ಭಟ್ಕಳದ ಕೌಶಿಕ್ ನಾಯ್ಕ ಅವರು ಮನೆಯಲ್ಲಿದ್ದ ಸೀರೆಯ ಸಹಾಯದಿಂದ ಅವರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಅವರ ಈ ದುಡುಕು ನಿರ್ಧಾರಕ್ಕೆ ನೈಜ ಕಾರಣ ಏನು ಎಂದು ಕುಟುಂಬದವರಿಗೆ ಸಹ ಗೊತ್ತಾಗಿಲ್ಲ.
Advertisement. Scroll to continue reading.
ಭಟ್ಕಳದ ಹೆಬಳೆ ಹೊನಗದ್ದೆಯಲ್ಲಿ ಕೌಶಿಕ್ ಸುಬ್ರಾಯ ನಾಯ್ಕ (18) ಅವರು ವಾಸವಾಗಿದ್ದರು. ಅವರು ವಿದ್ಯಾರ್ಥಿಯಾಗಿ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದರು. ಕೌಶಿಕ್ ನಾಯ್ಕ ಅವರ ತಂದೆ
ಸುಬ್ರಾಯ ಬರವಯ್ಯ ನಾಯ್ಕ ಅವರು ಕೂಲಿ ಕಾರ್ಮಿಕರಾಗಿದ್ದು, ಮಗನಿಗೆ ಉನ್ನತ ಶಿಕ್ಷಣ ಒದಗಿಸಬೇಕು ಎಂದು ಕನಸು ಕಂಡಿದ್ದರು. ಆದರೆ, ಕೌಶಿಕ್ ನಾಯ್ಕ ಅವರು ತಂದೆಯ ಕನಸು ಹಾಳು ಮಾಡಿದರು. ಜೊತೆಗೆ ತಮ್ಮ ಪ್ರಾಣವನ್ನು ತ್ಯಜಿಸಿದರು.
ಶುಕ್ರವಾರ ಬೆಳಗ್ಗೆ ಬೇಗ ಎದ್ದ ಕೌಶಿಕ್ ನಾಯ್ಕ ಅವರು ತಮ್ಮ ಕೋಣೆಯಲ್ಲಿಯೇ ನೇಣಿಗೆ ಶರಣಾದರು. ಮನೆಯಲ್ಲಿದ್ದ ಸೀರೆ ಬಳಸಿ ಅವರು ಸೀಲಿಂಗ್ ಫ್ಯಾನಿಗೆ ನೇತಾಡಿದ್ದು, ಕುಟುಂಬದವರು ನೋಡುವಷ್ಟರೊಳಗೆ ಅವರು ಶವವಾಗಿದ್ದರು. ಮಗನ ಸಾವಿನ ಬಗ್ಗೆ ಸುಬ್ರಾಯ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
`ಆತ್ಮಹತ್ಯೆ ಅಪರಾಧ’