ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆದಿರುವುದನ್ನು ಮುಂಬೈಯ ಜಯಪ್ರಕಾಶ್ ಶೆಟ್ಟಿ ಅವರು ಖಂಡಿಸಿದ್ದಾರೆ. ಕ್ಷೇತ್ರದ ಮಹಿಮೆ ಸಾರುವುದಕ್ಕಾಗಿ ಅವರು ಮುಂಬೈಯಿAದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದಾರೆ.
ದೆಹಲಿ, ಅಮೃತಸರ, ಶಬರಮತಿ ಸೇರಿ ದೇಶದ ನಾನಾ ಭಾಗ ಸಂಚರಿಸಿದ ಅವರು ಧರ್ಮಸ್ಥಳ ತಲುಪಿದರು. ಅದಾದ ನಂತರ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಅವರು ಮುಂಬೈಗೆ ತೆರಳುತ್ತಿದ್ದು, ಮಂಗಳವಾರ ಕುಮಟಾಗೆ ಆಗಮಿಸಿದರು. ರಾಷ್ಟçಧ್ವಜ ಹಿಡಿದು ಸಂಚರಿಸುತ್ತಿರುವ ಜಯಪ್ರಕಾಶ ಶೆಟ್ಟಿ ಅವರು ಇಲ್ಲಿಯೂ ತಮ್ಮನ್ನು ಭೇಟಿ ಆದವರಿಗೆ ಧರ್ಮಸ್ಥಳದ ಮಹತ್ವದ ಬಗ್ಗೆ ಅವರು ತಿಳಿಸಿದ್ದಾರೆ.
50ವರ್ಷದ ಜಯಪ್ರಕಾಶ ಶೆಟ್ಟಿ ಅವರು ಈಗಾಗಲೇ ಧರ್ಮಸ್ಥಳ ಪರ ಪ್ರಚಾರ ನಡೆಸಲು 11 ಸಾವಿರ ಕಿಮೀ ಪಾದಯಾತ್ರೆ ಮಾಡಿದ್ದಾರೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಅವರು ಜಯಪ್ರಕಾಶ ಶೆಟ್ಟಿ ಅವರನ್ನು ಮಾತನಾಡಿಸಿದರು. ಆಗ `ಹಸಿದ ಪ್ರತಿಯೊಬ್ಬರಿಗೂ ಧರ್ಮಸ್ಥಳದಲ್ಲಿ ಹೊಟ್ಟೆ ತುಂಬ ಊಟ ಕೊಡಲಾಗುತ್ತದೆ. 15 ರೂಪಾಯಿಗೆ ಇಲ್ಲಿ ವಸತಿ ವ್ಯವಸ್ಥೆ ಸಿಗುತ್ತದೆ. ಆದರೆ, ಕೆಲವರು ಅನಗತ್ಯವಾಗಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುವ ಹಾಗೇ ಮಾಡಿದ್ದಾರೆ. ಅದನ್ನು ಹೋಗಲಾಡಿಸುವ ಪ್ರಯತ್ನವಾಗಿ ಪಾದಯಾತ್ರೆ ನಡೆಸಿದ್ದೇನೆ’ ಎಂದು ಜಯಪ್ರಕಾಶ ಶೆಟ್ಟಿ ಅವರು ಹೇಳಿದರು.
`ಯಾವುದೇ ಧರ್ಮದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವುದು ನೋವು ತಂದಿದೆ. ಶ್ರೀಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರನ್ನು ಆ ಮಂಜುನಾಥ ಸ್ವಾಮಿಯೇ ನೋಡಿಕೊಳ್ಳುತ್ತಾನೆ’ ಎಂದು ಜಯಪ್ರಕಾಶ ಶೆಟ್ಟಿ ಪ್ರತಿಕ್ರಿಯಿಸಿದರು