ಮೇಷ ರಾಶಿ: ಬೆಳಗಿನ ವೇಳೆಯಲ್ಲಿ ನಿಮ್ಮ ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಕೆಲಸಗಳಿಗೆ ಶಕ್ತಿ ಸಿಗುವ ಸೂಚನೆ ಸಿಗಲಿದೆ. ಕಚೇರಿ ಅಥವಾ ವ್ಯವಹಾರದಲ್ಲಿ ನಾಯಕತ್ವ ತೋರಿಸುವಿರಿ. ಹಣಕಾಸಿನಲ್ಲಿ ಚಿಕ್ಕ ನಿರ್ಧಾರವೂ ಮುಂದಿನ ದಿನಗಳಲ್ಲಿ ಪ್ರಭಾವ ಬೀರುವುದರಿಂದ ಜಾಗ್ರತೆ ಅಗತ್ಯ.ಆತುರದಲ್ಲಿ ತೆಗೆದುಕೊಂಡ ಮಾತು ಕಲಹಕ್ಕೆ ಕಾರಣವಾಗುವ ಸಾಧ್ಯತೆಯಿದೆ. ತಲೆ ಹಾಗೂ ಕಣ್ಣಿಗೆ ವಿಶ್ರಾಂತಿ ಕೊಡುವುದು ಮುಖ್ಯ.
ವೃಷಭ ರಾಶಿ: ನಿಮ್ಮ ಕೆಲಸ ನಿಧಾನವಾದರೂ ಸ್ಥಿರ ಪ್ರಗತಿ ಕಾಣುವ ದಿನ. ತಾಳ್ಮೆ ನಿಮ್ಮ ಬಲವಾಗಲಿದೆ. ಆಸ್ತಿ, ಮನೆಯಲ್ಲಿ ಬದಲಾವಣೆ ಸಾಧ್ಯತೆಯಿದೆ. ರಿಪೇರಿ ವಿಷಯಗಳಲ್ಲಿ ಉಪಯುಕ್ತ ಮಾಹಿತಿ ಸಿಗುವ ಸಾಧ್ಯತೆ. ವ್ಯವಹಾರದಲ್ಲಿ ಹಳೆಯ ಗ್ರಾಹಕರಿಂದಲೇ ಹೊಸ ಅವಕಾಶಗಳು ಬರುತ್ತವೆ. ಖರ್ಚು ಮಾಡುವಾಗ ಆಕಸ್ಮಿಕ ಖರೀದಿ ತಪ್ಪಿಸುವ ಪ್ರಯತ್ನ ಮಾಡಿದರೆ ಮುಂದಿನ ಒತ್ತಡ ಕಡಿಮೆಯಾಗುತ್ತದೆ. ಸಾಂತ್ವನ ಕೊಡುವ ಸಂಗೀತ, ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ ರಾಶಿ: ಸಂವಹನ ನಿಮ್ಮ ಶಕ್ತಿಯಿಂದ ದ್ವಿಗುಣ ಲಾಭ ಸಿಗಲಿದೆ. ಓದು, ಪರೀಕ್ಷಾ ತಯಾರಿ, ಕೌಶಲಾಭಿವೃದ್ಧಿಗೆ ಈ ದಿನ ಮಾಡಿದ ಅಭ್ಯಾಸ ಮುಂದಿನ ತಿಂಗಳು ಫಲ ತರುತ್ತದೆ. ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಮಧ್ಯದಲ್ಲಿ ಬಿಟ್ಟು ಬೇಸರಿಸದೇ ಪೂರ್ಣಗೊಳಿಸಲು ಯತ್ನಿಸಬೇಕು. ಚುಟುಕು ಪ್ರಯಾಣ ಅಥವಾ ಮನೆ ಬಳಿಯ ನಡಿಗೆ ದೇಹ-ಮನಸ್ಸಿಗೆ ತಾಜಾತನ ನೀಡಲಿದೆ.
ಕರ್ಕ ರಾಶಿ: ಕುಟುಂಬಕ್ಕೆ ಸಂಬoಧಿಸಿದ ಕೆಲಸಗಳಲ್ಲಿ ನಿಮ್ಮ ಕೌಶಲ್ಯ ಹೆಚ್ಚಾಗಲಿದೆ. ವಿದ್ಯುತ್ ಬಿಲ್, ಆಹಾರ ಸಾಮಗ್ರಿ ಖರೀದಿ ಇವುಗಳಲ್ಲಿ ಸಮತೋಲನ ಕಾಪಾಡುವುದು ಮುಖ್ಯ. ಕಛೇರಿಯಲ್ಲಿ ಭಾವನಾತ್ಮಕ ನಿರ್ಧಾರ ತಗೊಳ್ಳದೆ. ಹಳೆಯ ಸ್ನೇಹಿತರಿಂದ ಅನಿರೀಕ್ಷಿತ ಸಂದೇಶ ಅಥವಾ ಕರೆ ಬಂದು ಮನಸ್ಸು ಹಗುರವಾಗಲಿದೆ. ಆರೋಗ್ಯದ ದೃಷ್ಟಿಯಿಂದ ಜೀರ್ಣಕ್ರಿಯೆಗೆ ಹಿತವಾದ ಆಹಾರ ಆಯ್ಕೆ ಮಾಡಿ.
