ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಂಕೋಲಾ ಅಗಸೂರಿನ ಚೇತನ ಗೌಡ ಅವರು ಅದಕ್ಕೆ ಯೋಗ್ಯ ಚಿಕಿತ್ಸೆಪಡೆಯುವ ಬದಲು ಸಾವಿನ ಹಾದಿ ಹಿಡಿದಿದ್ದಾರೆ.
ಚೇತನ ಗೌಡ (16) ಅವರಿಗೆ ಈಚೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಪಾಸಣೆ ನಡೆಸಿದಾಗ ಕಿಡ್ನಿ ಸಮಸ್ಯೆ ಬಗ್ಗೆ ಅರಿವಿಗೆ ಬಂದಿತ್ತು. ಅನಾರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದ ಅವರು ಕಾಲೇಜಿಗೆ ಹೋಗಿ ಬರುವುದನ್ನು ತಪ್ಪಿಸಿರಲಿಲ್ಲ.
ADVERTISEMENT
ಜುಲೈ 8ರಂದು ಸಹ ಅವರು ಕಾಲೇಜಿಗೆ ಹೋಗಿ ಮನೆಗೆ ಮರಳಿದ್ದರು. ಅದಾದ ನಂತರ ಮನೆಯಲ್ಲಿದ್ದ ಸೀರೆ ಬಳಸಿ ನೇಣು ಹಾಕಿಕೊಂಡರು. ಇದನ್ನು ನೋಡಿದ ಚೇತನ ಗೌಡ ಅವರ ತಂದೆ ಬೊಮ್ಮ ಗೌಡ ಅವರು ಮಗನನ್ನು ಬದುಕಿಸುವ ಪ್ರಯತ್ನ ಮಾಡಿದರು.
ADVERTISEMENT
ಚೇತನ ಗೌಡ ಅವರನ್ನು ಅಂಕೋಲಾ ಆಸ್ಪತ್ರೆಗೆ ಕರೆತಂದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
Discussion about this post