ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಶಿರಸಿ ಪೊಲೀಸರು ಬುಧವಾರ ಒಂದೇ ದಿನ ನಾಲ್ವರನ್ನು ಬಂಧಿಸಿದ್ದಾರೆ. ನಿಷೇಧಿತ ಗಾಂಜಾ ಸೇವಿಸಿದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಿದ್ದಾರೆ.
ಶಿರಸಿಯ ಕೋರ್ಟ ರಸ್ತೆಯ ಕಿಶನ್ ನಾರಾಯಣ ಹರಿಜನ (23) ಹಾಗೂ ಶಿರಸಿ ಬಾಪೂಜಿನಗರದ ಮುತ್ತಣ್ಣ ಭೀಮಪ್ಪ ಭೋವಿ (27) ಅವರು ಶಹರದ ಕ್ಯಾಪ್ಟನ್ ಕ್ಯಾಂಪಸ್ ರಸ್ತೆಯಲ್ಲಿ ಹೊಗೆ ಬಿಡುವಾಗ ಪೊಲೀಸರು ಹಿಡಿದಿದ್ದಾರೆ. ಶಿರಸಿ ನೆಹರುನಗರದ ಮನೋಜ್ ರಾಮಾ ಮೇತ್ರಿ (22) ಹಾಗೂ ಶಿರಸಿ ಐದು ರಸ್ತೆ ಬಳಿಯ ಸಮೀರ್ ಅಮೀನುದ್ದಿನ ಫಿರ್ಜದೆ (19) ಅವರು ಆನೆಹೊಂಡದ ಹತ್ತಿರ ಅಮಲಿನಲ್ಲಿರುವಾಗ ಸಿಕ್ಕಿ ಬಿದ್ದಿದ್ದಾರೆ. ಅವರೆಲ್ಲರನ್ನು ವಶಕ್ಕೆಪಡೆದ ಪೊಲೀಸರು ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆಗ, ಗಾಂಜಾ ಸೇವನೆ ದೃಢವಾಗಿದ್ದರಿಂದ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಡಿವೈಎಸ್ಪಿ ಗೀತಾ ಪಾಟೀಲ್, ಪಿಐ ಶಶಿಕಾಂತ ವರ್ಮಾ ಅವರ ಜೊತೆ ಪಿಎಸ್‌ಐ ನಾಗಪ್ಪ ಬಿ ಅವರ ಗಾಂಜಾದಿAದ ದೂರವಿರುವಂತೆ ಜನರಿಗೆ ಕರೆ ನೀಡಿದ್ದಾರೆ. ಪಿಎಸ್‌ಐ ನಾರಾಯಣ ರಾಠೋಡ್ ಅವರ ನೇತೃತ್ವದಲ್ಲಿ ಎಎಸ್‌ಐ ನೆಲ್ಸನ್ ಮೆಂಥರೋ, ಪೊಲೀಸ್ ಸಿಬ್ಬಂದಿ ಹನುಮಂತ್ ಮಾಕಾಪುರ, ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ್ ಅಂಗಡಿ, ಸುನಿಲ್ ಅವರು ಈ ದಿನದ ಕಾರ್ಯಾಚರಣೆಯಲ್ಲಿದ್ದರು.