ಕಂಟೇನರ್ ಚಾಲಕ ಸರಾಯಿ ಕುಡಿದು ವಾಹನ ಓಡಿಸಿದ ಪರಿಣಾಮ ಆ ಕಂಟೇನರ್ ಕಾರಿನ ಮೇಲೆ ಬಿದ್ದಿದೆ. ಈ ದುರಂತದಲ್ಲಿ ಕಾರಿನ ಒಳಗಿದ್ದ ಐದು ವರ್ಷದ ಮಗು ಅಲ್ಲಿಯೇ ಸಾವನಪ್ಪಿದೆ.
ಕಾರವಾರದ ಬಿಣಗಾ – ಅರ್ಗಾ ಘಟ್ಟದ ಬಳಿ ಈ ಅಪಘಾತ ನಡೆದಿದೆ. ಮಾಹಿತಿಗಳ ಪ್ರಕಾರ ವೈದ್ಯ ಕುಟುಂಬವೊoದು ಕಾರಿನಲ್ಲಿ ಸಂಚರಿಸುತ್ತಿತ್ತು. ಈ ವೇಳೆ ವೇಗವಾಗಿ ಬಂದ ಕಂಟೇನರ್ ಆ ಕಾರಿನ ಮೇಲೆ ಬಿದ್ದಿತು. ಕಾರಿನಲ್ಲಿದ್ದ ದೊಡ್ಡವರು ಅಪಾಯದಿಂದ ಪಾರಾಗಿದ್ದು, ಐದು ವರ್ಷದ ಮಗು ಅಲ್ಲಿ ಸಿಕ್ಕಿಬಿದ್ದಿತು. ಆ ಮಗು ಅಲ್ಲಿಯೇ ಕೊನೆಯುಸಿರೆಳೆಯಿತು.
ಕಾರಿನಲ್ಲಿದ್ದ ಇತರರು ಜೀವಾಪಾಯದಿಂದ ಪಾರಾಗಿದ್ದರೂ ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ನೂರಾರು ಜನ ಜಮಾಯಿಸಿದ್ದಾರೆ. ಕಂಟೇನರ್ ಚಾಲಕನ ಸರಾಯಿ ಸೇವನೆ ಬಗ್ಗೆ ಆಕ್ರೋಶವ್ತಕ್ತಪಡಿಸಿದ್ದಾರೆ.
ಸದ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸಂಚಾರ ದಟ್ಟಣೆ ಆಗದ ಹಾಗೇ ಕ್ರಮ ಜರುಗಿಸಿದ್ದಾರೆ. ಸಾವನಪ್ಪಿದ ಮಗು ಹಾಗೂ ಗಾಯಗೊಂಡವರ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.