ಬಾಯಾರಿಕೆ ಕಾರಣ ನೀರು ಕುಡಿಯಲು ಕಾಳಿ ನದಿ ಅಂಚಿಗೆ ಬಂದ ಜಿಂಕೆ ಹಸಿವಿನಿಂದ ಬಳಲುತ್ತಿದ್ದ ಮೊಸಳೆಯ ಬಾಯಿಗೆ ಬಿದ್ದಿದೆ. ಹೊಟ್ಟೆತುಂಬ ನೀರು ಕುಡಿದ ಜಿಂಕೆಯನ್ನು ಮೊಸಳೆ ಭಕ್ಷಿಸಿದೆ.
ADVERTISEMENT
ದಾಂಡೇಲಿಯ ಕಾಳಿ ನದಿ ಅಂಚಿನಲ್ಲಿ ಮೊಸಳೆ ಆಹಾರ ಅರೆಸಿ ಕುಳಿತಿತ್ತು. ಇದನ್ನು ಅರಿಯದ ಜಿಂಕೆ ನೀರು ಕುಡಿಯಲು ಅಲ್ಲಿಯೇ ಆಗಮಿಸಿತು. ನಿಧಾನವಾಗಿ ಜಿಂಕೆ ಬಳಿ ಆಗಮಿಸಿದ ಮೊಸಳೆ ಒಮ್ಮೆಗೆ ಅದನ್ನು ನದಿ ಕಡೆ ಎಳೆಯಿತು. ನದಿಯಿಂದ ಮೇಲೆ ಬರಲು ಜಿಂಕೆ ಸಾಕಷ್ಟು ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ADVERTISEMENT
ನದಿ ದಡದಲ್ಲಿದ್ದ ನಗರಸಭೆಯ ಸಿಬ್ಬಂದಿ ರಮೇಶ ಮತ್ತು ಪರಶುರಾಮ ಅವರು ಇದನ್ನು ನೋಡಿದರು. ಜಿಂಕೆಯನ್ನು ರಕ್ಷಿಸಲು ಅವರು ಪ್ರಯತ್ನ ಮಾಡಿದರು. ಆದರೆ, ಮೊಸಳೆಯೂ ನದಿ ಆಳಕ್ಕೆ ಜಿಂಕೆ ಎಳೆದೊಯ್ದಿದ್ದು, ಅಲ್ಲಿಂದ ದಡಕ್ಕೆ ಬರಲು ಜಿಂಕೆ ಬಳಿ ಸಾಧ್ಯವಾಗಲಿಲ್ಲ. ಕೊನೆಕ್ಷಣದವರೆಗೆ ಹೋರಾಟ ನಡೆಸಿದರೂ ಜಿಂಕೆ ಬದುಕಲಿಲ್ಲ.
Discussion about this post