ಹೊನ್ನಾವರದ ಗುಂಡಿಬೈಲಿನ ಗಾಯತ್ರಿ ಗೌಡ ಅವರ ಸಾವಿನ ಕಾರಣ ಗೊತ್ತಾಗಿದೆ. ಪ್ರಿಯಕರ ರಮೇಶ ಗೌಡ ಬ್ಲಾಕ್‌ಮೇಲ್ ಮಾಡಿದ್ದರಿಂದ ಗಾಯತ್ರಿ ಗೌಡ ಅವರು ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ.
ಗಾಯತ್ರಿ ಗೌಡ ಅವರು ಏಳು ವರ್ಷಗಳಿಂದ ರಮೇಶ ಗೌಡ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ರಮೇಶ ಗೌಡ ಅವರು ಗಾಯತ್ರಿ ಗೌಡರ ಜೊತೆಗೆ ಮತ್ತೊಬ್ಬ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದರು. ಮತ್ತೊಬ್ಬ ಯುವತಿ ಜೊತೆ ರಮೇಶ ಗೌಡ ರೂಮಿನಲ್ಲಿದ್ದ ಖಾಸಗಿ ವಿಡಿಯೋವನ್ನು ಗಾಯತ್ರಿ ಗೌಡ ಅವರು ನೋಡಿದ್ದರು. ಇದನ್ನು ಪ್ರಶ್ನಿಸಿದಾಗ ರಮೇಶ ಗೌಡ ಅವರು ಗಾಯತ್ರಿ ಗೌಡ ಅವರ ವಿಡಿಯೋ ಕಾಣಿಸಿ ಬ್ಲಾಕ್‌ಮೇಲ್ ಮಾಡಿದ್ದರು.
ಇದರಿಂದ ಮಾನಸಿಕವಾಗಿ ಕುಗ್ಗಿದ ಗಾಯತ್ರಿ ಗೌಡ ಅವರು ಬಾವಿಗೆ ಹಾರಿ ಪ್ರಾಣ ಬಿಟ್ಟರು. ತನಿಖೆ ನಡೆಸಿದಾಗ ಈ ಎಲ್ಲಾ ವಿಷಯ ಹೊರಬಂದಿದ್ದು, ಗಾಯತ್ರಿ ಗೌಡ ಅವರ ತಾಯಿ ಗಿರಿಜಾ ಗೌಡ ಅವರು ನೀಡಿದ ದೂರಿನ ಮೇರೆಗೆ ಕಾಸರಕೋಡ ಮಲ್ಲಮಾಸ್ತಿಕೇರಿಯ ರಮೇಶ ಗಣಪಯ್ಯ ಗೌಡ ಅವರ ಬಂಧನವಾಗಿದೆ.
ರಮೇಶ ಗೌಡ ಅವರು ಗಾಯತ್ರಿ ಗೌಡ ಅವರಿಗಿಂತ 12 ವರ್ಷ ದೊಡ್ಡವರಾಗಿದ್ದರು. ಆದರೂ, ರಮೇಶ ಗೌಡ ಅವರನ್ನು ಮದುವೆ ಆಗುವುದಾಗಿ ಗಾಯತ್ರಿ ಗೌಡ ಮನೆಯಲ್ಲಿ ಹೇಳಿದ್ದರು. ಅವರ ಪ್ರೀತಿಗೆ ಕುಟುಂಬದವರು ಸಹ ಒಪ್ಪಿದ್ದರು. ಅದಾಗಿಯೂ ರಮೇಶ ಗೌಡ ಅವರು ಪ್ರೀತಿ ಹೆಸರಿನಲ್ಲಿ ನಾಟಕವಾಡಿದ್ದು, ಮತ್ತೊಮ್ಮ ಮಹಿಳೆ ಜೊತೆ ಸಂಬoಧ ಹೊಂದಿದ್ದರು. ಇದನ್ನು ಪ್ರಶ್ನಿಸಿದ ಒಂದೇ ಒಂದು ಕಾರಣದಿಂದ ಗಾಯತ್ರಿ ಗೌಡ ಅವರ ಖಾಸಗಿ ವಿಡಿಯೋ ಮಾಡಿ ಬೆದರಿಕೆ ಒಡ್ಡುತ್ತಿದ್ದರು.
ಈ ಎಲ್ಲಾ ವಿಷಯವನ್ನು ಗಾಯತ್ರಿ ಗೌಡ ಅವರು ಬರೆದಿಟ್ಟಿದ್ದಾರೆ. ಪ್ರೀತಿ ವಿಷಯದಲ್ಲಿ ತಮಗೆ ಆದ ಮೋಸ, ವಂಚನೆಯ ಬಗ್ಗೆ ಅವರು ವಿಸ್ತಾರವಾಗಿ ವಿವರಿಸಿದ್ದಾರೆ. `ಬೇರೆ ಹುಡುಗಿ ಜೊತೆ ದೇಹ ಹಂಚಿಕೊAಡ ಆತನನ್ನು ನಾನು ಮದುವೆ ಆಗುವುದಿಲ್ಲ’ ಎಂದು ಸಹ ಗಾಯತ್ರಿ ಗೌಡ ಅವರು ಬರೆದಿದ್ದು, ಪ್ರೀತಿ ನಿರಾಕರಿಸಿದಾಗ ಜಗಳವಾಡಿದನ್ನು ಬಹಿರಂಗಪಡಿಸಿದ್ದಾರೆ. ತನಗೆ ಗೊತ್ತಿಲ್ಲದೇ ತನ್ನ ಖಾಸಗಿ ವಿಡಿಯೋ ಮಾಡಿರುವುದನ್ನು ಸಹ ಅವರು ವಿವರಿಸಿದ್ದು, ಹುಟ್ಟಿದ ದಿನವೇ ಸಾವನಪ್ಪಲು ನಿರ್ಧರಿಸಿ ಆತ್ಮಹತ್ಯೆ ನಿರ್ಧಾರ ಮಾಡಿದ ಬಗ್ಗೆ ಬರಹದ ಮೂಲಕ ಹೇಳಿದ್ದಾರೆ.