• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026
  • Home
  • Janamata
Wednesday, August 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ವರ ದಕ್ಷಿಣೆಗಾಗಿ ಚಿತ್ರಹಿಂಸೆ: ಕಾರಿನ ಆಸೆಗೆ ಕಂದಮ್ಮನ ಕೊಲೆ!

Achyutkumar by Achyutkumar
February 23, 2026
Share on FacebookShare on WhatsappShare on Twitter

ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರೂ ಕಾರು ಕೊಡಿಸುವಂತೆ ಪತ್ನಿಗೆ ಕಾಡಿಸುತ್ತಿದ್ದ ಶಿರಸಿಯ ಜಾವೇದ್ ಅಕ್ತರ್ ಅವರು ಕಾರು ಸಿಗದ ಕಾರಣ ಸಬೀಹಾಭಾನು ಅವರ ಹೊಟ್ಟೆಗೆ ಒದ್ದಿದ್ದಾರೆ. ಪರಿಣಾಮ ಒಂದುವರೆ ತಿಂಗಳ ಭ್ರೂಣ ಅಲ್ಲಿಯೇ ಅಸುನೀಗಿದೆ!

ADVERTISEMENT

ಶಿರಸಿಯ ಗೌಡಳ್ಳಿಯ ಸೋಫಿಯಾ ನಗರದಲ್ಲಿ ಜಾವೇದ್ ಅಕ್ತರ್ ಅಬ್ದುಲ್ ಶಕುರ್ ಅವರು ವಾಸವಾಗಿದ್ದಾರೆ. ಅಬುದಾಬಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿರುವ ಅವರಿಗೆ ಕೈ ತುಂಬ ಸಂಬಳ ಸಿಗುತ್ತಿದೆ. 2025ರ ಜೂನ್ 1ರಂದು ಅವರು ಶಿರಸಿ ಕಸ್ತೂರಿಬಾ ನಗರದ ಸಬಿಹಾಭಾನು ಅವರನ್ನು ಮದುವೆ ಆಗಿದ್ದಾರೆ. ಮದುವೆ ವೇಳೆ 16 ತೊಲೆ ಬಂಗಾರವನ್ನು ಸಹ ಪಡೆದಿದ್ದಾರೆ. ಅದಾಗಿಯೂ ತವರು ಮನೆಯಿಂದ ಕಾರು ಕೊಡಿಸುವಂತೆ ಜಾವೇದ್ ಅಕ್ತರ್ ಅವರು ಸಬೀಹಾಭಾನು ಅವರಿಗೆ ಕಾಡಿಸುತ್ತಿದ್ದು, ಆರು ತಿಂಗಳಾದರೂ ಕಾರು ಸಿಗದ ಕಾರಣ ಸಬಿಹಾಭಾನು ಅವರ ತವರುಮನೆಗೆ ಹೋಗಿ ಕೂಗಾಡಿದ್ದಾರೆ. ಅದಾದ ನಂತರ ಸಬೀಹಾಭಾನು ಅವರ ಜೊತೆ ಜಾವೇದ್ ಅಕ್ತರ್ ಅವರು ಗೌಡಳ್ಳಿಯಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ತಿಂಗಳು ಕಳೆದ ನಂತರ ಜಾವೇದ್ ಅಕ್ತರ್ ಅವರು ಪತ್ನಿ ಸಬೀಹಾಭಾನು ಅವರನ್ನು ಗೌಡಳ್ಳಿಯಲ್ಲಿಯೇ ಬಿಟ್ಟು ದುಡಿಮೆಗಾಗಿ ಅಬುದಾಬಿಗೆ ಹೋರಟರು. `ಆದಷ್ಟು ಬೇಗ ನಿನ್ನನ್ನು ಕರೆಯಿಸಿಕೊಳ್ಳುವೆ’ ಪತಿ ನೀಡಿದ್ದ ಭರವಸೆ ಆಧಾರದಲ್ಲಿ ಸಬಿಹಾಭಾನು ಅವರು ಶಿರಸಿಯಲ್ಲಿಯೇ ಉಳಿದಿದ್ದು, ಸಬಿಹಾಭಾನು ಅವರಿಗೆ ಆಗ ಅತ್ತೆ-ನಾದಿನಿಯ ಕಾಟ ಶುರುವಾಯಿತು. ಅತ್ತೆ ಆಹಿಶಾಬಿ ಅಬ್ದುಲ್ ಶಕೂರ್, ನಾದಿನಿ ರೇಷ್ಮಾಬಾಬು ಇಜಾನ್ ಸೇರಿ ನಿತ್ಯವೂ ಸಬೀಹಾಭಾನು ಅವರಿಗೆ ನಿಂದಿಸಲು ಶುರು ಮಾಡಿದರು. ಕಾರು-ಹಣ ತರುವಂತೆ ಅವರು ಕಾಡಿಸುತ್ತಿದ್ದರು. ತವರು ಮನೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಅದಾಗಿಯೂ ಸಬೀಹಾಭಾನು ಅವರು ಅದನ್ನು ಸಹಿಸಿಕೊಂಡಿದ್ದರು.

