ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವ ಶಿಕ್ಷಕ ಗುಡ್ಡಪ್ಪ ಎಮ್ ಎಚ್ ಅವರಿಗೆ `ಕನ್ನಡ ಕಣ್ಮಣಿ’ ಪ್ರಶಸ್ತಿ ಸಿಕ್ಕಿದೆ.
ಗುಡ್ಡಪ್ಪ ಎಮ್ ಎಚ್ ಅವರು ಭಟ್ಕಳ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ಮಕ್ಕಳ ಮನಸ್ಸು ಅರ್ಥ ಮಾಡಿಕೊಂಡು ಪಾಠ ಮಾಡುವ ಪ್ರವೃತ್ತಿಯಿಂದ ಅವರು ಪ್ರಸಿದ್ಧಿಪಡೆದಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಅವರಿಗೆ ಅಪಾರ ಕಾಳಜಿಯಿದ್ದು, ಇದನ್ನು ಬೆಂಗಳೂರಿನ ನವಭಾರತ ಉದಯ ಪ್ರತಿಷ್ಠಾನದವರು ಗುರುತಿಸಿದ್ದಾರೆ. ಈ ಹಿನ್ನಲೆ ಗುಡ್ಡಪ್ಪ ಎಮ್ ಎಚ್ ಅವರಿಗೆ `ಕನ್ನಡ ಕಣ್ಮಣಿ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಜ್ಞಾನ ಸೌಧದಲ್ಲಿ ನವಭಾರತ ಉದಯ ಪ್ರತಿಷ್ಠಾನದವರು ಆಯೋಜಿಸಿದ ಭವ್ಯ ಸಮಾರಂಭದಲ್ಲಿ `ಕನ್ನಡ ಕಣ್ಮಣಿ’ ಪ್ರಶಸ್ತಿ ವಿತರಣೆ ನಡೆದಿದೆ. ಪ್ರಶಸ್ತಿ ವಿತರಿಸಿ ಮಾತನಾಡಿದ ಸಾಹಿತಿ ಡಿ ಎ ಲಕ್ಮೀನಾಥ ಅವರು `ಕನ್ನಡ ನಾಡು-ನುಡಿ ಭಾಷೆ ರಕ್ಷಿಸಿ ಅದನ್ನು ಕಟ್ಟಿ ಬೆಳೆಸಿದವರಲ್ಲಿ ಶಿಕ್ಷಕರ ಕೊಡುಗೆ ಅಪಾರ. ಅದರಲ್ಲಿಯೂ ಗುಡ್ಡಪ್ಪ ಅವರ ಸೇವೆ ನಾಡಿಗೆ ಹೆಮ್ಮೆ’ ಎಂದು ಹೇಳಿದರು.
ಪ್ರಮುಖರಾದ ಪಿ ಶ್ರೀಧರ, ವಾದಿರಾಜ ,ಗೋವಿಂದ ರಾಜ್, ಜೋಗಿಲ್ ಸಿದ್ದರಾಜ, ಹರಿಶಕುಮಾರ್, ಪ್ರೀಯಾ ಶಿವಕುಮಾರ್ ವೇದಿಕೆಯಲ್ಲಿದ್ದರು. ಉತ್ತರ ಕನ್ನಡ ಜಿಲ್ಲಾ ಕನ್ನಡ ಶಿಕ್ಷಕರ ಬಳಗದವರು ಗುಡ್ಡಪ್ಪ ಅವರಿಗೆ ಶುಭ ಕೋರಿದರು.