ಯಲ್ಲಾಪುರ ತೆಲಂಗಾರದ ಕೃಷ್ಣಪ್ರಸಾದ ಶೇಟ್ ಅವರು ಕೋಣಕ್ಕೆ ಬೈಕ್ ಗುದ್ದಿದ್ದು, ಡಿಕ್ಕಿಯ ರಭಸಕ್ಕೆ ಆ ಕೋಣ ಸಾವನಪ್ಪಿದೆ. ಕೃಷ್ಣಪ್ರಸಾದ ಶೇಟ್ ಅವರಿಗೂ
ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಯಲ್ಲಾಪುರದ ಚಿಮ್ನಳ್ಳಿ ಬಳಿಯ ತೆಲಂಗಾರದಲ್ಲಿ ಕೃಷ್ಣಪ್ರಸಾದ ಮಂಜುನಾಥ ಶೇಟ್ ಅವರು ವಾಸವಾಗಿದ್ದಾರೆ. 22 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.ಜನವರಿ 23ರಂದು ಸಹ ಅವರು ವೇಗವಾಗಿ ಬೈಕ್ ಓಡಿಸಿದ ಪರಿಣಾಮ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಆ ದಿನ ಸಂಜೆ ಯಲ್ಲಾಪುರಕ್ಕೆ ಬಂದಿದ್ದ ಕೃಷ್ಣಪ್ರಸಾದ ಶೇಟ್ ಅವರು ರಾತ್ರಿ ಚಿಮ್ನಳ್ಳಿ ಕಡೆ ಹೊರಟಿದ್ದರು. ಬೈಕ್ ಓಡಿಸಿಕೊಂಡು ಹೊರಟ ಅವರಿಗೆ ಬಿದ್ರೆಮನೆ ಕ್ರಾಸಿನ ಬಳಿ ಕೋಣವೊಂದು ಎದುರಾಯಿತು. ಆ ಕೋಣಕ್ಕೆ ಅವರು ಬೈಕ್ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ಕೋಣ ಅಲ್ಲಿಯೇ ಸಾವನಪ್ಪಿತು. ಬೈಕಿನಿಂದ ಬಿದ್ದ ಕೃಷ್ಣಪ್ರಸಾದರಿಗೂ ಪೆಟ್ಟಾಯಿತು.
ಎಡ ಕೈ, ತಲೆ ಹಿಂಭಾಗ ಗಾಯ ಮಾಡಿಕೊಂಡ ಕೃಷ್ಣಪ್ರಸಾದ ಅವರ ಮೂಗಿನಿಂದಲೂ ರಕ್ತ ಸುರಿಯುತ್ತಿತ್ತು. ಅಪಘಾತಕ್ಕೀಡಾದ ಬೈಕ್ ಸಹ ನುಚ್ಚು ನೂರಾಗಿತ್ತು. ಹೆಂಡತಿಯ ತಮ್ಮನಿಗೆ ಆದ ಅಪಘಾತದ ಬಗ್ಗೆ ಅರಿತು ಯಲ್ಲಾಪುರದ ದೇಹಳ್ಳಿ ಬಳಿಯ ಕುಂಬ್ರಾಳದ ಮಂಜುನಾಥ ಶ್ರೀಧರ ಮಹಾಲೆ ಅವರು ಸ್ಥಳಕ್ಕೆ ದೌಡಾಯಿಸಿದರು. ಅಪಘಾತ ನೋಡಿದವರಿಂದ ಮಾಹಿತಿಪಡೆದು ಪೊಲೀಸ್ ದೂರು ದಾಖಲಿಸಿದರು.
ಮನವಿ: ಈ ಅಪಘಾತದಲ್ಲಿ ಗಾಯಗೊಂಡ ಕೃಷ್ಣಪ್ರಸಾದ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಂಜುನಾಥ ಮಹಾಲೆ ಅವರು ದಾಖಲೆ ಹಂಚಿಕೊAಡಿದ್ದು, ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
`ಅತಿ ವೇಗ ಅಪಾಯಕ್ಕೆ ಕಾರಣ’