ಸಿಂಹ ರಾಶಿ: ಆತ್ಮವಿಶ್ವಾಸ ಮತ್ತು ವೇದಿಕೆ ಭಯ ಇಲ್ಲದ ಗುಣದಿಂದ ನೀವು ನಾಯಕರಾಗುವಿರಿ. ಸಭೆ-ಸಮಾರಂಭದಲ್ಲಿ ನಿಮ್ಮ ವ್ಯಕ್ತಿತ್ವ ಗಮನಸೆಳೆಯಲಿದೆ. ಹಣಕಾಸಿನಲ್ಲಿ ಸ್ವಲ್ಪ ಸಾಹಸ ಮಾಡ್ಬೇಕೆನ್ನುವ ಮನೋಭಾವ ಬರುತ್ತದೆ. ಆದರೆ ನಿಯಂತ್ರಣ ಅಗತ್ಯ. ಅಹಂಕಾರ ತೋರಿಸುವ ಮಾತು ತಪ್ಪಿಸಿದರೆ ಸಹೋದ್ಯೋಗಿಗಳ ಸಹಕಾ ಸಿಗುತ್ತದೆ. ಶರೀರಕ್ಕೆ ತಾಪಮಾನ ಹೆಚ್ಚಾಗದಂತೆ ನೀರಿನ ಸೇವನೆ ಮತ್ತು ವಿಶ್ರಾಂತಿ ಕಾಪಾಡಿ.
ಕನ್ಯಾ ರಾಶಿ: ಈ ದಿನ ನಿಮ್ಮ ಯೋಜನೆ, ಲೆಕ್ಕಾಚಾರಗಳಿಗೆ ಅನುಕೂಲಕರ ದಿನವಾಗಿದೆ. ವಿಳಂಬವಾಗಿದ್ದ ಕಾನೂನು ಕೆಲಸಗಳು ವೇಗ ಪಡೆಯಲಿದೆ. ಕಠಿಣ ಪರಿಶ್ರಮಕ್ಕೆ ತಕ್ಷಣ ಪ್ರಶಂಸೆ ಸಿಗದಿದ್ದರೂ, ಮುಂದೆಯಾದರೂ ಗುರುತಿನ ರೂಪದಲ್ಲಿ ಬರುತ್ತದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆ, ಚರ್ಮದ ಸಮಸ್ಯೆಗಳಿಗೆ ವೈದ್ಯರನ್ನು ಭೇಟಿ ಮಾಡಿಕೂಡ ನಿರ್ಲಕ್ಷ್ಯ ಬೇಡ.
ತುಲಾ ರಾಶಿ: ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ವ್ಯವಹಾರ ಪಾಲುದಾರ, ಕೈಜೋಡಿಸಿದ ವ್ಯಕ್ತಿಯ ಜೊತೆ ನೇರವಾಗಿ ಮಾತನಾಡಿ ಅನುಮಾನ ದೂರ ಮಾಡಿಕೊಳ್ಳಿ. ಹೊಸ ಹೂಡಿಕೆಗೆ ಮುಂಚೆ ಸಲಹೆಪಡೆಯುವುದು ಸೂಕ್ತ. ಕಾನೂನು, ಒಪ್ಪಂದ, ವ್ಯವಹಾರಿಕ ದಾಖಲೆಗಳನ್ನು ಸರಿಯಾಗಿ ಗಮನಿಸಬೇಕು. ಯೋಗ, ಲಘು ವ್ಯಾಯಾಮ, ಹಸಿರು ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯುವುದು ಆರಾಮದಾಯಕ.
