ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಕಾರವಾರದ ಬಾಡ ದೇವಾಲಯದಲ್ಲಿ ಮಾರ್ಚ 7 ಹಾಗೂ 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬಾಡ ಗ್ರಾಮದ ಅಧಿದೇವರಾದ ಶ್ರೀ ಮಹಾದೇವರ ಪುನರ್ ಪ್ರತಿಷ್ಠಾ ವರ್ಧಪನದ 25ನೇ ವರ್ಷದ ಉತ್ಸವವೂ ಇದೇ ವೇಳೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಾರ್ಚ 7ರ ಬೆಳಗ್ಗೆ ಗಣೇಶ ಪೂಜೆ ಹಾಗೂ ಶ್ರೀ ಗಂಧದ ಲಿಂಗಾರ್ಚನೆ ಧಾರ್ಮಿಕ ಅನುಷ್ಠಾನದ ವಿಶೇಷ ಸಂಕಲ್ಪ ನಡೆಯಲಿದೆ. ಸಂಕಲ್ಪದಲ್ಲಿ ಭಾಗವಹಿಸುವವರಿಗೆ ಬೆಳಗ್ಗೆ 8ರಿಂದ 11ರವರೆಗೆ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ದಿನ ಮಧ್ಯಾಹ್ನ 1ಗಂಟೆಗೆ ಪೂಜೆ, ಸಂಜೆ 5ಗಂಟೆಗೆ ಪಾರ್ವತಿ ಮಾತೃಮಂಡಳಿಯ ಸುಮಂಗಲಿಯರ ಜೊತೆ ಭಕ್ತರು ಸೇರಿ `ಪಾರ್ವತಿಯಲ್ಲಿ ಲಲಿತಾ ಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ’ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸಂಜೆ 7.30ಕ್ಕೆ ಪೂಜಾ ಕಾರ್ಯಗಳು ನಡೆಯಲಿದೆ.
ಮಾರ್ಚ 8ರಂದು ಬೆಳಗ್ಗೆ 9 ಗಂಟೆಗೆ ಗೃಹಶಾಂತಿ, ಉಮಾಮಹೇಶ್ವರ ಜಪಾಗಂತ್ವ ಹೋಮ, ರುದ್ರಹೋಮ, ಕಲಾವೃದ್ಧಿ ಹವನ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ 3.30ರವರೆಗೆ ಅನ್ನ ಪ್ರಸಾದ ವಿತರಣೆಗೆ ಯೋಜನೆ ರೂಪಿಸಲಾಗಿದೆ. ಈ ರಾತ್ರಿ 7.30ಕ್ಕೆ ಪೂಜೆ ನಡೆಯಲಿದೆ. ಜೊತೆಗೆ 9ಗಂಟೆಗೆ ಮಹಾದೇವ ವಿನಾಯಕ ದೇವಸ್ಥಾನ ಸಮಿತಿ ಹಾಗೂ ಮಾಳ್ಕೋಡಿನ ಯಕ್ಷಪಲ್ಲವಿ ಟ್ರಸ್ಟಿನ ಸಹಯೋಗದಲ್ಲಿ `ಶ್ರೀ ಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನವಾಗಲಿದೆ.
ಇನ್ನೂ `ದೇವತಾ ಕಾರ್ಯದಲ್ಲಿ ಭಾಗವಹಿಸುವವರು ಹಾಗೂ ಸಂಕಲ್ಪಿಸುವವರು 555ರೂ ಪಾವತಿಸಿ, ರಸೀದಿಪಡೆಯಬೇಕು. ಅನ್ನ ಸಂತರ್ಪಣೆಗೆ ಧಾನ್ಯ ಅಥವಾ ಹಣ ಸಹಾಯ ಮಾಡುವವರು ಕಚೇರಿಯನ್ನು ಸಂಪರ್ಕಿಸಬೇಕು. ಪೂರ್ಣಾಹುತಿಗೆ ಬಿಳಿ ವಸ್ತ, ಎಳ್ಳು, ಪಂಚಧಾನ್ಯ, ತುಪ್ಪ, ತೆಂಗಿನಕಾಯಿ ಮೊದಲಾದ ಮಂಗಲದೃವ್ಯ ಸಮರ್ಪಣೆಗೆ ಅವಕಾಶವಿದ್ದು, ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ತರಕಾರಿ, ಧವಸ-ಧಾನ್ಯಗಳನ್ನು ಮಾರ್ಚ 7ರವರೆಗೆ ಸ್ವೀಕರಿಸಲಾಗುತ್ತದೆ’ ಎಂದು ದೇಗುಲ ಸಮಿತಿಯವರು ತಿಳಿಸಿದ್ದಾರೆ.
Advertisement. Scroll to continue reading.