ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಹೋರಾಟ ನಡೆಸಿದ್ದ ಶಿರಸಿಯ ಕಾಶಿನಾಥ್ ಮೂಡಿ ಅವರು ಸೋಮವಾರ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ.
ಕಾಶಿನಾಥ ಮೂಡಿ ಅವರು ಶಿರಸಿಯ ವಿದ್ಯಾನಗರ ರುದ್ರಭೂಮಿಯ ಅಧ್ಯಕ್ಷರಾಗಿದ್ದರು. ನೆಮ್ಮದಿ ಕುಟೀರದ ಟ್ರಸ್ಟಿಯಾಗಿದ್ದರು. ಸ್ಮಶಾನ ಭೂಮಿಯಲ್ಲಿಯೂ ನಿಸ್ವಾರ್ಥ ಸಮಾಜ ಸೇವೆ ಮಾಡಿ ಅವರು ಮಾದರಿ ರುದ್ರಭೂಮಿ ನಿರ್ಮಿಸಿದ್ದರು. ವಿದ್ಯಾನಗರದದ ರುದ್ರಭೂಮಿಯನ್ನು ಶಿಸ್ತು, ಸ್ವಚ್ಛತೆ ಮತ್ತು ಮಾನವೀಯ ಸೇವೆಯ ಕೇಂದ್ರವಾಗಿ ಬದಲಾಯಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರೂಜಿ ಗೊಳವಲ್ಕರ್‌ರವರು ಶಿರಸಿಗೆ ಚಿಕಿತ್ಸೆಗಾಗಿ ಆಗಮಿಸಿದಾಗ ಮೂಡಿಯವರ ಹೊಸಪೇಟೆ ರಸ್ತೆಯ `ರವಿದರ್ಶನ’ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಕಾಶಿನಾಥ್ ಮೂಡಿ ಅವರ ದೂರದೃಷ್ಠಿಯ ಪರಿಣಾಮವಾಗಿ ಅವರು ನಿರ್ಮಿಸಿದ ಸಂಸ್ಥೆಗಳು ಅನೇಕರಿಗೆ ಮಾರ್ಗದರ್ಶನ ನೀಡುತ್ತಿವೆ. ಅವರ ಜೀವನ ಪ್ರಯಾಣವು ನಿಸ್ವಾರ್ಥ ಸೇವೆ, ಸಮರ್ಪಣೆ ಮತ್ತು ಸಾಮಾಜಿಕ ಜವಾಬ್ದಾರಿಗೆ ಮಾದರಿ ಎನ್ನುವ ಹಾಗಿದೆ.
You cannot copy content of this page