ಜನವರಿ 26ರ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದರೆ, ರಾಷ್ಟ್ರೀಯ ಹಬ್ಬದ ಮಹತ್ವ ಅರಿಯದ ಪುಂಡ-ಪೋಕರಿಗಳು ಸಾಲು ಸಾಲು ರಜೆ ಹಿನ್ನಲೆ ಮೋಜು-ಮಸ್ತಿಯ ಕಡೆ ಮನಸ್ಸು ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ದೌಡಾಯಿಸಿದ ಅನೇಕರು ಬೀದಿ ಬೀದಿಯಲ್ಲಿ ಬೀಡಿ-ಸಿಗರೇಟು ಸೇದಿ ಹಬ್ಬದ ವಾತಾವರಣವನ್ನು ಹದಗೆಡಿಸಿದ್ದಾರೆ.
ವಾರಾಂತ್ಯದ ಅವಧಿಯಲ್ಲಿ ಗೋಕರ್ಣಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲಿಯೂ ಸೋಮವಾರವೂ ರಜೆ ಸಿಕ್ಕರೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತದೆ. ಸರ್ಕಾರಿ ನೌಕರರ ಜೊತೆ ಬ್ಯಾಂಕ್ ಸಿಬ್ಬಂದಿ ಸಹ ಹೆಚ್ಚಿನ ಪ್ರಮಾಣದಲ್ಲಿ ಗೋಕರ್ಣಕ್ಕೆ ಬರುತ್ತಿದ್ದು, ಈ ಬಾರಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಬೇಕಾದ ಅನೇಕರು ಕಡಲಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಅದರಲ್ಲಿಯೂ, ಸಾರ್ವಜನಿಕ ಪ್ರದೇಶದಲ್ಲಿ ನಿಷೇಧವಿರುವ ಧೂಮಪಾನ ಹಾಗೂ ಮದ್ಯಪಾನ ಮಾಡುವವರು ಎಲ್ಲಡೆ ಕಾಣಿಸುತ್ತಿದ್ದಾರೆ.
ಮಹಾನಗರದಲ್ಲಿನ ವಿವಿಧ ಕಂಪನಿಯವರು ಸುಧೀರ್ಘ ರಜೆ ಹಿನ್ನಲೆ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದಾರೆ. ಕೆಲ ಕಂಪನಿಯ ಉದ್ಯೋಗಿಗಳು ಕುಟುಂಬಸಹಿತ ಗೋಕರ್ಣಕ್ಕೆ ಬಂದಿದ್ದು, ಅವರ ಮಕ್ಕಳು ಸಹ ಈ ಬಾರಿಯ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿಲ್ಲ. ಸೋಮವಾರ ರಾಷ್ಟಿçÃಯ ಹಬ್ಬ ಬಂದರೆ ಹಬ್ಬ ಆಚರಿಸದೇ ಮೋಜು-ಮಸ್ತಿಗೆ ಬರುವುದು ಇದೇ ಮೊದಲಲ್ಲ. ವಿವಿಧ ಚುನಾವಣೆಗಳಲ್ಲಿ ಮತದಾನವನ್ನು ಸಹ ತಪ್ಪಿಸಿ ಪ್ರವಾಸಕ್ಕೆ ಬರುವವರು ಹೆಚ್ಚಿದ್ದು, ಯುವಕರೇ ಹೆಚ್ಚಿನ ಪ್ರಮಾಣದಲ್ಲಿ ಮೋಜು-ಮಸ್ತಿಗಾಗಿ ಅಲೆದಾಟ ನಡೆಸುತ್ತಿದ್ದಾರೆ.