ಶಿರಸಿಯ ಪ್ರವೀಣ ಭೋವಿ ಅವರ ಲಾರಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದ ಆಕಾಶ ಮಾಳಿ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಎರಡು ದಿನ ಆರೈಕೆ ಮಾಡಿದರೂ ಅವರು ಬದುಕಲಿಲ್ಲ.
ಶಿರಸಿ ಕಸ್ತೂರಿಬಾ ನಗರದ ಸೂಫಾ ಸರ್ಕಲ್ ಬಳಿ ಆಕಾಶ ಮಾಳಿ (33) ಅವರು ವಾಸವಾಗಿದ್ದರು. ಚಾಲಕರಾಗಿ ಪರಿಣಿತಿಪಡೆದಿದ್ದ ಅವರು ಕೆಲಸ ಅರೆಸಿ ಗಣೇಶ ನಗರದ ಪ್ರವೀಣ ಭೋವಿ ಅವರ ಬಳಿ ಹೋಗಿದ್ದರು. ಪ್ರವೀಣ ಭೋವಿ ಅವರು ಆಕಾಶ ಮಾಳಿ ಅವರಿಗೆ ತಮ್ಮ ಲಾರಿ ಕೊಟ್ಟು ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದರು. ಹೀಗಾಗಿ ಆಕಾಶ ಮಾಳಿ ಅವರು ಕಳೆದ ಐದಾರು ತಿಂಗಳಿನಿoದ ಪ್ರವೀಣ ಬೋವಿ ಅವರ ಲಾರಿಗೆ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು.
ಈಚೆಗೆ ಆಕಾಶ ಮಾಳಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಅವರ ಸಮಸ್ಯೆ ಏನು ಎಂದು ಯಾರಿಗೂ ಹೇಳಿರಲಿಲ್ಲ. ಸಾಕಷ್ಟು ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆಕಾಶ ಮಾಳಿ ಅವರು ಮನಸ್ಸಿಗೆ ಬೇಸರವಾಗಿದ್ದ ಕಾರಣ ಸೆಪ್ಟೆಂಬರ್ 29ರ ಮಧ್ಯಾಹ್ನ ಶಿರಸಿ ಬನವಾಸಿ ರಸ್ತೆಯ ಟಿಪ್ಪು ನಗರ ಕಾಲೇಜಿನ ಬಳಿ ಹೋಗಿದ್ದರು. ಅಲ್ಲಿಯೇ ಅವರು ಯಾವುದೋ ವಿಷ ಪದಾರ್ಥ ಸೇವಿಸಿದರು.
ತೀವೃ ಪ್ರಮಾಣದಲ್ಲಿ ಅಸ್ವಸ್ಥರಾದ ಆಕಾಶ ಮಾಳಿ ಅವರನ್ನು ಶಿರಸಿಯ ಪಂಡಿತ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ಯಲಾಯಿತು. ಎರಡು ದಿನಗಳ ಕಾಲ ಅವರಿಗೆ ನಿರಂತರ ಆರೈಕೆ ನಡೆಯಿತು. ಕೊನೆಕ್ಷಣದವರೆಗೂ ಆಕಾಶ ಮಾಳಿ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ.
ಅಕ್ಟೊಬರ್ 1ರ ನಸುಕಿನಲ್ಲಿ ಆಕಾಶ ಮಾಳಿ ಅವರು ಸಾವನಪ್ಪಿದರು. ಅವರ ಜೊತೆ ಆ ಸಾವಿನ ಕಾರಣವೂ ಸಾವನಪ್ಪಿತು. ಹೀಗಾಗಿ ಆಕಾಶ ಮಾಳಿ ಅವರ ಸಾವಿನ ವಿಷಯದಲ್ಲಿ ಸಂಶಯ ಕಾಡಿತು. ಆಕಾಶ ಮೌಳಿ ಅವರ ತಂದೆ ಜಗದೀಶ ಮಾಳಿ ಅವರು ಸಾವಿನ ಬಗ್ಗೆ ಸಂಶಯವಿರುವುದಾಗಿ ಪೊಲೀಸರಿಗೆ ತಿಳಿಸಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸುವ ಉದ್ದೇಶದಿಂದ ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’