. ಹಣಕಾಸು ವ್ಯವಹಾರಗಳು ಲಾಭ ಕೊಡಲಿದೆ.
ಮಿಥುನ ರಾಶಿ: ಯೋಜಿತ ಕಾರ್ಯಗಳು ಯಶಸ್ವಿಯಾಗಲಿದೆ. ಹೊಸ ಕಲಿಕೆಯ ಅವಕಾಶ ಸಿಗಲಿದೆ. ತೊಡಕುಗಳು ದೂರವಾಗಲಿದೆ.
ಕರ್ಕ ರಾಶಿ: ಮನಸ್ಸಿನಲ್ಲಿರುವ ಆತಂಕ ದೂರವಾಗಲಿದೆ. ಕೆಲಸದಲ್ಲಿನ ಗೊಂದಲ ಬಗೆಹರಿಸಿಕೊಳ್ಳಿ. ಆರೋಗ್ಯದಲ್ಲಿ ತೊಂದರೆಯಾಗುವ ಲಕ್ಷಣವಿದೆ.
ಸಿಂಹ ರಾಶಿ: ಹಣದ ಅಭಿವೃದ್ಧಿ ಆಗಲಿದೆ. ಸ್ನೇಹಿತರ ಜೊತೆ ಶಾಂತಿಯಿoದ ವರ್ತಿಸಿ. ಯಶಸ್ಸು ಸಿಗಲಿದೆ.
ಕನ್ಯಾ ರಾಶಿ: ಕೃಷಿಯಲ್ಲಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ. ನಿಮ್ಮ ಅದೃಷ್ಟ ಬದಲಾವಣೆಯ ಸಮಯ ಇದಾಗಿದೆ. ಹೊಸ ಜನರ ಪರಿಚಯ ಆಗಲಿದೆ.
ತುಲಾ ರಾಶಿ: ವೃತ್ತಿಯಲ್ಲಿನ ಸವಾಲುಗಳನ್ನು ಎದುರಿಸಿ. ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಿ ಸಾಗಲಿದೆ. ನಿಮ್ಮ ಪ್ರಯತ್ನಗಳು ಫಲ ಕೊಡಲಿದೆ.
ವೃಶ್ಚಿಕ ರಾಶಿ: ತೊಡಕುಗಳ ನಿವಾರಣೆ ಆಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಎದುರಾಗಲಿದೆ. ಹಣಕಾಸು ಲಾಭ ಆಗಲಿದೆ. ವಿವಾದಗಳಿಂದ ದೂರವಿರಿ.
ಧನು ರಾಶಿ: ಕುತೂಹಲದಿಂದ ದಿನ ಕಳೆಯಲಿದೆ. ಹೊಸ ಕಲಿಕೆ ಹಾಗೂ ಯೋಜನೆಗೆ ಯಶಸ್ಸು ಸಿಗಲಿದೆ. ಸಾಧನೆಗೆ ಅವಕಾಶ ಸಿಗಲಿದೆ.
ಮಕರ ರಾಶಿ: ನಿಮ್ಮೊಳಗಿನ ನಿರ್ಧಾರ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ. ಉತ್ಸಾಹ ಹೆಚ್ಚಾಗಲಿದೆ. ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸುವಿರಿ.
ಕುಂಭ ರಾಶಿ: ಹೊಸ ವಿಚಾರ ಹಾಗೂ ಸಂವಾದಗಳಿಗೆ ಅವಕಾಶವಿದೆ. ಉದ್ಯೋಗದಲ್ಲಿ ಮುನ್ನಡೆ ಸಾಧ್ಯವಿದೆ. ಸಂಘಟನಾ ಕೆಲಸಗಳಲ್ಲಿ ಸಹಕಾರ ಸಿಗಲಿದೆ.
ಮೀನ ರಾಶಿ: ಆದ್ಯಾತ್ಮಿಕ ಚಿಂತನೆಗಳು ನಡೆಯಲಿದೆ. ಹಣ ಬಳಕೆಯಲ್ಲಿ ನಿಯಂತ್ರಣ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.