`ವಿದೇಶದಲ್ಲಿ ಕೈ ತುಂಬ ಸಂಬಳ ಸಿಗುತ್ತಿದ್ದರೂ ಅದನ್ನು ಬಿಟ್ಟು ತವರಿಗೆ ಮರಳಿದ ವಿಶಾಲ ವಾಳಂಬಿ ಅವರು ಕಟ್ಟಡ ನಿರ್ಮಾಣ ಕಾಯಕದ ಮೂಲಕ ಅನೇಕರಿಗೆ ಉದ್ಯೋಗ ನೀಡಿದ್ದಾರೆ. ಸದ್ಯ ಅವರು ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಅದನ್ನು ಸಹಿಸದೇ ಅನಗತ್ಯ ಆರೋಪ ಮಾಡುವುದು ಸರಿಯಲ್ಲ’ ಎಂದು ಮಂಜುನಾಥ ನಗರದ ಸತೀಶ ನಾಯ್ಕ ಅವರು ಹೇಳಿದ್ದಾರೆ.
`ಕಡಿಮೆ ದರದಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು’ ಎಂಬ ಕನಸು ಹೊತ್ತು ವಿಶಾಲ ವಾಳಂಬಿ ಅವರು ದುಡಿಯುತ್ತಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಮಹತ್ವದ ಸಾಧನೆ ಮಾಡಿದ್ದಾರೆ. ಬಡತನವನ್ನು ಮೀರಿ ಬೆಳೆದು ನಿಂತಿರುವ ವಿಶಾಲ ವಾಳಂಬಿ ಅವರು ಸಾಧನೆಯ ಮೂಲಕವೇ ತಮ್ಮ ಕನಸ್ಸನ್ನು ಸಕಾರಮಾಡಿಕೊಂಡಿದ್ದು, ದಾನ-ದರ್ಮದ ವಿಷಯದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರ ಹಿನ್ನಲೆ ಅರಿವಿಲ್ಲದೇ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ.
`ಕೂಲಿ ಕೆಲಸ ಮಾಡುವ ವಿಜಯ ವಾಳಂಬಿ ಹಾಗೂ ಅಡಿಕೆ ವಕಾರಿಯಲ್ಲಿ ದುಡಿಯುವ ಸುಲೋಚನಾ ವಾಳಂಬಿ ಅವರ ಪುತ್ರರಾಗಿರುವ ವಿಶಾಲ ವಾಳಂಬಿ ಅವರ ಓದು-ಸರಳತೆಗೆ ತಕ್ಕ ಹಾಗೇ ವಿದೇಶದಲ್ಲಿ ಉದ್ಯೋಗ ಸಿಕ್ಕಿತ್ತು. ಆದರೆ, ಅದನ್ನು ತೊರೆದು ಯಲ್ಲಾಪುರಕ್ಕೆ ಬಂದ ಅವರು ಇಲ್ಲಿಯೇ ಗ್ರಾಮದೇವಿ ಹೆಸರಿನಲ್ಲಿ ಉದ್ದಿಮೆ ಶುರು ಮಾಡಿದರು. ಬಾಲ್ಯದಿಂದಲೂ ಕಷ್ಟಪಟ್ಟು ಓದು, ಪಾರ್ಟ ಟೈಂ ಕೆಲಸದ ಜೊತೆ ಪಾಲಕರನ್ನು ಚನ್ನಾಗಿ ನೋಡಿಕೊಳ್ಳುವ ಸವಾಲು ಎದುರಿಸಿದ ವಿಶಾಲ ವಾಳಂಬಿ ಅವರು ಇದೀಗ ಸ್ವಂತ ಉದ್ದಿಮೆ ಮೂಲಕ 150ಕ್ಕೂ ಅಧಿಕ ಜನರಿಗೆ ಕೆಲಸ ನೀಡಿದ್ದಾರೆ’ ಎಂಬ ವಿಷಯವನ್ನು ಸತೀಶ ನಾಯ್ಕ ಅವರು ಸ್ಮರಿಸಿದ್ದಾರೆ.
