ಮುಂಡಗೋಡಿನ ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ ಮಹಿಳೆಯ ದೇಹದ ಗುರುತು ಪತ್ತೆಯಾಗಿದ್ದು, ಮಹಿಳೆಯನ್ನು ಕೊಲೆ ಮಾಡಿದ ಆರೋಪಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಮೈ ಮೇಲಿದ್ದ ಚಿನ್ನದ ಆಸೆಗೆ ನೆರೆಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೇ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
Advertisement. Scroll to continue reading.
ಫೆಬ್ರವರಿ 20ರಂದು ಕೊಳಗಿ ಕಾಡಿನಲ್ಲಿ ರುಂಡವಿಲ್ಲದ ಮಹಿಳೆಯ ದೇಹ ಕಾಣಿಸಿತ್ತು. ಆ ದೇಹ ಬೆತ್ತಲೆಯಾಗಿ ಬಿದ್ದಿದ್ದು, ಸಾವನಪ್ಪಿದ ಮಹಿಳೆ ಯಾರು? ಎಂದು ಗೊತ್ತಾಗಿರಲಿಲ್ಲ. ಸಾಕಷ್ಟು ಶೋಧದ ನಂತರ ಶಿವಕ್ಕ ಸೋಮಣ್ಣ ಗೌಡ ಪಾಟೀಲ್ ಅವರು ಸಾವನಪ್ಪಿರುವುದು ಗೊತ್ತಾಗಿತ್ತು. ಮಹಿಳೆಯ ಗುರುತು ಪತ್ತೆ ಹಾಗೂ ಆರೋಪಿ ಹುಡುಕಾಟಕ್ಕಾಗಿ ಗೋಕರ್ಣದ ಸಿಪಿಐ ಶ್ರೀಧರ್ ನೇತ್ರತ್ವದ ತಂಡ ರಚಿಸಲಾಗಿತ್ತು. ಆ ತಂಡದ ಹುಡುಕಾಟದಲ್ಲಿ ಜಿಲ್ಲೆಯ ಸೊರಬ ತಾಲೂಕಿನ ಮನ್ಮನೆಯ ಕೃಷ್ಣಪ್ಪ ಎಂಬಾತರು ಸಿಕ್ಕಿಬಿದ್ದರು. ಶಿವಕ್ಕ ಅವರ ನೆರೆಮನೆಯಲ್ಲಿ ವಾಸವಾಗಿದ್ದು, ಚಿನ್ನದ ಮೇಲೆ ಆಸೆಪಟ್ಟು ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮನ್ಮನೆಯ ಕೃಷ್ಣಪ್ಪ ಅವರು ಶಿವಕ್ಕ ಹಾಕಿಕೊಂಡಿದ್ದ ಬಂಗಾರದ ಒಡವೆ ಮೇಲೆ ಕಣ್ಣು ಹಾಕಿದ್ದರು. ಶಿವಕ್ಕ ಅವರ ನೆರೆಮನೆಯಲ್ಲಿ ಆರೋಪಿ ವಾಸವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿ ಕೊಲೆ ಮಾಡಿದ್ದರು. ಮಹಿಳೆಯ ಹತ್ಯೆ ಮಾಡಿ ಆಭರಣಗಳನ್ನು ಎಗರಿಸಿದ ನಂತರ ಗುರುತು ಸಿಗದ ಹಾಗೇ ರುಂಡ ಕತ್ತರಿಸಿದ್ದರು. ಅದಾದ ನಂತರ ಬಟ್ಟೆಗಳನ್ನು ಬಿಸಾಡಿ ಪರಾರಿಯಾಗಿದ್ದರು. ರುಂಡವನ್ನು ಹಣಗಲ್ ತಾಲೂಕು ಶಿವಪುರದಲ್ಲಿ ಎಸೆದಿದ್ದು ಸಹ ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿ ವಿರುದ್ಧ ಸೊರಬದಲ್ಲಿ ಸಹ ಕೊಲೆ ಪ್ರಕರಣವಿದ್ದು, ಅದರ ವಿಚಾರಣೆಯೂ ನಡೆಯುತ್ತಿದೆ.