ಶಿರಸಿಯ ರವೀಶ ನಾಯ್ಕ ಅವರು ಬಂದೂಕಿನಿoದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೀತಿ-ಪ್ರೇಮ ಎಂದು ತಲೆಕೆಡಿಸಿಕೊಂಡಿದ್ದ ರವೀಶ ನಾಯ್ಕ ಪ್ರೀತಿಸದ ಹುಡುಗಿ ಸಿಗದ ಕಾರಣ ಸಾವಿಗೆ ಶರಣಾದ ಅನುಮಾನಗಳಿವೆ.
ಶಿರಸಿಯ ಇಟಗುಳಿ ಬಳಿಯ ಮೂಡೇಸರದಲ್ಲಿ ರವೀಶ ಮಾಧವ ನಾಯ್ಕ (24) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. ಅಲ್ಪ ಪ್ರಮಾಣದಲ್ಲಿ ಮದ್ಯ ವ್ಯಸನಿಯೂ ಆಗಿದ್ದ ರವೀಶ ನಾಯ್ಕ ಅವರು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿ ಸಿಗದ ಕಾರಣ ಈಚೆಗೆ ಸರಾಯಿ ಕುಡಿಯುವ ಪ್ರಮಾಣ ಹೆಚ್ಚಿಸಿಕೊಂಡಿದ್ದರು.
ಕಳೆದ ಕೆಲ ದಿನಗಳಿಂದ ರವೀಶ ನಾಯ್ಕ ಅವರು ತೀರಾ ಬೇಸರದಲ್ಲಿದ್ದರು. ಬದುಕಿನ ಬಗ್ಗೆ ಅವರು ಚಿಗುಪ್ಸೆ ಹೊಂದಿದ್ದರು. ಅದೇ ನೋವಿನಲ್ಲಿ ರವೀಶ ನಾಯ್ಕ ಅವರು ಬಂದೂಕಿನಿAದ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲಿಯೇ ಸಾವನಪ್ಪಿದರು.
ಸದ್ಯ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳದಲ್ಲಿ ಹಾಜರಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪಿಐ ರಮೇಶ ಹೂಗಾರ್ ಅವರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.