`ದೇಶದ ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನು ನಿಲ್ಲಿಸಲು ಪ್ರತಿಯೊಬ್ಬರು ಪಣತೊಡಬೇಕು’ ಎಂದು ಕೈಗಾ ಅಣು ವಿದ್ಯುತ್ ಘಟಕದ ಅಧಿಕಾರಿ ವೇಣುಗೋಪಾಲ ಅವರು ಕರೆ ನೀಡಿದ್ದಾರೆ. ನಿತ್ಯದ ಬದುಕಿನಲ್ಲಿ ಕಾಣುವ ಲಂಚಾವತಾರ ತಡೆಯ ನಿಯಂತ್ರಣದ ಬಗ್ಗೆ ಅವರು ಅಸ್ನೋಟಿ ಮಕ್ಕಳಿಗೆ ಪಾಠ ಮಾಡಿದ್ದಾರೆ.
ಕಾರವಾರದ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಿAದ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ ನಡೆದಿದ್ದು, ವೇಣುಗೋಪಾಲ ಅವರು ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಯಾವ ಯಾವ ಹಂತದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ? ಅದನ್ನು ತಡೆಗಟ್ಟುವ ವಿಧಾನಗಳು ಯಾವವು? ಎನ್ನುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಭ್ರಷ್ಟಾಚಾರ ವಿರೋಧಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ ಅವರು ಭ್ರಷ್ಟಾಚಾರ ನಿಗ್ರಹ ಪ್ರತಿಜ್ಞೆ ಮಾಡಿಸಿದರು.
ಕೈಗಾದ ಮತ್ತೊಬ್ಬ ಅಧಿಕಾರಿ ಲೊಲಿಟಾ ಅವರು ಮಕ್ಕಳ ಜೊತೆ ಬೆರೆತರು. ಶಾಲಾ ಮುಖ್ಯಾಧ್ಯಾಪಕ ಗಣೇಶ ಬೀಷ್ಟಣ್ಣನವರ್ ಅವರು ವಿಚಕ್ಷಣ ಜಾಗೃತಿ ಸಪ್ತಾಹದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದ ಕಾರ್ಯವನ್ನು ಶ್ಲಾಘಿಸಿದರು. ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಸಂತೋಷ ಕಾಂಬ್ಲೆ, ರೂಪಾಲಿ ಸಾವಂತ, ವಿಜಯ ಸುಧೀರ್, ಜೆ ಬಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.