ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದ ಕಾರಣ ಮಲೆನಾಡು ಭಾಗದ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಈ ಹಿಂದೆ ಜುಲೈ 26ರಂದು ಕರಾವಳಿಯ ಐದು ತಾಲೂಕುಗಳಿಗೆ ರಜೆ ಘೋಷಣೆಯಾಗಿದ್ದು, ಇದೀಗ ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದನ್ನು ಗಮನಿಸಿ ಆದೇಶ ಹೊರಡಿಸಲಾಗಿದೆ.
ಸದ್ಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಜೊತೆ ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಶಾಲೆಗಳಿಗೆ ಶನಿವಾರದ ರಜೆ ಸಿಕ್ಕಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಳೆ ಜೋರಾಗಿದ್ದರೂ ಈವರೆಗೆ ರಜೆ ಘೋಷಣೆ ಆಗಿಲ್ಲ. ಇದೀಗ ಹೊರಡಿಸಿದ ಆದೇಶದಲ್ಲಿ ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಪದವಿ ಪೂರ್ವ ಕಾಲೇಜುಗಳಿಗೆ ಸಹ ರಜೆ ನೀಡಲಾಗಿದೆ. ಅಂಗನವಾಡಿಗಳಿಗೆ ಸಹ ರಜೆ ನಿಯಮ ಅನ್ವಯಿಸಲಿದೆ.
Discussion about this post