ದರೋಡೆ ಮಾಡಲು ಶಿರಸಿಗೆ ಬಂದಿದ್ದ ಡಕಾಯಿತರು ತಮ್ಮ ಕಾರನ್ನು ರಸ್ತೆ ಬದಿಯ ಕಾಲುವೆಗೆ ಹಾಯಿಸಿ ಪರಾರಿಯಾಗಿದ್ದಾರೆ. ಪೊಲೀಸರು ಆ ಡಕಾಯಿತರ ಹುಡುಕಾಟ ನಡೆಸಿದ್ದಾರೆ.
ಭಾನುವಾರ ಶಿರಸಿಯ ಮಾರುತಿ ಹನುಮಂತ ಮರಾಠೆ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಮಾರಿಕಾಂಬಾ ಕ್ರೀಡಾಂಗಣ ಎದುರಿನ ಕೆಇಬಿ ರಸ್ತೆಯ ನಿವಾಸಿಯಾದ ಮಾರುತಿ ಮರಾಠೆ ಅವರ ಮೇಲೆ ಕಾರಿನಲ್ಲಿ ಬಂದವರು ಹಲ್ಲೆಗೆ ಯತ್ನಿಸಿದರು. ಆ ಡಕಾಯಿತರಿಂದ ಮಾರುತಿ ಮರಾಠೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರು. ಅದಾಗಿಯೂ ಅವರು ಮಾರುತಿ ಅವರನ್ನು ಅಡ್ಡಗಟ್ಟಿ ದರೋಡೆಗೆ ಪ್ರಯತ್ನಿಸಿದರು.
ಕಾರಿನಲ್ಲಿದ್ದ ಡಕಾಯಿತರು ಮಾರುತಿ ಮರಾಠೆ ಅವರ ಬೈಕಿಗೆ ತಮ್ಮ ವಾಹನ ಡಿಕ್ಕಿ ಮಾಡಿದರು. ಅದಾದ ನಂತರ ಮಾರುತಿ ಮರಾಠೆ ಅವರ ಬಳಿಯಿದ್ದ ಚಿನ್ನ ಕಸಿಯುವ ಪ್ರಯತ್ನ ಮಾಡಿದರು. ಈ ವೇಳೆ ಕಾರು ಗಟಾರಕ್ಕೆ ಬಿದ್ದಿದ್ದು, ಮಾರುತಿ ಮರಾಠೆ ಅವರು ದಾಳಿಯಿಂದ ತಪ್ಪಿಸಿಕೊಂಡರು. ಕಾರು ಗಟಾರದಿಂದ ಮೇಲೆ ಬರಲಿಲ್ಲ. ಆಗ, ಕಂಗಾಲಾದ ಡಕಾಯಿತರು ಆ ಕಾರನ್ನು ಅಲ್ಲಿಯೇ ಬಿಟ್ಟು ಓಡಿದರು.
ಆ ಕಾರಿನಲ್ಲಿ ನಾಲ್ವರು ಇದ್ದ ಬಗ್ಗೆ ಶಂಕಿಸಲಾಗಿದೆ. ಮಾರುತಿ ಮರಾಠಿ ಅವರು ಇದರಿಂದ ಆಘಾತಕ್ಕೆ ಒಳಗಾಗಿದ್ದಾರೆ. ಮಾರುತಿ ಮರಾಠಿ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆಯುತ್ತಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ಬಸವರಾಜ ಕನಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಮಾರುತಿ ಮರಾಠಿ ಅವರಿಂದ ಪೊಲೀಸರು ಮಾಹಿತಿಪಡೆದಿದ್ದಾರೆ.