ಶಿರಸಿಯ ಮುಂಸಜೆ ಭಟ್ಟ ಹಾಗೂ ಅಂಕೋಲಾದ ಸ್ವದೇಶಿ ಗಾಂವ್ಕರ್ (ಹೆಸರು ಬದಲಿಸಿದೆ) ಅವರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಮೂರನೇ ವ್ಯಕ್ತಿಯ ಮದ್ಯಸ್ಥಿಕೆಯಿಂದ ಆ ಪ್ರೀತಿ ಮೂರು ವರ್ಷದ ಹಿಂದೆ ಮುರಿದು ಬಿದ್ದಿದೆ. ಆ ವೇಳೆ ನಡೆದ ಹಣಕಾಸು ಮಾತುಕಥೆ ಈವರೆಗೂ ಈಡೇರದ ಕಾರಣ ಮುಸ್ಸಂಜೆ ಭಟ್ಟ ಅವರು ಸ್ವದೇಶಿ ಗಾಂವ್ಕರ್ ವಿರುದ್ಧ ಬೈದು-ಬೆದರಿಕೆ ಒಡ್ಡಿದ ಆರೋಪದ ಅಡಿ ದೂರು ದಾಖಲಿಸಿದ್ದಾರೆ.
ಮುಸ್ಸಂಜೆ ಭಟ್ಟ ಹಾಗೂ ಸ್ವದೇಶಿ ಗಾಂವ್ಕರ್ ಪರಸ್ಪರ ಪ್ರೀತಿಸುತ್ತಿದ್ದರು. ಆ ಅವಧಿಯಲ್ಲಿ `ನೀನೇ ನನ್ನ ಜೀವ.. ನೀನೇ ನನ್ನ ಪ್ರಾಣ’ ಎನ್ನುವಷ್ಟರ ಮಟ್ಟಿಗೆ ಅವರಿಬ್ಬರು ಅಂಟಿಕೊoಡಿದ್ದರು. ಇದಕ್ಕೆ ಸಾಕ್ಷಿಯಾಗಿ ಸಾವಿರಾರು ಸಂಖ್ಯೆಯ ವಾಟ್ಸಪ್ ಮೆಸೆಜ್ ವಿನಿಮಯವಾಗಿತ್ತು. ಊರು-ಕೇರಿ-ಜಾತ್ರೆ ಎಂದು ಎಲ್ಲಾ ಕಡೆ ಅವರಿಬ್ಬರು ಸುತ್ತಾಟ ನಡೆಸಿದ್ದರು.
ಕಾಲೇಜು ಮುಗಿದ ನಂತರ ಮುಸ್ಸಂಜೆ ಭಟ್ಟ ಅವರಿಗೆ ಅವರ ಬಾವನ ಕಂಪನಿಯಲ್ಲಿಯೇ `ಅಡಿಕೆ’ ಲೆಕ್ಕ ಮಾಡುವ ಉದ್ಯೋಗ ಸಿಕ್ಕಿತು. ಈ ವೇಳೆ ನಾದಿನಿಯ ಪ್ರೀತಿ ವಿಷಯ ಅರಿತ ಬಾವ ರಾವಣ ಹೆಗಡೆ (ಹೆಸರು ಬದಲಿಸಿದೆ) ಸ್ವದೇಶಿ ಗಾಂವ್ಕರ್ ಅವರಿಗೆ ಮೆಸೆಜ್ ಮಾಡಿದರು. ಅವರಿಬ್ಬರ ಪ್ರೀತಿಗೆ ರಾವಣ ಬಾವ ಬೆಲೆ ಕಟ್ಟಿದ್ದರು. ಆ ಅವಧಿಯಲ್ಲಿ ಪ್ರೀತಿಸಿದ ಹುಡುಗಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದ ಸ್ವದೇಶಿ ಗಾಂವ್ಕರ್ ಅವರು ಅನಗತ್ಯವಾಗಿ ಮೂರನೇ ವ್ಯಕ್ತಿಗಾಗಿ ಖರ್ಚು ಮಾಡಲು ಸಿದ್ಧವಿರಲಿಲ್ಲ. ಅದಾಗಿಯೂ, ಒಂದಷ್ಟು ಹಣ ಕೊಟ್ಟು ಪ್ರಕರಣ ಮುಗಿಸಲು ಸ್ವದೇಶಿ ಗಾಂವ್ಕರ್ ಅವರು ಒಪ್ಪಿದ್ದರು. ಹಣ ಕೊಡಲು ಸಮಯವನ್ನು ಬೇಡಿದ್ದರು.
