ಕಾರವಾರದ ವರ್ಷಾ ರೇವಣಕರ್ ಅವರಿಗೆ ವಾಟ್ಸಪ್ ಕಾಲ್ ಮೂಲಕ ಉದ್ಯೋಗ ಆಮೀಷ ಒಡ್ಡಿದ ವಂಚಕರು ಒಂದೇ ವಾರದಲ್ಲಿ 7 ಲಕ್ಷ ರೂ ಕಬಳಿಸಿದ್ದಾರೆ. ಆನ್‌ಲೈನ್ ಕೆಲಸ ಮಾಡಿ ಹಣಗಳಿಸುವ ಆಸೆಗೆ ಬಿದ್ದ ವರ್ಷಾ ರೇವಣಕರ್ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾರೆ.
Advertisement. Scroll to continue reading.
ಕಾರವಾರದ ಹೈಚರ್ಚ ರಸ್ತೆಯಲ್ಲಿ ವರ್ಷಾ ರೇವಣಕರ್ ಅವರು ವಾಸವಾಗಿದ್ದಾರೆ. ಅವರು ಮೊಬೈಲ್ ನೋಡುತ್ತಿರುವಾಗ ಅವರಿಗೆ ವಾಟ್ಸಪ್ ಮೂಲಕ `ಆನ್‌ಲೈನ್ ಜಾಬ್’ ಎಂಬ ಸಂದೇಶ ಕಾಣಿಸಿದೆ. ಅದರ ಬಗ್ಗೆ ವರ್ಷಾ ರೇವಣಕರ್ ಅವರು ಆಸಕ್ತಿವಹಿಸಿದ್ದು, ಅವರನ್ನು ವಂಚಕರು ವಿಶೇಷ ವಾಟ್ಸಪ್ ಗುಂಪಿಗೆ ಸೇರಿಸಿದ್ದಾರೆ. ಅದಾದ ನಂತರ ವಾಟ್ಸಪ್ ಮೂಲಕ ಫೋನ್ ಮಾಡಿ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.
`ವಿವಿಧ ಉತ್ಪನ್ನಗಳಿಗೆ ರೇಟಿಂಗ್ ಹಾಗೂ ರಿವ್ಯು ಕೊಡಬೇಕು’ ಎಂದು ವಂಚಕರು ಹೇಳಿದ್ದಾರೆ. ಆ ಕೆಲಸ ಮಾಡಿದ ಕಾರಣ ವರ್ಷಾ ರೇವಣಕರ್ ಅವರಿಗೆ 300ರೂ ಹಣವನ್ನು ಪಾವತಿಸಿದ್ದಾರೆ. ಇದರಿಂದ ಖುಷಿಯಾದ ವರ್ಷಾ ಅವರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಿದ್ದು, ಆ ವೇಳೆ ವಂಚಕರು ತಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಕೊಡುವುದಾಗಿ ಪುಸಲಾಯಿಸಿದ್ದಾರೆ.
ಫೆ 27ರಿಂದ ಮಾರ್ಚ 6ರವರೆಗೆ ವರ್ಷಾ ರೇವಣಕರ್ 7 ಲಕ್ಷ ರೂ ಹೂಡಿಕೆ ಮಾಡಿದ್ದು, ಅದಾದ ನಂತರ ಆ ಹಣ ಅವರಿಗೆ ಮರಳಿ ಸಿಕ್ಕಿಲ್ಲ. ವಂಚಕರು ಸಹ ವಾಟ್ಸಪ್ ಕಾಲ್ ಮಾಡುವುದನ್ನು ನಿಲ್ಲಿಸಿದ್ದಾರೆ. ಮೋಸ ಹೋಗಿರುವುದನ್ನು ಅರಿತ ವರ್ಷಾ ರೇವಣಕರ್ ಅವರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
`ಅಪರಿಚಿತರನ್ನು ನಂಬಬೇಡಿ’