ಈ ಎಲ್ಲದರ ನಡುವೆ ಸಬೀಹಾಭಾನು ಅವರಿಗೂ ವಿದೇಶಕ್ಕೆ ಹೋಗುವ ಯೋಗ ಕೂಡಿಬಂದಿತು. 2025ರ ಅಗಸ್ಟ್ ಅವಧಿಯಲ್ಲಿ ಸಬೀಹಾಭಾನು ಅವರು ಪತಿ ಜೊತೆ ಅಬುದಾಬಿಗೆ ಹೋದರು. ಅಲ್ಲಾದರೂ ನೆಮ್ಮದಿಯಾಗಿರೋಣ ಎಂದು ಭಾವಿಸಿದ್ದ ಸಬೀಹಾಭಾನು ಅವರ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕಾರಣ, ಅತ್ತೆ ಆಯಿಶಾಬಿ ಶೇಕರ್ ಅವರು ಸಹ ಮಗ-ಸೊಸೆಯ ಜೊತೆ ಅಬುದಾಬಿಗೆ ಬಂದಿದ್ದು, ಅಲ್ಲಿಯೂ ಸಬೀಹಾಭಾನು ಅವರಿಗೆ ತೊಂದರೆ ಕೊಡುವುದನ್ನು ಬಿಡಲಿಲ್ಲ. ಅಬುದಾಬಿಯಲ್ಲಿ ಸಬೀಹಾಭಾನು ಅವರ ಬಳಿಯಿದ್ದ ತವರು ಮನೆಯ ಉಡುಗರೆಯನ್ನು ಆಯಿಶಾಬಿ ಶೇಕರ್ ಅವರು ಕಸಿದುಕೊಂಡಿದ್ದು, 31ತೊಲೆಯಷ್ಟು ಚಿನ್ನಾಭರಣಗಳನ್ನು ಸಹ ಕಿತ್ತುಕೊಂಡಿದ್ದಾರೆ. ಮಾನಸಿಕ ಹಿಂಸೆ ಸಹಿಸದ ಸಬೀಹಾಭಾನು ಅವರು ಅದನ್ನು ವಿರೋಧಿಸಿದಾಗ ಪತಿ ಜೊತೆ ಅತ್ತೆಯೂ ಸೇರಿ ದೈಹಿಕ ಹಿಂಸೆ ನೀಡಿದ್ದಾರೆ. ಈ ನಡುವೆ ಜಾವೇದ್ ಅಕ್ತರ್ ಅವರಿಗೆ ಈವರೆಗೂ ಕಾರು ಕೊಡಸದಿರುವುದು ನೆನಪಾಗಿದ್ದು, 2025ರ ಜನವರಿ 1ರಂದು ಪತ್ನಿ ಜೊತೆ ಜಗಳ ಶುರು ಮಾಡಿದರು. ಈ ವೇಳೆ ಸಬೀಹಾಭಾನು ಅವರ ಹೊಟ್ಟೆಗೆ ಒದ್ದಿದ್ದು, ಆ ವೇಳೆ ಹೊಟ್ಟೆಯಲ್ಲಿದ್ದ ಒಂದುವರೆ ತಿಂಗಳ ಹಸುಗೂಸು ಅಲ್ಲಿಯೇ ಸಾವನಪ್ಪಿತು. ಗರ್ಭಪಾತವಾಗಿ ರಕ್ತ ಚೆಲ್ಲಿದರೂ ಸಬೀಹಾಭಾನು ಅವರನ್ನು ಆಸ್ಪತ್ರೆಗೆ ದಾಖಲಿಸುವವರಿರಲಿಲ್ಲ. ಅಬುದಾಬಿಯಲ್ಲಿ ಪರಿಚಿತರೂ ಇಲ್ಲದ ಕಾರಣ ಸಬೀಹಾಭಾನು ಅವರಿಗೆ ಸಹಾಯ ಸಿಗಲಿಲ್ಲ.ಹೀಗಾಗಿ ಅವರು ಎಲ್ಲಾ ನೋವನ್ನು ಸಹಿಸಿಕೊಂಡಿದ್ದು, ಅವರ ಮೇಲಿನ ಚಿಂತ್ರಹಿAಸೆ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ರಕ್ತದ ಮಡುವಿನಲ್ಲಿ ಸಬೀಹಾಭಾನು ಬಿದ್ದಿರುವುದನ್ನು ನೋಡಿಯೂ ಅವರ ಪತಿ ಹಾಗೂ ಅತ್ತೆ ಮನೆಯಿಂದ ಹೊರ ಹೋದರು. ರಾತ್ರಿ ಮನೆಗೆ ಬಂದಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸಬೀಹಾಭಾನು ಅವರು ಅಂಗಲಾಚಿದ್ದು, ಅಮ್ಮ-ಮಗ ಸೇರಿ ಸಬೀಹಾಭಾನು ಅವರನ್ನು ಮನೆಯಿಂದ ಹೊರದಬ್ಬಿದರು. ಅದಾದ ನಂತರ ಸಬಿಹಾಭಾನು ಅವರು ಭಾರತದಲ್ಲಿರುವ ತಾಯಿಗೆ ಫೋನ್ ಮಾಡಿದ್ದು, ಅವರ ಸಲಹೆ ಮೇರೆಗೆ ನೋವು ಸಹಿಸಿಕೊಳ್ಳುವ ಔಷಧೋಪಚಾರ ಮಾಡಿಕೊಂಡರು.