ವೃಶ್ಚಿಕ ರಾಶಿ: ಈ ದಿನ ನಿಮ್ಮ ಅಭಿಪ್ರಾಯಗಳು ಬಲವಾಗಿರುತ್ತದೆ. ರಹಸ್ಯ ಯೋಜನೆಗಳು, ಹೊಸ ಪ್ರಾಜೆಕ್ಟ್ಗಳ ಬಗ್ಗೆ ಎಲ್ಲರಲ್ಲಿಯೂ ಹೇಳಬೇಡಿ. ಹಣಕ್ಕೆ ಸಂಬoಧಿಸಿದ ಒಬ್ಬರ ಮೇಲೆ ಸಂಪೂರ್ಣ ಅವಲಂಬನೆ ಕಡಿಮೆ ಮಾಡಿ. ಕೋಪ, ಅಸಹ್ಯ ಭಾವ ಬಂದಾಗ ತಕ್ಷಣ ಪ್ರತಿಕ್ರಿಯೆ ಕೊಡುವುದಕ್ಕಿಂತ ಸಮಯ ತೆಗೆದುಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ನೀರಿನ ಸೇವನೆ, ಸೌಮ್ಯ ಆಹಾರ, ನಿದ್ರೆಗೆ ಆದ್ಯತೆ ಕೊಡಿ. ಪುಸ್ತಕ ಓದುವುದು ಪ್ರಯೋಜನಕಾರಿ.
ಧನು ರಾಶಿ: ದೂರದ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ವಿದೇಶ, ಉನ್ನತ ಶಿಕ್ಷಣ, ಆನ್‌ಲೈನ್ ಕೋರ್ಸ್ ಮೊದಲಾದ ವಿಚಾರದಲ್ಲಿ ಒಳ್ಳೆಯ ಸುದ್ದಿ ಕೇಳುವಿರಿ. ನಿಮ್ಮ ಉದ್ಯೋಗದಲ್ಲಿನ ಸಾಧನೆ ಗಮನಸೆಳೆಯಲಿದೆ. ಜ್ಞಾನ ಹಂಚಿಕೊಳ್ಳುವ ಸಂಭಾಷಣೆ ಉತ್ಸಾಹ ತುಂಬುತ್ತದೆ.
ಮಕರ ರಾಶಿ: ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಕೆಲಸದಲ್ಲೂ ನಿಮ್ಮ ಮೇಲೆ ಭರವಸೆ ಮೂಡಲಿದೆ. ಆಸ್ತಿ, ಕರಾರು, ಬ್ಯಾಂಕ್, ಸಾಲ ಕೆಲಸದಲ್ಲಿ ಸ್ಪಷ್ಟತೆ ಸಿಗಲಿದೆ. ಮೇಲಧಿಕಾರಿಗಳಿಗೆ ಕೆಲಸದ ಪ್ರಗತಿ ವರದಿ ಕೊಟ್ಟು ವಿಶ್ವಾಸಗಳಿಸುವಿರಿ. ಹವ್ಯಾಸದಿಂದ ನಿಮ್ಮ ಒತ್ತಡ ದೂರವಾಗಲಿದೆ.
ಕುಂಭ ರಾಶಿ: ಹೊಸ ಆಲೋಚನೆ, ತಂತ್ರಜ್ಞಾನ, ಆನ್‌ಲೈನ್ ಕೆಲಸಗಳ ಬಗ್ಗೆ ಉತ್ಸಾಹ ಹೆಚ್ಚಾಗಲಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್, ಸೋಷಿಯಲ್ ಮೀಡಿಯಾ, ವೆಬ್‌ಸೈಟ್ ಕೆಲಸದಲ್ಲಿ ನಿಮ್ಮ ಐಡಿಯಾ ಕೆಲಸಕ್ಕೆ ಬರಲಿದೆ. ಹೊಸ ಪರಿಚಯಗಳು ನೆರವಿಗೆ ಕಾರಣವಾಗಲಿದೆ. ನಿಮ್ಮ ಭಾವನೆ ಸ್ಪಷ್ಟವಾಗಿ ಹೇಳದಿದ್ದರೆ ತಪ್ಪು ಅರ್ಥ ಬರುವ ಅವಕಾಶಗಳಿದ್ದು, ಸರಳ ಮಾತು ಬಳಸುವುದು ಒಳಿತು.
ಮೀನ ರಾಶಿ: ನಿದ್ರಾ ಕ್ರಮ, ಆಹಾರ ಪದ್ಧತಿ ಸರಿಯಾಗಿರಲಿ. ಕಲಾತ್ಮಕ ಕೆಲಸಕ್ಕೆ ಇದು ಒಳ್ಳೆಯ ಪ್ರೇರಣೆ ಸಿಗಲಿದೆ. ಕಚೇರಿಯಲ್ಲಿನ ನಿಮ್ಮ ಕೆಲಸಕ್ಕೆ ಪರೋಕ್ಷ ಮೆಚ್ಚುಗೆ ಸಿಗಲಿದೆ. ಪ್ರೀತಿಯ ವಿಷಯದಲ್ಲಿ ಜಗಳ ತಪ್ಪಿಸುವುದು ಒಳಿತು. ಧ್ಯಾನ, ಪ್ರಾರ್ಥನೆ, ಮೌನದಲ್ಲಿ ದಿನ ಕಳೆಯುವುದು ಸೂಕ್ತ.