ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಯುಗಾದಿ ಉತ್ಸವ ನಡೆಸಲು ಸಿದ್ಧತೆ ನಡೆದಿದೆ. 26ನೇ ವರ್ಷದ ಯುಗಾದಿ ಉತ್ಸವವನ್ನು ಅತ್ಯಂತ ವಿಜ್ರಂಬಣೆಯಿoದ ನಡೆಸಲು ಸಮಿತಿಯವರು ಸಜ್ಜಾಗಿದ್ದಾರೆ.
ಶುಕ್ರವಾರ ಗ್ರಾಮದೇವಿ ದೇವಸ್ಥಾನದಲ್ಲಿ ಯುಗಾದಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಗಿದೆ. `ಸಮಸ್ತ ಹಿಂದೂ ಬಾಂಧವರು ಈ ಉತ್ಸವದಲ್ಲಿ ಭಾಗಿಯಾಗಬೇಕು. ಮನೆ ಮನೆಯಲ್ಲಿಯೂ ಹಬ್ಬದ ವಾತಾವರಣ ಸೃಷ್ಠಿಸಬೇಕು’ ಎಂದು ಈ ವೇಳೆ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ ವಾಳಂಬಿ ಅವರು ಕರೆ ನೀಡಿದ್ದಾರೆ. `ಪ್ರತಿ ವಾರ್ಡುಗಳಲ್ಲಿಯೂ ರಂಗೋಲಿ ಹಾಕೋಣ. ತಳಿರು ತೋರಣಗಳಿಂದ ಊರನ್ನು ಅಲಂಕಾರ ಮಾಡೋಣ’ ಎಂದವರು ಮನವಿ ಮಾಡಿದ್ದಾರೆ.
ಪ್ರಮುಖರಾದ ಆರ್ ಎಸ್ ಭಟ್ಟ ಚಂದ್ಗುಳಿ. ಜಿ ಎನ್ ಗಾಂವಕರ್, ಗಜಾನನ ಭಟ್ಟ ಕಳಚೆ , ಸತೀಶ ನಾಯ್ಕ, ಸುನಂದಾ ದಾಸ್, ನರ್ಮದಾ ನಾಯ್ಕ, ನವಿನ್ ನಾಯ್ಕ, ಸಂತೋಷ್ ಪಾಟಣಕರ್, ನಮಿತಾ ಬಿಡಿಕರ್, ಫುಷ್ಪಾ ಜೊಗಾರ್ ಶೆಟ್ಟರ್ ಇತರರು ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ಹಾಜರಿದ್ದರು.