`ಭಾರತಕ್ಕೆ ಮರಳು’ ಎಂದು ಪತಿ ಹಾಗೂ ಅತ್ತೆ ಪದೇ ಪದೇ ಹಿಂಸಿಸುತ್ತಿದ್ದು, `ಅಲ್ಲಾದರೂ ಕಳುಹಿಸಿಕೊಡಿ’ ಎಂದು ಸಬೀಹಾಭಾನು ಮನವಿ ಮಾಡಿದರು. ಅದರ ಪ್ರಕಾರ ಸಬೀಹಾಭಾನು ಅವರು ಒಂಟಿಯಾಗಿ ಮುಂಬೈ ವಿಮಾನ ನಿಲ್ದಾಣ ತಲುಪಿದ್ದು, ಅವರ ತಂದೆ ಜೊತೆ ಶಿರಸಿಗೆ ಬಂದರು. ಎರಡು ದಿನ ಬಿಟ್ಟು ಸಬೀಹಾಭಾನು ಅವರ ಅತ್ತೆಯೂ ಶಿರಸಿಗೆ ಮರಳಿದ್ದು, ಊರಿನವರೆಲ್ಲರೂ ಸೇರಿ ಒಡೆದ ಕುಟುಂಬ ಒಂದು ಮಾಡುವ ಪ್ರಯತ್ನ ಮಾಡಿದರು. ಆದರೆ, ಅದಕ್ಕೆ ಆಹಿಶಾಬಿ ಅಬ್ದುಲ್ ಶಕೂರ್ ಅವರು ಅವಕಾಶ ಕೊಡಲಿಲ್ಲ. ಗೌಡಳ್ಳಿಗೆ ಬಂದಿದ್ದ ಸೊಸೆಯನ್ನು ಮನೆಯೊಳಗೂ ಬಿಟ್ಟುಕೊಳ್ಳಲಿಲ್ಲ. ಮಗಳಿಗೆ ಆದ ಅನ್ಯಾಯದ ಬಗ್ಗೆ ಅಬ್ದುಲ್ ರಜಾಕ್ ಅವರು ಜಮಾತ್ ಮೊರೆ ಹೋದರು. ರೆಮಹತಿಯಾ ಮಸೀದಿಯಲ್ಲಿ ಅವರು ಈ ಎಲ್ಲಾ ವಿಷಯದ ಬಗ್ಗೆ ವಿವರಿಸಿದರು. ಜಮಾತ್ ಅಧ್ಯಕ್ಷ ನಾಸೀರಖಾನ್ ಅದಮಾ ಪಠಣ, ಅಬ್ದುಲ್ ಜಾಫರ್ ಶುಂಠಿ, ಅಬ್ದುಲ್ ಸುಬಾನ್ ಅಂಡಗಿ, ಜಬೀ ಅಮಿನುಲ್ಲಾ ಪಠಾಣ್, ಮನಪಾಸಾಬ್ ಮಹಮದ್ ಸಾಬ್ ಲಂಡಕನಳ್ಳಿ ಎಲ್ಲರೂ ಸೇರಿ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಸಬೀಹಾಭಾನು ಹಾಗೂ ಜಾವೇದ್ ಅಕ್ತರ್ ಕುಟುಂಬದವರನ್ನು ಕರೆಯಿಸಿ ಮಾತನಾಡಿಸಿದರು. ಆದರೆ, ಅಲ್ಲಿಗೆ ಬಂದಿದ್ದ ಅತ್ತೆ ಆಹಿಶಾಬಿ ಜಮಾತ್ ಅವರ ಬಗ್ಗೆಯೇ ನಿಂದನೆಯ ಮಾತುಗಳನ್ನಾಡಿದರು. ಸಬೀಹಾಭಾನು ಅವರ ನಾದಿನಿಯರಾದ ರೇಷ್ಮಾಭಾನು ಇಮಾಜ್, ಹಷ್ಮಿತ್ ಮಹಮದ್ ನಯೀಂ, ಆಕೆಯ ಪತಿ ಮಹಮದ್ ನಯೀಂ, ಅತ್ತೆಯ ಸಹೋದರರಾದ ಇಮ್ಮಿಯಾಜ ಖಾನ್ ಇಬ್ರಾಹಿಂ ಖಾನ್, ಜೆಬಾನ್ ಜಹೀರ್ ಅಹ್ಮದ್ ಬನವಾಸಿ, ಅಬ್ದುಲ್ ರಹಿಂ, ಹಸನಸಾಬ್ ಪಟೇಲ್ ಸೇರಿ ಅಲ್ಲಿಯೇ ಸಬೀಹಾಭಾನು ಅವರ ಮೇಲೆ ಹಲ್ಲೆ ನಡೆಸಿದರು. ಅಲ್ಲಿದ್ದ ಅಬ್ದಲ್ ರಜಾಕ್, ಮಹಮದ್ ಅಲಿ ಭಾವಿಕಟ್ಟಿ, ಸರ್ಫರಾಜ್ ತಿಲವಳ್ಳಿ ಅವರು . ಸಬೀಹಾಭಾನು ಅವರನ್ನು ರಕ್ಷಿಸಿ ಜೀವ ಕಾಪಾಡಿದರು. ಅದಾಗಿಯೂ ಎದುರುದಾರರು ಕೊಲೆ ಮಾಡುವ ಬೆದರಿಕೆ ಒಡ್ಡಿದರು.