ಆದರೆ, ಆ ಹಣ ಕೊಟ್ಟರೂ ಆ ರಾವಣ ಬಾವ ನಾಟಕನ ನಾಟಕ ಅಲ್ಲಿಗೆ ಮುಗಿಯುವ ಸಾಧ್ಯತೆಗಳಿರಲಿಲ್ಲ. ಹೀಗಾಗಿ ಸ್ವದೇಶಿ ಗಾಂವ್ಕರ್ ಅವರು ಹಣ ಕೊಡಲು ನಿಧಾನ ಮಾಡಿದರು. ಇದರಿಂದ ಸಿಟ್ಟಾದ ಆ ರಾವಣ ಬಾವ ತಮ್ಮ ಪ್ರಭಾವ ಬಳಸಿ ಮುಸ್ಸಂಜೆ ಭಟ್ಟ ಅವರಿಂದಲೇ ಹಣಕ್ಕೆ ಬೇಡಿಕೆಯಿಟ್ಟರು. ಬಾವನ ಕುಮ್ಮಕ್ಕಿನಿಂದ ದೊಡ್ಡ ಪ್ರಮಾಣದ ಹಣ ಬೇಡುತ್ತಿರುವುದನ್ನು ಅರಿತ ಸ್ವದೇಶಿ ಗಾಂವ್ಕರ್ ಅವರು ಆ ವೇಳೆ ಕಾಸು ಕೊಡಲಿಲ್ಲ. `ನೀನು ಕೇಳಿದರೂ ಆತ ಹಣ ಕೊಡಲಿಲ್ಲ’ ಎಂಬುದನ್ನೇ ರಾವಣ ಬಾವ ಮುಸ್ಸಂಜೆ ಭಟ್ಟ ಅವರ ತಲೆಗೆ ತುಂಬಿದರು. ಇದನ್ನೆ ನೆಪವನ್ನಾಗಿಸಿಕೊಂಡು ಅವರಿಬ್ಬರ ನಡುವೆ ಬಿರುಕು ಮೂಡಿಸಿದರು. ಮುಸ್ಸಂಜೆ ಭಟ್ಟ ಅವರ ತಲೆತಿರುಗಿಸಿ ಅವರಿಬ್ಬರ ಸಂಪರ್ಕ ಕಡಿತಗೊಳಿಸಿದರು.
ಹೀಗಾಗಿ ಮೂರು ವರ್ಷಗಳಿಂದ ಸ್ವದೇಶಿ ಗಾಂವ್ಕರ್ ಹಾಗೂ ಮುಸ್ಸಂಜೆ ಭಟ್ಟ ಅವರ ನಡುವೆ ಮಾತುಕಥೆ ಇರಲಿಲ್ಲ. ಪರಸ್ಪರ ಭೇಟಿಯೂ ಆಗಿರಲಿಲ್ಲ. ಅದಾಗಿಯೂ, ಹಳೆಯ ಹಣ ಕೊಡುವಂತೆ ರಾವಣ ಬಾವ ದುಂಬಾಲು ಬಿದ್ದು ಸ್ವದೇಶಿ ಗಾಂವ್ಕರ್ ಅವರಿಗೆ ಪದೇ ಪದೇ ವಾಟ್ಸಪ್ ಮೆಸೆಜ್ ಮಾಡುತ್ತಿದ್ದರು. ಹಣ ಕೊಡದ ಕಾರಣ ಸ್ವದೇಶಿ ಗಾಂವ್ಕರ್ ಅವರ ಮನೆಗೆ ಹೋಗಿ ಅವರ ತಂದೆಗೂ ಬೆದರಿಕೆ ಒಡ್ಡಿದ್ದರು. ಆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರೂ ರಾಜಿ ಸಂದಾನದ ಮೂಲಕ ಕೊನೆಯಾಗಿತ್ತು. ಈ ಮೂರು ವರ್ಷದ ಅವಧಿಯಲ್ಲಿ ಸ್ವದೇಶಿ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಸಂಪರ್ಕದಲ್ಲಿರಲಿಲ್ಲ. ಆದರೆ, ಹಳೆಯ ಬಾಕಿ ಬರುವುದನ್ನು ರಾವಣ ಬಾವ ಮರೆತಿರಲಿಲ್ಲ.
ಅದಾಗಿ ಮೂರು ವರ್ಷದ ನಂತರ ರಾವಣ ಬಾವನಿಗೆ ಹಳೆಯದೆಲ್ಲವೂ ನೆನಪಾಯಿತು. ಮತ್ತೆ ಮುಸ್ಸಂಜೆ ಭಟ್ಟ ಅವರನ್ನು ಮುಂದೆ ಮಾಡಿ, ತಮ್ಮ ಅಡಿಕೆ ಅಂಗಡಿಯ ಮುಂದೆ ಗಲಾಟೆ ನಡೆದ ಕಾಲ್ಪನಿಕ ಕಥೆ ಕಟ್ಟಿದರು. ಸ್ವದೇಶಿ ಗಾಂವ್ಕರ್ ಅವರ ಪ್ರಕಾರ, ಅವರು ಕಳೆದ 8 ತಿಂಗಳಿನಿoದ ಶಿರಸಿಗೆ ಬಂದಿರಲಿಲ್ಲ. ಆದರೆ, ದಾಖಲಾದ ಪ್ರಕರಣದಲ್ಲಿ ಸೆಪ್ಟೆಂಬರ್ 13ರಂದು ಸ್ವದೇಶಿ ಗಾಂವ್ಕರ್ ಅವರು ಶಿರಸಿಗೆ ಬಂದು ಮುಸ್ಸಂಜೆ ಭಟ್ಟ ಅವರಿಗೆ ಬೆದರಿಕೆ ಒಡ್ಡಿದ ಬಗ್ಗೆ ದೂರಲಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಸ್ವದೇಶಿ ಗಾಂವ್ಕರ್ ವಿವರಿಸಿದ್ದು, ಮುರಿದು ಬಿದ್ದ ಪ್ರೀತಿ-ಪ್ರೇಮದ ಸಾಕ್ಷಿಯ ಸಂದೇಶ ಕಾಣಿಸಿದರು. ರಾವಣ ಬಾವನ ಹಣ ಬೇಡಿಕೆಯ ವಾಟ್ಸಪ್ ಮೆಸೆಜನ್ನು ಬಹಿರಂಗಪಡಿಸಿದರು.