`ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು. ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕು’ ಎಂಬುದು ಪ್ರತಿಯೊಬ್ಬರ ಪಾಲಕರ ಕನಸು. ಸಾವಿರಾರು ಪಾಲಕರ ಈ ಕನಸು ಈಡೇರಿಸುವುದಕ್ಕಾಗಿ `ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ’ ಶ್ರಮಿಸುತ್ತಿದೆ.
ADVERTISEMENT
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಹಾಗೂ ಶಿರಸಿಯಲ್ಲಿ ಶಾಖೆಹೊಂದಿರುವ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರವೂ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಮಕ್ಕಳ ವಿದ್ಯಾರ್ಜನೆಗೆ ನೆರವು ನೀಡುತ್ತಿದೆ. ಶಾಲೆಗೆ ಹೋಗುವ ಪ್ರತಿಯೊಬ್ಬ ಮಗುವು ಬಿಡುವಿನ ವೇಳೆಯಲ್ಲಿ ತರಬೇತಿಪಡೆಯುವಂತೆ ಇಲ್ಲಿ ಸಮಯ ಹೊಂದಾಣಿಕೆ ಮಾಡಲಾಗಿದೆ. ಬೆಳಗ್ಗೆ 6ರಿಂದ 8ಗಂಟೆಯವರೆಗೆ ಹಾಗೂ ಸಂಜೆ 5ರಿಂದ 7ಗಂಟೆಯವರೆಗೆ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರದ ತರಬೇತಿ ನಡೆಯುತ್ತದೆ. 3ನೇ ತರಗತಿ ಮೇಲ್ಪಟ್ಟ ಎಲ್ಲಾ ಮಕ್ಕಳು ಇಲ್ಲಿನ ತರಬೇತಿಗೆ ಅರ್ಹರು. ಇಲ್ಲಿ ತರಬೇತಿಪಡೆದ 125ಕ್ಕೂ ಅಧಿಕ ಚಿಣ್ಣರು ಪ್ರತಿಷ್ಠಿತ ನವೋದಯಕ್ಕೆ ಆಯ್ಕೆಯಾಗಿದ್ದಾರೆ. 30ರಷ್ಟು ಮಕ್ಕಳು ಸೈನಿಕ ಶಾಲೆಗೆ ಅರ್ಹತೆಪಡೆದಿದ್ದಾರೆ. 450ಕ್ಕೂ ಅಧಿಕ ಮಕ್ಕಳು ಮುರಾರ್ಜಿ ಶಾಲೆಯ ಪ್ರವೇಶಪಡೆದು ವಿದ್ಯಾರ್ಜನೆಯಲ್ಲಿ ನಿರತರಾಗಿದ್ದಾರೆ.
ADVERTISEMENT
ಸಿಬಿಎಸ್‌ಸಿ ಶಾಲೆಯಲ್ಲಿ ಎಂಟು ವರ್ಷ ಹಾಗೂ ನವೋದಯ ಶಾಲೆಯಲ್ಲಿ ಐದು ವರ್ಷ ಕೆಲಸ ಮಾಡಿದ ಅನುಭವಹೊಂದಿದ ಯೋಗೇಂದ್ರ ರೇವಣಕರ್ ಅವರು ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರದ ರೂವಾರಿ. ತಮ್ಮ ಅನುಭಗಳ ಆಧಾರದ ಮೇರೆಗೆ 10 ವರ್ಷಗಳ ಹಿಂದೆ ಅವರು ಈ ಸಂಸ್ಥೆ ಸ್ಥಾಪಿಸಿದರು. ಮುಂಡಗೋಡದ ಬಂಕಾಪುರ ರಸ್ತೆಯಲ್ಲಿ ತರಗತಿ ನಡೆಸಿದ ಅವರು ಸದ್ಯ ಹುಬ್ಬಳ್ಳಿ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಬೇಡಿಕೆ ಹೆಚ್ಚಿದ ಪರಿಣಾಮ ಶಿರಸಿಯಲ್ಲಿ ಸಹ ಶಾಖೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಪ್ರತಿ ತರಗತಿಗೆ 60 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಿ, ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನವಿರಿಸಿ ಪಾಠ ಮಾಡುವುದು ಇಲ್ಲಿನ ವಿಶೇಷ.
ADVERTISEMENT
ಕಂಪ್ಯುಟರ್ ತರಬೇತಿ
ಇನ್ನೂ 3ನೇ ತರಗತಿಗೆ ಪ್ರವೇಶಪಡೆದ ಮಗುವಿಗೆ ಇಲ್ಲಿ ಗಣಿತ ಹಾಗೂ ಇಂಗ್ಲಿಷ್ ಕುರಿತು ಕಲಿಸಲಾಗುತ್ತದೆ. ಅದರೊಂದಿಗೆ ಕಂಪ್ಯುಟರ್ ಸೇರಿ ಅನೇಕ ಬಗೆಯ ಕೌಶಲ್ಯಗಳ ಬಗ್ಗೆ ಪರಿಣಿತಿ ನೀಡಲಾಗುತ್ತದೆ. ಇದಕ್ಕಾಗಿಯೇ 15 ವರ್ಷಕ್ಕೂ ಅಧಿಕ ಅನುಭವವಿರುವ 7 ನುರಿತ ಶಿಕ್ಷಕರು ದುಡಿಯುತ್ತಿದ್ದಾರೆ. ಸ್ಮಾರ್ಟ ಕ್ಲಾಸ್ ಆಧಾರಿತ ಶಿಕ್ಷಣ ಪದ್ಧತಿ ಇಲ್ಲಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ ಉತ್ತಮ ಆಯ್ಕೆ.
ನಿಮ್ಮ ಮಕ್ಕಳನ್ನು ಪ್ರತಿಷ್ಠಿತ ನವೋದಯ ಅಥವಾ ಸೈನಿಕ ಶಾಲೆಗೆ ಕಳುಹಿಸಲು ಇಚ್ಚಿಸುವಿರಾ? ಹಾಗಾದರೆ ಮಗುವಿನ ಕೌಶಲ್ಯ ಅಭಿವೃದ್ಧಿಗಾಗಿ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರಕ್ಕೆ ಸೇರಿಸಿ…
ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 9742235329