ಲಾರಿಗೆ ಸ್ಕೂಟಿ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ ಪಟಗಾರ ಅವರನ್ನು ಮಣಿಪಾಲಿನ ಕಸ್ತೂರಿ ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಕಾರ್ತಿಕ್ ಪಟಗಾರ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
Advertisement. Scroll to continue reading.
ಅಂಕೋಲಾದ ಅಚವೆ ಬಳಿಯ ಬೋರಳ್ಳಿಯಲ್ಲಿ ಕಾರ್ತಿಕ ಶೇಖರ ಪಟಗಾರ (24) ಅವರು ವಾಸವಾಗಿದ್ದರು. ಕಾಲೇಜು ವಿದ್ಯಾರ್ಥಿಯಾಗಿ ಅವರು ಭವಿಷ್ಯದ ಜೀವನ ರೂಪಿಸಿಕೊಳ್ಳುತ್ತಿದ್ದರು. ಅತಿಯಾದ ವೇಗದಲ್ಲಿ ಸ್ಕೂಟಿ ಓಡಿಸುವುದು ಅವರ ಜೀವನಕ್ಕೆ ಮಾರಕವಾಯಿತು. ಅತಿ ವೇಗದ ವಾಹನ ಚಾಲನೆ ಪರಿಣಾಮ ಅವರು ಅಪಘಾತಕ್ಕೀಡಾಗಿದ್ದು, ಆಸ್ಪತ್ರೆ ಸೇರಿಸಿದರೂ ಪ್ರಯೋಜನಕ್ಕೆ ಬಾರದೇ ಸಾವನಪ್ಪಿದರು.
ಮಾರ್ಚ 1ರಂದು ಸಂಜೆ ಕಾರ್ತಿಕ ಪಟಗಾರ ಅವರು ಬೋರಳ್ಳಿ ಕಡೆಯಿಂದ ಅಂಗಡಿಬೈಲಿನ ಕಡೆ ಸ್ಕೂಟಿ ಓಡಿಸುತ್ತಿದ್ದರು. ಚನಗಾರದ ಕೋಡೆಮನೆ ಕ್ರಾಸಿನ ಬಳಿ ಅಂಗಡಿಬೈಲಿನ ಚಾಲಕ ಉಮೇಶ ದೇವು ಗೌಡ ಅವರ ಗೂಡ್ಸ ವಾಹನಕ್ಕೆ ಕಾರ್ತಿಕ ಪಟಗಾರ ಅವರು ತಮ್ಮ ಸ್ಕೂಟಿ ಗುದ್ದಿದರು. ಪರಿಣಾಮ ಕಾರ್ತಿಕ ಪಟಗಾರ ಅವರ ತಲೆ, ಕೈ-ಮೈಗೆ ಗಾಯವಾಗಿದ್ದು, ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಮುಂದೆ ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಗೆ ಕಳುಹಿಸಲಾಯಿತು.
ಅಪಘಾತದ ಬಗ್ಗೆ ಚನಗಾರಿನ ವಿಶ್ವೇಶ್ವರ ನಾರಾಯಣ ಪಟಗಾರ ಅವರು ಪೊಲೀಸ್ ದೂರು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಕಾರ್ತಿಕ ಪಟಗಾರ ಅವರು ಮಾರ್ಚ 9ರಂದು ಅವರು ಆಸ್ಪತ್ರೆಯಲ್ಲಿಯೇ ಸಾವನಪ್ಪಿದರು. ಈ ಬಗ್ಗೆ ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಯವರು ಇಮೇಲ್ ಮೂಲಕ ವಿಷಯ ತಿಳಿಸಿದ್ದು, ಅಂಕೋಲಾ ಪೊಲೀಸರು ಸಾವಿನ ವರದಿಯನ್ನು ಸರ್ಕಾರಿ ಕಡತಕ್ಕೆ ಸೇರಿಸಿದರು.