ರಸ್ತೆ ಅಂಚಿನಲ್ಲಿ ನಡೆದುಹೋಗುತ್ತಿದ್ದ ವೃದ್ಧೆಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದು, ಇದನ್ನು ನೋಡಿದ ಗೋಕರ್ಣ ಪೊಲೀಸರು ಆಕೆಯನ್ನು ಉಪಚರಿಸಿ ಸಂಬoಧಿಕರ ಮನೆಗೆ ಕಳುಹಿಸಿದ್ದಾರೆ.
ಮಂಗಳವಾರ ಮಾರುಕಟ್ಟೆಗೆ ಬಂದಿದ್ದ ವೃದ್ಧೆ ಓಂ ಹೋಟೆಲ್ ಬಳಿ ಕುಸಿದು ಬಿದ್ದರು. ತಾರಿಮಕ್ಕಿ ರಸ್ತೆ ಬದಿ ಮಲಗಿದ್ದ ಅವರನ್ನು ಹರೀಶ್ ಕಾಮತ್ ಅವರು ನೋಡಿದರು. ಈ ಬಗ್ಗೆ ಅವರು ಪೊಲೀಸರು ಹಾಗೂ ಮಾಧ್ಯಮದವರಿಗೆ ವಿಷಯ ಮುಟ್ಟಿಸಿದರು.
ADVERTISEMENT
ಪಿಐ ಶ್ರೀಧರ್ ಹಾಗೂ ಹವಲ್ದಾರ್ ಜಟ್ಟಪ್ಪ ನಾಯ್ಕ ಅವರು ಅಲ್ಲಿಗೆ ಧಾವಿಸಿ ಬಂದರು. ಎಎಸ್‌ಐ ಸುನಿಲ ಕುಡ್ತಳಕರ್, ಲಕ್ಷಿ ಗುನಗ ಆಗಮಿಸಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಆ ಮಹಿಳೆ ಕುಮಟಾದ ಅನುಸೂಯಾ ಹುಲಸ್ವಾರ್ ಎಂದು ಗೊತ್ತಾಗಿದ್ದು, ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ನಂತರ ಪೊಲೀಸರು ರಿಕ್ಷಾ ಮಾಡಿಸಿ ಆ ವೃದ್ಧೆಯನ್ನು ಮಾದನಗೇರಿಯಲ್ಲಿರುವ ಅಳಿಯನ ಮನೆಗೆ ಕಳುಹಿಸಿದರು. ಪೊಲೀಸರ ಈ ನಡೆಯನ್ನು ಊರಿನ ಜನ ಪ್ರಶಂಸಿಸಿದರು.
ADVERTISEMENT
Discussion about this post