ಮುಂಡಗೋಡು ತಹಶೀಲ್ದಾರ್ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುವ ತುಕಾರಾಮ ಪಾಟೀಲ ಅವರ ಕಾಲು ತುಂಡಾಗಿದೆ. ಭಾನುವಾರ ರಜಾ ಇದ್ದ ಕಾರಣ ಅವರು ಟಾಕ್ಟರ್ ಹಿಡಿದು ಉಳುಮೆಗೆ ಹೋಗಿದ್ದು, ಆ ವೇಳೆ ನಡೆದ ಅವಾಂತರದಿAದ ಅವರು ಕಾಲು ಕಳೆದುಕೊಂಡಿದ್ದಾರೆ.
ತುಕಾರಾಮ ಪಾಟೀಲ (38) ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದಲ್ಲಿರುವ ತಮ್ಮ ಹೊಲಕ್ಕೆ ಹೋಗಿದ್ದರು. ಅಲ್ಲಿ ಟಾಕ್ಟರ್ ಹಿಡಿದು ರೂಟರ್ ಹೊಡೆಯುತ್ತಿದ್ದರು. ಆ ವೇಳೆ ಅವರ ಕಾಲು ಯಂತ್ರದ ನಡುವಿನ ಬ್ಲೇಡುಗಳಿಗೆ ಸಿಲುಕಿತು. ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಾಲು ಸಂಪೂರ್ಣ ನುಜ್ಜು ನೂರಾಗಿದ್ದು, ಬಲಭಾಗ ತುಂಡಾಯಿತು.
ಇದನ್ನು ನೋಡಿದ ಜನ ತುಕಾರಾಮ ಪಾಟೀಲ ಅವರನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿನ ವೈದ್ಯರು ರಕ್ತ ಸೋರುವುದನ್ನು ತಡೆಯುವ ಪ್ರಯತ್ನ ಮಾಡಿದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತುಕಾರಾಮ ಪಾಟೀಲ್ ಅವರನ್ನು ಕಳುಹಿಸಿಕೊಟ್ಟರು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸುಧಾರಿಸಿಕೊಳ್ಳಲು ಕನಿಷ್ಟ ವರ್ಷಗಳ ಕಾಲ ಸಮಯ ಬೇಕಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
`ಕೃಷಿ ಕೆಲಸ ಮಾಡುವಾಗ ಜೋಪಾನ’