20 ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದ ಕುಮಟಾ ಉಪ್ಪಾರಕೇರಿಯ ವಿನಾಯಕ ಅಡಕೊಳ್ಳಿ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಐದು ದಿನಗಳ ನಂತರ ಅವರು ಬಾವಿಗೆ ಬಿದ್ದ ವಿಷಯ ಹೊರ ಪ್ರಪಂಚಕ್ಕೆ ಗೊತ್ತಾಗಿದೆ.
ಕುಮಟಾದ ಹೊಸ ಬಸ್ ನಿಲ್ದಾಣದ ಬಳಿ ವಿನಾಯಕ ಅಡಕೊಳ್ಳಿ ಅವರು ವಾಸವಾಗಿದ್ದರು. ಕಳೆದ 20 ವರ್ಷಗಳಿಂದ ಅವರು ಅಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮಾನಸಿಕವಾಗಿಯೂ ಅವರು ಕುಗ್ಗಿದ್ದರು. ತೀರಾ ಅಸ್ವಸ್ಥರಂತೆ ವರ್ತಿಸುತ್ತಿದ್ದರು.
ಸೆಪ್ಟೆಂಬರ್ 27ರಂದು ಮಧ್ಯಾಹ್ನ 12 ಗಂಟೆ ಆಸುಪಾಸಿನಲ್ಲಿ ಜನ ಅವರನ್ನು ನೋಡಿದ್ದರು. ಅಕ್ಟೊಬರ್ 2ರಂದು ಅವರು ಉಪ್ಪಾರಕೇರಿಯ ಬಾವಿಯಲ್ಲಿ ತೇಲುತ್ತಿದ್ದರು. ಅವರನ್ನು ಮೇಲೆತ್ತಿದಾಗ ಜೀವ ಇರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡ ಅನುಮಾನ ಕಾಡುತ್ತಿದೆ.
ಈ ವಿಷಯವನ್ನು ವಿನಾಯಕ ಅಡಕೊಳ್ಳಿ ಅವರ ಬಾವ ವಿಷ್ಣು ಸಭಾಹಿತ ಅವರು ಪೊಲೀಸರಿಗೆ ತಿಳಿಸಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.