ಕಾಳಿ ನದಿಯಲ್ಲಿ ವಾಸಿಸುತ್ತಿರುವ ಮೊಸಳೆಗಳು ಈಚೆಗೆ ಪದೇ ಪದೇ ದಾಂಡೇಲಿಯ ನದಿ ದಡಕ್ಕೆ ಬರುತ್ತಿವೆ. ಮೂರು ನಂಬರ್ ಗೇಟಿನ ಪಂಪಾಸು ಪ್ರದೇಶದಲ್ಲಿಯೂ ಮೊಸಳೆ ಕಾಣಿಸಿಕೊಂಡಿದ್ದು, ಜನ ಆತಂಕವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನದಿ ಪಕ್ಕದ ಪ್ರದೇಶಕ್ಕೆ ಮೊಸಳೆಯ ಆಗಮನವಾಗುತ್ತಿದೆ. ಒಂದೆರಡು ಬಾರಿ ದಟಕ್ಕೆ ಬಂದ ಮೊಸಳೆ ಬಲೆಗೆ ಸಿಕ್ಕಿ ಬಿದ್ದಿದ್ದು, ಅದನ್ನು ಸ್ಥಳೀಯರು ರಕ್ಷಿಸಿ ನದಿಗೆ ಬಿಟ್ಟಿದ್ದಾರೆ. ಸದ್ಯ ಮತ್ತೊಂದು ಹೊಸ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಭೂಮಿ ಮೇಲಿನ ಪ್ರಾಣಿಗಳ ಮಾಂಸದ ಆಸೆಗೆ ಮೊಸಳೆ ನದಿ ಬಿಟ್ಟು ಹೊರ ಬರುತ್ತಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.
`ಮೊಸಳೆ ಕಾಟದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮವಾಗಿಲ್ಲ’ ಎಂಬುದು ಅಲ್ಲಿನವರ ದೂರು.` ಮೊಸಳೆ ದಡಕ್ಕೆ ಬರದ ಹಾಗೇ ಕ್ರಮ ಜರುಗಿಸಬೇಕು’ ಎಂದು ಜನ ಒತ್ತಾಯಿಸಿದ್ದಾರೆ. `ಅನೇಕ ಸಲ ಮನೆ ಮುಂದೆಯೇ ಮೊಸಳೆ ಬರುತ್ತಿದೆ. ಅದರಿಂದ ಮಕ್ಕಳು ಸಹ ಭಯಪಡುತ್ತಿದ್ದಾರೆ’ ಎಂದು ಅಲ್ಲಿನವರು ಅಳಲು ತೋಡಿಕೊಂಡರು.