ಕಾರವಾರದ ಸಿದ್ಧರದಲ್ಲಿರುವ ಕೋಳಿ ಪಾರಂ’ನಲ್ಲಿ ಕೆಲಸ ಮಾಡುತ್ತಿದ್ದ ಕಿನ್ನರದ ನರಸಿಂಹ ನಾಯ್ಕ ಅವರು ಕೋಳಿ ಪಾರಂ ಕೋಣೆಯೊಳಗೆ ಶವವಾಗಿದ್ದಾರೆ. ಗಬ್ಬು ವಾಸನೆ ಬರುವುದನ್ನು ನೋಡಿ ಅಲ್ಲಿಗೆ ಹೋದ ಚಂದ್ರಕಾAತ ನಾಯ್ಕ ಅವರಿಗೆ ಅಣ್ಣ ಸಾವನಪ್ಪಿರುವುದು ಗೊತ್ತಾಗಿದೆ.
ಕಾರವಾರದ ಸಿದ್ದರದ ಮುದುಗಾದಲ್ಲಿ ಉಲ್ಲಾಸ ನಾಯ್ಕ ಅವರು ಕೋಳಿ ಪಾರಂ ನಿರ್ಮಿಸಿದ್ದಾರೆ. ಅಲ್ಲಿ ಕಿನ್ನರ ದಿಗಾಳಿಯ ನರಸಿಂಹ ನಾಯ್ಕ ಅವರು ಕೆಲಸ ಮಾಡಿಕೊಂಡಿದ್ದು, ಕೋಳಿ ಪಾರಂ’ನಲ್ಲಿರುವ ಸಣ್ಣ ಕೋಣೆಯಲ್ಲಿ ವಸತಿ ಇದ್ದರು. ಆಗಾಗ ಮನೆಗೆ ಹೋಗಿ ಬರುವುದನ್ನು ಅವರು ರೂಢಿಸಿಕೊಂಡಿದ್ದರು. ನಿತ್ಯ ಸರಾಯಿ ಸೇವನೆ ಮಾಡಿ ಅವರು ಕೋಳಿ ಪಾರಂ ಕೆಲಸ ಮಾಡುತ್ತಿದ್ದರು.
ಅಕ್ಟೊಬರ್ 29ರಂದು ಕೋಳಿ ಪಾರಂ ಮಾಲಕ ಉಲ್ಲಾಸ ನಾಯ್ಕ ಅವರನ್ನು ಕೊನೆಯದಾಗಿ ಭೇಟಿ ಆಗಿದ್ದರು. ಅದೇ ದಿನ ಸಂಜೆ ಮತ್ತೆ ಕೋಳಿ ಪಾರಂ ಕರ್ತವ್ಯಕ್ಕೆ ಹೋಗಿದ್ದರು. ನವೆಂಬರ್ 2ರಂದು ಕೋಳಿ ಪಾರಂ ಒಳಗೆ ಕೆಟ್ಟ ವಾಸನೆ ಬಂದಿದ್ದು, ಚಂದ್ರಕಾoತ ನಾಯ್ಕ ಅವರು ವಾಸನೆ ಬಂದ ಕಡೆ ಹೊರಟರು. ಆಗ, ಅಲ್ಲಿದ್ದ ಚಿಕ್ಕ ಕೋಣೆಯೊಳಗೆ ನರಸಿಂಹ ನಾಯ್ಕ ಅವರು ಸಾವನಪ್ಪಿರುವುದನ್ನು ನೋಡಿದರು.
ತಮ್ಮನ ಸಾವಿನ ಬಗ್ಗೆ ಚಂದ್ರಕಾoತ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.