ಮೇಷ ರಾಶಿ: ನೀವು ಅಂದುಕೊoಡಿರುವ ಕೆಲಸಗಳು ನಿಧಾನವಾಗಲಿದೆ. ಆತುರದ ನಿರ್ಧಾರಗಳನ್ನು ಮಾಡಬೇಡಿ. ಮನಸ್ಸು ಶಾಂತವಾಗಿರಿಸಿಕೊoಡಷ್ಟು ನಿಮಗೆ ಒಳ್ಳೆಯದು.
ವೃಷಭ ರಾಶಿ: ನಿಮ್ಮ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬರಲಿದೆ. ಬುದ್ದಿವಂತಿಕೆಯಿAದ ಕೆಲಸ ಮಾಡಿದರೆ ನಿಮ್ಮ ಬಾರ ಕಡಿಮೆ ಆಗಲಿದೆ. ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ಸಮಯ.
ಮಿಥುನ ರಾಶಿ: ನೀವು ಮಾಡುವ ಕೆಲಸದಲ್ಲಿ ತಾಳ್ಮೆ ಅಗತ್ಯ. ಭಾವನಾತ್ಮಕ ಬದಲಾವಣೆಗಳಿಗೆ ಸಿದ್ಧರಾಗಿರಿ. ಮನಸ್ಸಿನ ಶಾಂತಿಗಾಗಿ ದೇವರ ಧ್ಯಾನ ಮಾಡಿ.
ಕರ್ಕ ರಾಶಿ: ನೀವು ಕೈಕೊಂಡಿರುವ ಹೊಸ ಯೋಜನೆಗಳು ಯಶಸ್ವಿಯಾಗಲಿದೆ. ಕುಟುಂಬದವರ ಜೊತೆ ಸರಿಯಾಗಿ ಮಾತನಾಡಿ, ಸಮಸ್ಯೆಗಳನ್ನು ಆಲಿಸಿ. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ: ಹೊಸ ವಿಷಯ ಕಲಿಯಲು ಈ ದಿನ ಸೂಕ್ತ. ಜೀವನದಲ್ಲಿ ಸಂತೋಷವಾಗಿರಲು ಚಟುವಟಿಕೆಯಿಂದ ಬದುಕಿ. ನಿಮ್ಮ ಮಾತಿನ ಬಗ್ಗೆ ಗಮನವಿರಲಿ.
ಕನ್ಯಾ ರಾಶಿ: ಅಗತ್ಯಕ್ಕಿಂತಲೂ ಹೆಚ್ಚಿನದಾಗಿ ಯಾವುದಕ್ಕೂ ಸ್ಪಂದಿಸಬೇಡಿ. ನಿಮ್ಮ ಮಾತು ನಿಮ್ಮ ನಿಗ್ರಹದಲ್ಲಿರದಿದ್ದರೆ ಸಮಸ್ಯೆ ಆಗಬಹುದು. ಹಣಕಾಸು ವ್ಯವಹಾರಗಳಲ್ಲಿ ಲಾಭ ಆಗಲಿದೆ.
ತುಲಾ ರಾಶಿ: ಹೊಸ ಅವಕಾಶಗಳು ನಿಮ್ಮನ್ನು ಅರೆಸಿ ಬರಲಿದೆ. ಕೌಟುಂಬಿಕ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳಿ. ಖರ್ಚು-ವೆಚ್ಚಗಳ ಬಗ್ಗೆ ನಿಗಾವಹಿಸಿ. ಅನೇಕ ದಿನದ ಸಮಸ್ಯೆ ದೂರವಾಗಲಿದೆ.
ವೃಶ್ಚಿಕ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆ ಸಾಧ್ಯವಿದೆ. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ. ಆಯಾಸವಾದರೆ ಕೂಡಲೇ ವಿಶ್ರಾಂತಿಪಡೆಯುವುದು ಸೂಕ್ತ.
ಧನು ರಾಶಿ: ಹೂಡಿಕೆ ವಿಚಾರಗಳ ಕಡೆ ಗಮನಕೊಡಿ. ಶೇರು, ಸೈಟು, ಚಿನ್ನ ಖರೀದಿಗೆ ಈ ದಿನ ಸೂಕ್ತವಾಗಿದೆ. ಸ್ನೇಹಿತರ ಜೊತೆ ಜಗಳ ಒಳ್ಳೆಯದಲ್ಲ.
ಮಕರ ರಾಶಿ: ಕುಟುಂಬದವರ ಸಹಕಾರದಿಂದ ಏಳಿಗೆ ಸಾಧ್ಯವಿದೆ. ಕೆಲಸದ ವಿಷಯದಲ್ಲಿ ಸೋಮಾರಿತನ ಬೇಡ. ಹಳೆಯ ಸ್ನೇಹಿತರನ್ನು ನೆಪಿಸಿಕೊಳ್ಳಿ.
ಕುಂಭ ರಾಶಿ: ನಿಮ್ಮೊಳಗೆ ಹೊಸ ಹೊಸ ಚಿಂತನೆಗಳು ಬರಲಿದೆ. ಉತ್ತಮ ಚಿಂತನೆಗಳನ್ನು ಜಾರಿಗೊಳಿಸಲು ತಡ ಮಾಡಬೇಡಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ.
ಮೀನ ರಾಶಿ: ನಿಮ್ಮ ಮನಸಿಗೆ ಹಿತವಾಗುವ ಕೆಲಸ ಮಾಡಿ. ಜೀವನದಲ್ಲಿ ಯಾವುದು ಮುಖ್ಯ ಎಂಬುದರ ಬಗ್ಗೆ ಚಿಂತಿಸಿ. ಮಾಡುವ ಕೆಲಸದಲ್ಲಿ ಉತ್ತಮ ಫಲ ಸಿಗಲಿದೆ.