ಶಿರಸಿಯ ರವೀಶ ನಾಯ್ಕ ಅವರ ಮನೆಗೆ ಹೋಗುವ ದಾರಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕ, ಹಣ್ಣಿನ ಅಂಗಡಿ ಮಾಲಕ, ಕಟ್ಟಡ ಕಾರ್ಮಿಕ, ಪೆಂಡಾಲ್ ಕೆಲಸಗಾರ ಸೇರಿ ಆರು ಜನ ಸಿಕ್ಕಿಬಿದ್ದಿದ್ದಾರೆ.
ಸೆಪ್ಟೆಂಬರ್ 1ರ ರಾತ್ರಿ ಶಿರಸಿ ಮೇಲಿನ ಓಣಿಕೇರಿ ಮಂಗನಮಕ್ಕಿ ಬಳಿ ಕೆಲವರು ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ ಅವರು ತಮ್ಮ ಸಿಬ್ಬಂದಿ ಜೊತೆ ಅಲ್ಲಿಗೆ ಹೋದರು. ಆಗ ಮಂಗನಮಕ್ಕಿ ಕಾನಮೂಲೆಯಲ್ಲಿ ಪೆಂಡಾಲ್ ಕೆಲಸ ಮಾಡುವ ರವೀಶ ಮಾಸ್ತಿ ನಾಯ್ಕ ಅವರು ಇಸ್ಪಿಟ್ ಆಡಿಸುತ್ತಿದ್ದರು.
ಕಕ್ಕಳ್ಳಿ ಶಿರಗುಣಿಯ ಅಣ್ಣಪ್ಪ ಪುಟ್ಟ ಗೌಡ, ಇಂದಿರಾನಗರದ ಬಳಿಯ ಕನವಳ್ಳಿಯ ಹಣ್ಣಿನ ವ್ಯಾಪಾರಿ ನದೀಮ್ ನಹಿಮ್, ಕನವಳ್ಳಿಯ ಗೌಂಡಿ ಸರ್ಫರಾಜ ಹಸನಸಾಬ್ ಶೇಖ್
ವಾನಳ್ಳಿಯ ಕೂಲಿ ಕಾರ್ಮಿಕ ಮಂಜಾ ಸರವ್ ಗೌಡ ಹಾಗೂ ವಾನಳ್ಳಿಯ ಚಂದ್ರಶೇಖರ ರಾಮ ಶೇರುಗಾರ ಅವರು ಇಸ್ಪಿಟ್ ಎಲೆಗಳ ಜೊತೆ ದುಡ್ಡು ಹರಡಿ ಕೂತಿದ್ದರು. ಪಿಎಸ್‌ಐ ಸಂತೋಷಕುಮಾರ ಎಂ ಅವರು ಆ ಎಲ್ಲರ ಮೇಲೆ ದಾಳಿ ನಡೆಸಿದರು.
ಈ ವೇಳೆ ಅಲ್ಲಿದ್ದ ಇಸ್ಪಿಟ್ ಎಲೆ, 6420ರೂ ಹಣ ಸಿಕ್ಕಿತು. ಜೊತೆಗೆ ಇಸ್ಪಿಟ್ ಆಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದರು. ಕಾನೂನುಬಾಹಿರ ಆಟ ಆಡಿದ ಕಾರಣ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.