ಒಂದು ಬದಿಯ ಕಾಡಿನಿಂದ ಇನ್ನೊಂದು ಬದಿಯ ಕಾಡಿಗೆ ಹೋಗಬೇಕಿದ್ದ ಆನೆಯೊಂದು ರಸ್ತೆ ಮೇಲೆ ವಿಶ್ರಾಂತಿಪಡೆದಿದೆ. ರಸ್ತೆಗೆ ಅಡ್ಡಲಾಗಿ ಆನೆ ನಿಂತ ಪರಿಣಾಮ ವಿವಿಧ ಊರುಗಳಿಗೆ ತೆರಳಬೇಕಾದ ಜನ ಅಲ್ಲಿಯೇ ನಿಂತಿದ್ದು, ಆನೆ ಕಾಡಿಗೆ ಹೋದ ನಂತರ ಊರಿಗೆ ತೆರಳಿದ್ದಾರೆ.
Advertisement. Scroll to continue reading.
ಮುಂಡಗೋಡಿನ ಪಾಳಾ-ಕೋಡಂಬಿ ರಸ್ತೆಯಲ್ಲಿ ಆನೆ ಕಾಣಿಸಿದೆ. ಈ ಮಾರ್ಗದಲ್ಲಿ ಆನೆ ಸಂಚಾರ ಸಾಮಾನ್ಯವಾಗಿದ್ದರೂ ರಸ್ತೆ ಮೇಲೆ ನಿಂತು ವಿಶ್ರಮಿಸಿದ ಉದಾಹರಣೆಗಳು ಕಡಿಮೆ. ಸದ್ಯ ಸುಮಾರು ಅರ್ದ ಗಂಟೆಗಳ ಕಾಲ ಆನೆ ರಸ್ತೆ ತಡೆ ನಡೆಸಿದೆ. ಆನೆ ನೋಡಿ ದಂಗಾದ ಜನ ರಸ್ತೆಯಲ್ಲಿ ಕಾರು-ಬೈಕು ನಿಲ್ಲಿಸಿ ಕಾಯುತ್ತಿದ್ದು, ಆನೆ ಕಾಡಿಗೆ ಹೋದ ನಂತರ ಜನ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. ಆನೆ ನೋಡಿ ಪ್ರಯಾಣಿಕರು ಬೊಬ್ಬೆ ಹಾಕಿದರೂ ರಸ್ತೆ ಬಿಟ್ಟು ಆ ಜೀವ ಕದಲಲಿಲ್ಲ. ಜನ ಸಹ ಆನೆಯ ಸಮೀಪ ಹೋಗಿ ತೊಂದರೆ ಕೊಡಲಿಲ್ಲ.
ಜನ ಹಾಗೂ ವಾಹನದ ಭಯವಿಲ್ಲದೇ ಆನೆ ರಸ್ತೆಯಲ್ಲಿಯೇ ವಿಶ್ರಾಂತಿಪಡೆದಿದೆ. ದಿಢೀರ್ ಆಗಿ ಆನೆ ನೋಡಿದ ಜನ ಮೊಬೈಲ್ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ರಸ್ತೆ ಮದ್ಯೆ ಆನೆ ನಿಂತ ಸುದ್ದಿ ಕೇಳಿ ಅನೇಕರು ಅಲ್ಲಿ ಜಮಾಯಿಸಿದರು. ಇನ್ನಷ್ಟು ಜನ ಬರುವುದರೊಳಗೆ ಆನೆ ಕಾಡಿನ ದಾರಿ ಹಿಡಿಯಿತು.