ಮುಂಡಗೋಡ ಕರಗಿಕೊಪ್ಪದ ಪ್ರವೀಣ ಲಮಾಣಿ ಅವರು ಅಡ್ಡಾದಿಡ್ಡಿ ಸ್ಕೂಟಿ ಓಡಿಸಿದ್ದು, ಅವರ ಬೈಕ್ ಗುದ್ದಿದ ಪರಿಣಾಮ ನೆಹರು ನಗರದ ವಿಠ್ಠಲರಾವ್ ರಾಂಪುರೆ ಅವರು ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿಠ್ಠಲರಾವ್ ರಾಂಪುರೆ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ.
ಅಕ್ಟೊಬರ್ 23ರಂದು ರಾತ್ರಿ ಮುಂಡಗೋಡಿನ ಬಂಡಿಗೇರಿ ಪೆಟ್ರೋಲ್ ಬಂಕಿನ ಬಳಿ ಮುಂಡಗೋಡು ಬಸ್ ನಿಲ್ದಾಣದ ಕಡೆ ವಿಠ್ಠಲರಾವ್ ರಾಂಪುರೆ (79) ಅವರು ನಡೆದು ಹೋಗುತ್ತಿದ್ದರು. ಪ್ರವೀಣ ಲಮಾಣಿ ಅವರು ವೇಗವಾಗಿ ಸ್ಕೂಟಿ ಓಡಿಸಿಕೊಂಡು ಬಂದವರು ವಿಠ್ಠಲರಾವ್ ಅವರಿಗೆ ಡಿಕ್ಕಿ ಹೊಡೆದರು. ಪರಿಣಾಮ ವಿಠ್ಠಲರಾವ್ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.
ವಿಠ್ಠಲರಾವ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಕೈ-ಕಾಲುಗಳಿಗೆ ಸಹ ನೋವಾಯಿತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮಾವನಿಗೆ ಸ್ಕೂಟಿ ಗುದ್ದಿದ ಬಗ್ಗೆ ನೆಹರು ನಗರದ ನರ್ಸ ಪೂಜಾ ರಾಂಪುರೆ ಅವರು ಪೊಲೀಸ್ ದೂರು ನೀಡಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ವಿಠ್ಠಲರಾವ್ ಅವರು ನವೆಂಬರ್ 4ರಂದು ಕೊನೆಯುಸಿರೆಳೆದರು.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’