ಯಲ್ಲಾಪುರದ ಸುಜಾತಾ ಸಿದ್ದಿ ಅವರ ಪುತ್ರಿ ಮಾಲಾ ಸಿದ್ದಿ ಅವರು ಹಳಿಯಾಳದಲ್ಲಿ ಸಾವನಪ್ಪಿದ್ದಾರೆ. ಈ ಸಾವಿನಲ್ಲಿ ಸಂಶಯವಿರುವುದಾಗಿ ಸುಜಾತಾ ಸಿದ್ದಿ ಅವರು ಹೇಳಿದ್ದಾರೆ.
ಸುಜಾತಾ ಸಿದ್ದಿ ಅವರು ಯಲ್ಲಾಪುರದ ಇಡಗುಂದಿಯಲ್ಲಿ ವಾಸವಾಗಿದ್ದಾರೆ. 33 ವರ್ಷದ ಮಾಲಾ ಸಿದ್ದಿ ಅವರನ್ನು ಹಳಿಯಾಳದ ಅಪ್ಪಾರಾವ್ ಸಿದ್ದಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಹಳಿಯಾಳದ ಕುಂಬಾರಕೊಪ್ಪದಲ್ಲಿ ಮಾಲಾ ಸಿದ್ದಿ ಅವರು ವಾಸವಾಗಿದ್ದರು.
ಎರಡು ವರ್ಷದ ಹಿಂದೆ ಮಾಲಾ ಸಿದ್ದಿ ಅವರಿಗೆ ಹೃದಯ ರೋಗ ಕಾಣಿಸಿತ್ತು. ಸಾಕಷ್ಟು ಬಾರಿ ಅವರು ಚಿಕಿತ್ಸೆಪಡೆದಿದ್ದರು. ಅದರಿಂದ ಅವರು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಸೆಪ್ಟೆಂಬರ್ 28ರ ರಾತ್ರಿ ಅವರು ಉಸಿರಾಟ ನಿಲ್ಲಿಸಿದರು. ಸೆಪ್ಟೆಂಬರ್ 29ರ ನಸುಕಿನಲ್ಲಿ ಮಾಲಾ ಸಿದ್ದಿ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿತು.
ಮಾಲಾ ಸಿದ್ದಿ ಅವರು ಹೇಗೆ ಸತ್ತರು? ಎಂದು ಸುಜಾತಾ ಸಿದ್ದಿ ಅವರಿಗೆ ಗೊತ್ತಾಗಲಿಲ್ಲ. ಮಗಳ ಸಾವಿನ ಸಮಗ್ರ ತನಿಖೆಗಾಗಿ ಅವರು ಪೊಲೀಸರ ಮೊರೆ ಹೋದರು. ಸಾವಿನಲ್ಲಿ ಸಂಶಯವಿರುವುದಾಗಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪೊಲೀಸರು ಈ ಬಗ್ಗೆ ವಿಚಾರಿಸುತ್ತಿದ್ದಾರೆ.