ಹೆಸ್ಕಾಂ ನಿವೃತ್ತ ನೌಕರ ಅಲ್ಪೆಡ್ ಫರ್ನಾಂಡಿಸ್ ಅವರು ಜಯಂತಿ ದೇವಾಡಿಗ ಅವರ ಮೇಲೆ ಕೈ ಮಾಡಿದ್ದಾರೆ. ನೋವು ಅನುಭವಿಸಿದ ಜಯಂತಿ ದೇವಾಡಿಗ ಅವರು ಪೊಲೀಸರಿಗೆ ಫೋನ್ ಮಾಡುವ ಪ್ರಯತ್ನ ಮಾಡಿದ್ದು, ಇದನ್ನು ನೋಡಿ ಅಲ್ಪೆçಡ್ ಫರ್ನಾಂಡಿಸ್ ಅವರು ಓಡಿ ಪರಾರಿಯಾಗಿದ್ದಾರೆ.
ಶಿರಸಿಯ ಮಲಳಿ ಹೊಸಮನೆ ಬಳಿ ಜಯಂತಿ ದೀಪಕ ದೇವಾಡಿಗ ಅವರು ವಾಸವಾಗಿದ್ದಾರೆ. ನೀಲೆಕೇಣಿ ಅಗಸೆಬಾಗಿಲುವಿನ ನಿವೃತ್ತ ಹೆಸ್ಕಾಂ ನೌಕರ ಅಲ್ಪೆçಡ್ ಆಂದ್ರು ಫರ್ನಾಂಡಿಸ್ ಅವರು ಜಯಂತಿ ದೇವಾಡಿಗ ಅವರ ಮೇಲೆ ದ್ವೇಷ ಕಾರುತ್ತಿದ್ದಾರೆ. ಮೊದಲಿನಿಂದಲೂ ಅಲ್ಪೆಡ್ ಫರ್ನಾಂಡಿಸ್ ಅವರು ಜಯಂತಿ ದೇವಾಡಿಗ ಅವರಿಗೆ ತೊಂದರೆ ನೀಡುತ್ತಿದ್ದು, ಈಗಲೂ ಅದನ್ನು ಮುಂದುವರೆಸಿದ್ದಾರೆ.
ಮಾರ್ಚ 5ರಂದು ಜಯಂತಿ ದೇವಾಡಿಗ ಅವರ ಮನೆ ಮೇಲೆ ಮರ ಬಿದ್ದಿದ್ದು, ಜಯಂತಿ ದೇವಾಡಿಗ ಅವರು ಆಳುಗಳ ಮೂಲಕ ಆ ಮರ ತೆಗೆಸುವ ಕೆಲಸ ಮಾಡಿಸಿದ್ದಾರೆ. ಆ ವೇಳೆ ಅಲ್ಲಿಗೆ ಬಂದ ಅಲ್ಪೆಡ್ ಫರ್ನಾಂಡಿಸ್ ಅವರು ತಕರಾರು ಶುರು ಮಾಡಿದ್ದಾರೆ. `ಯಾರಿಗೆ ಕೇಳಿ ಮರ ತೆಗೆಯುತ್ತಿರುವೆ?’ ಎಂದು ಪ್ರಶ್ನಿಸಿದ್ದಾರೆ. ಜಯಂತಿ ಅವರು ಉತ್ತರಿಸುವುದರೊಳಗೆ ಅವರ ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ ಅವರನ್ನು ನೆಲಕ್ಕೆ ದೂಡಿದ್ದು, ಕೈಗಳೆರಡನ್ನು ಹಿಡಿದು ತಿರುಗಿಸಿದ್ದಾರೆ.
ಅಲ್ಪೆಡ್ ಫರ್ನಾಂಡಿಸ್ ಅವರ ವರ್ತನೆಯಿಂದ ಜಯಂತಿ ದೇವಾಡಿಗ ಅವರು ನೋವು ಅನುಭವಿಸಿದ್ದಾರೆ. ಅದಾದ ನಂತರ ತಮಗೆ ಜೀವ ಬೆದರಿಕೆಯಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.