`ಶಿರಸಿಯ ನಗರ ಸಭೆಯಲ್ಲಿ ದಿನಗೂಲಿ ಆಧಾರದ ಮೇಲೆ ಇಂಜನೀಯರ್ ಆಗಿ ನೌಕರಿ ಆರಂಭಿಸಿದ ವಿಶಾಲ ಒಂದು ವರ್ಷ ಕೆಲಸ ಮಾಡಿ ಸ್ವಂತ ಉದ್ಯಮದ ಕನಸು ಕಂಡು ಅಲ್ಲಿನ ಕೆಲಸಕ್ಕೆ ರಾಜಿನಾಮೆ ನೀಡಿದವರು. ತಮ್ಮ ಸ್ವಂತ ಕಂಪನಿಯ ಕನಸು ನನಸು ಮಾಡಲು ಹಣ ಹಾಗೂ ಜ್ಞಾನ ಅಗತ್ಯವಿರುವುದಕ್ಕಾಗಿ ಅವರು ಸೌದಿ ದೇಶಕ್ಕೆ ಪ್ರಯಣ ಬೆಳಸಿದ್ದು, ಅಲ್ಲಿ ಸಾಕಷ್ಟು ಅನುಭವಪಡೆದು ತವರಿಗೆ ಮರಳಿದ್ದಾರೆ. ಈವರೆಗೆ 200ಕ್ಕೂ ಅಧಿಕ ಕಟ್ಟಡ ನಿರ್ಮಾಣ ಮಾಡಿದ ವಿಶಾಲ ವಾಳಂಬಿ ಅವರು ಹೊಟೇಲ್, ಕೈಗಾರಿಕಾ ಕಟ್ಟಡ, ಡಾಕ್ ಯಾರ್ಡ, ದೊಡ್ಡ ದೊಡ್ಡ ಸ್ಟೋರೇಜ್ ಘಟಕಗಳನ್ನು ಸಹ ನಿರ್ಮಿಸಿದ್ದಾರೆ. ಶಿರಸಿ, ಮುಂಡಗೋಡು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಕಡೆಗಳಲ್ಲಿ ಕಟ್ಟಡ ನಿರ್ಮಾಣ ಕೆಲಸದಿಂದ ಅವರು ಮೆಚ್ಚುಗೆಪಡೆದಿದ್ದಾರೆ. ವಿಶಾಲ ವಾಳಂಬಿ ಅವರಂಥ ಸಾಧಕರು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಅಧ್ಯರಾಗಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ’ ಎಂದವರು ಹೇಳಿದ್ದಾರೆ.
`ವಿಶಾಲ ವಾಳಂಬಿ ಅವರು ಸಮಾಜದಿಂದ ದುಡಿದ ಹಣದ ಕೆಲ ಪಾಲನ್ನು ಸಮಾಜಕ್ಕೆ ನೀಡುತ್ತಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನದಾನ, ಕ್ರೀಡೆ ಸೇರಿ ಅನೇಕ ಉದ್ದೇಶಗಳಿಗೆ ಅವರು ನೆರವು ನೀಡಿದ್ದಾರೆ. ಪ್ರಾಮಾಣಿಕ ಸೇವೆಯೇ ಅವರ ಯಶಸ್ಸಿಗೆ ಕಾರಣ’ ಎಂದು ವಿಶಾಲ ವಾಳಂಬಿ ಅವರ ಬೆಂಬಲಿಗರಾದ ನವೀನ ನಾಯ್ಕ, ಗೌಥಮ ಕಾಮತ್, ರಾಜೇಂದ್ರ ಆಚಾರಿ, ಗಣೇಶ ರೇವಣಕರ್ ಅವರು ಹೇಳಿದ್ದಾರೆ.