`ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 17 ವರ್ಷ ಕಳೆದರೂ ಆ ಕಾಯ್ದೆ ಪ್ರಗತಿ ಕಂಡಿಲ್ಲ. ತಾಂತ್ರಿಕ ದೋಷವೇ ಇದಕ್ಕೆ ಕಾರಣ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
ಹೊನ್ನಾವರದಲ್ಲಿ ಅರಣ್ಯ ಹಕ್ಕು ಕಾರ್ಯಕರ್ತರ ಸಭೆ ನಡೆಸಿದ ಅವರು `ಕಳೆದ ಆರು ವರ್ಷಗಳಿಂದ ಕಾಯ್ದೆಗೆ ತಾಂತ್ರಿಕ ತೊಡಕು ಕಾಡುತ್ತಿದೆ’ ಎಂದು ವಿವರಿಸಿದರು. `ಸಾಮಾಜಿಕ ನ್ಯಾಯ ಮತ್ತು ಆಹಾರ ಧಾನ್ಯ ಉತ್ಪತ್ತಿ ಉದ್ದೇಶದಿಂದ ಕಾನೂನು ಮತ್ತು ನಿಯಮಾವಳಿ ಜಾರಿಗೆ ಬಂದಿತು. ಕಾನೂನಾತ್ಮಕ ಸಮಸ್ಯೆ ಜಾರಿಯಲ್ಲಿ ಪರಿಪೂರ್ಣ ಕಾನೂನು ಕೊರತೆ ಮೂರು ತಲೆಮಾರಿನ ದಾಖಲೆಗಳಿಗೆ ಆಗ್ರಹ ಕಳೆದ ಆರು ವರ್ಷದಿಂದ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳಿಗೆ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರ ಕೊರತೆಯಿಂದ ಕಾಯಿದೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ’ ಎಂದವರು ವಿವರಿಸಿದರು.
`ಉತ್ತರಕನ್ನಡ ಜಿಲ್ಲೆಯಲ್ಲಿ ಶೇ 3ರಷ್ಟು ಅರಣ್ಯವಾಸಿಗಳ ಅರ್ಜಿಗಳಿಗೆ ಸಾಗುವಳಿ ಹಕ್ಕು ದೊರತಿದ್ದು, ಶೇ 88ರಷ್ಟು ಅರ್ಜಿಗಳು ಕಾನೂನಾತ್ಮಕ ತಾಂತ್ರಿಕ ದೋಷದಿಂದ ಅರ್ಜಿಗಳು ತಿರಸ್ಕಾರವಾಗಿದೆ. ಸುಪ್ರೀಂ ಕೊರ್ಟನಲ್ಲಿ ಅರಣ್ಯವಾಸಿಗಳು ಒಕ್ಕಲೆಬ್ಬಿಸುವ ಭೀತಿಯನ್ನು ಎದುರಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
ಸಂಘಟನೆ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ನಗರಾಧ್ಯಕ್ಷ ಸುರೇಶ ನಾಯ್ಕ, ಪ್ರಮುಖರಾದ ರಾಮ ಮರಾಠಿ, ಸುರೇಶ ನಾಯ್ಕ ನಗರಬಸ್ತೀಕೇರಿ, ಶಾಂತಿ ಗೌಡ ಕಡ್ಲೇ, ಜನಾರ್ದನ್ ಚಂದಾವರ, ಜೋನ್ ಓಡ್ತಾ, ಹರೀಶ್ಚಂದ್ರ ಅನಂತವಾಡಿ, ಥೋಮಸ್ ಮಾಗೋಡ್, ರಜಾಕ್, ದಾವೂದ್ ಸಾಬ, ಚಂದ್ರಹಾಸ ನಾಯ್ಕ, ವಿನೋದ ಯಲಕೊಟಗಿ, ಮಾದೇವ ಮರಾಠಿ, ಅನಿತಾ ಲೋಫೀಸ್, ಗಣೇಶ ನಾಯ್ಕ ಹೊದಕೆ ಶಿರೂರು, ಸಂತಾನ್ ಪಿಂಠೋ ಇದ್ದರು.