ಯಲ್ಲಾಪುರದ ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ ಕಾಪ್ಸೆ ಅವರು ಸಾವಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ-ಮನಸ್ತಾಪ ಅವರ ಸಾವಿಗೆ ಮುಖ್ಯ ಕಾರಣವಾಗಿದೆ.
ಹೇಮಂತ ಕಾಪ್ಸೆ ಹಾಗೂ ಅವರ ಪತ್ನಿ ಸವಿತಾ ಕಾಪ್ಸೆ ಅವರು ಪುತ್ರ ಕಿಶನ್ ಕಾಪ್ಸೆ ಅವರ ಜೊತೆ ಯಲ್ಲಾಪುರದ ಮಂಜುನಾಥ ನಗರದಲ್ಲಿ ವಾಸವಾಗಿದ್ದರು. ಕಾಮಾಕ್ಷಿ ಪೆಟ್ರೋಲ್ ಪಂಪಿನಲ್ಲಿ ಕೂಲಿ ಕೆಲಸ ಮಾಡಿ ಹೇಮಂತ ಕಾಪ್ಸೆ ಅವರು ಕುಟುಂಬ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಹೇಮಂತ ಕಾಪ್ಸೆ ಹಾಗೂ ಸವಿತಾ ಕಾಪ್ಸೆ ಅವರ ನಡುವೆ ವೈಮನಸ್ಸು ಮೂಡಿತು.
ಈ ಮನಸ್ತಾಪ ದೊಡ್ಡದಾಗಿದ್ದರಿಂದ ಸವಿತಾ ಕಾಪ್ಸೆ ಅವರು ಮನೆ ಬಿಟ್ಟು ಹೋದರು. ಎರಡು ವರ್ಷ ಕಳೆದರೂ ಸವಿತಾ ಕಾಪ್ಸೆ ಅವರು ಮನೆಗೆ ಮರಳಲಿಲ್ಲ. ಹೇಮಂತ ಕಾಪ್ಸೆ ಅವರು ಇದೇ ನೋವಿನಲ್ಲಿ ಸೊರಗಿದ್ದರು. ಪತ್ನಿ ಮನೆಬಿಟ್ಟು ಹೋದ ಆಘಾತದಿಂದ ಅವರು ಕೊರಗುತ್ತಿದ್ದರು.
ನವೆಂಬರ್ 4ರಂದು ಹೇಮಂತ ಕಾಪ್ಸೆ ಅವರು ದುಡುಕು ನಿರ್ಧಾರ ಮಾಡಿದರು. ತಮ್ಮ ಮನೆಯೊಳಗೆ ಅವರು ನೇಣಿಗೆ ಶರಣಾದರು. ಮಧ್ಯಾಹ್ನ 1.30ರ ಅವಧಿಗೆ ಮನೆಗೆ ಬಂದ ಕಿಶನ್ ಕಾಪ್ಸೆ ಅವರು ತಂದೆಯ ಸಾವು ನೋಡಿ ಅಕ್ಕ-ಪಕ್ಕದವರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕಿಶನ್ ಕಾಪ್ಸೆ ಅವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’