ಆರೋಪಿತರು

ಈ ಎಲ್ಲದರ ನಡುವೆ ಸಬೀಹಾಭಾನು ಅವರಿಗೆ ಅನಾರೋಗ್ಯ ಕಾಡಿತು. ಅವರು ಬಂಕಾಪುರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಆಶ್ರಯಪಡೆದಿದ್ದು, ಚಿಕಿತ್ಸೆ ವೇಳೆ ಗರ್ಭಪಾತ ನಡೆದಾಗ ಆದ ಪ್ರಮಾದದಿಂದ ಗರ್ಭಕ್ಕೆ ಸೊಂಕು ಬಂದಿರುವ ಬಗ್ಗೆ ವೈದ್ಯರು ತಿಳಿಸಿದರು. ಈವರೆಗೆ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದ್ದ ಸಬೀಹಾಭಾನು ಅವರು ತಮ್ಮ ಸಂಸಾರ ಸರಿಪಡಿಸುವುದಕ್ಕಾಗಿ ಸಾಕಷ್ಟು ಓಡಾಟ ನಡೆಸಿದ್ದು, ಅದು ಸಾಧ್ಯವಾಗದ ಕಾರಣ ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ಪೊಲೀಸ್ ದೂರು ನೀಡಿದರು. ಸದ್ಯ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಜಾವೇದ್ ಅಕ್ತರ್, ಆಯಿಷಾಬಿ ಶೇಕರ್, ರೇಷ್ಮಾಭಾನು ಎಜಾಜ್, ಹಷ್ಮಿತ್ ಮಹಮದ್ ನಯಿಂ, ಮಹಮದ್ ನಯಿಂ, ಇಮ್ತಿಯಾಜ್ ಇಬ್ರಾಹಿಂ ಖಾನ್, ಜೆಬಾನ್ ಜಹೀರ್ ಅಹಮದ್ ಹಾಗೂ ಅಬ್ದುಲ್ ರಹಿಂ ಹಸನಸಾಬ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

A new strategy for public service!

ಪ್ರಜಾ ಸೇವೆಗೆ ಹೊಸ ತಂತ್ರ!

August 11, 2026
Sirsi Dignitaries step into the paddy field

ಶಿರಸಿ | ಗದ್ದೆಗೆ ಇಳಿದ ಗಣ್ಯರು

August 11, 2026
Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

August 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಯಲ್ಲಾಪುರ | ಎಲ್ಲಾ ಬಗೆಯ ಬಟ್ಟೆಗಳ ಮೇಲೆ ಭಾರೀ ಡಿಸ್ಕೌಂಟ್!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!