ಸರ್ಕಾರಿ ಬಸ್ಸಿನ ಬ್ರೇಕ್ ಫೇಲ್ ಆಗಿದ್ದು, ಆ ಬಸ್ಸು ಸ್ಕೂಟಿಗೆ ಡಿಕ್ಕಿಯಾಗಿದೆ. ಕಾರವಾರ-ಅಂಕೋಲಾ ಮಾರ್ಗದ ಹಾರವಾಡದ ಬಳಿ ಈ ಅಪಘಾತ ನಡೆದಿದೆ.
ಸೋಮವಾರ ಸಂಜೆ ಈ ಅವಘಡ ನಡೆದಿದೆ. ಬಸ್ಸನ್ನು ರಿವರ್ಸ ತೆಗೆದುಕೊಳ್ಳುವಾಗ ಬ್ರೇಕ್ ಫೇಲ್ ಆದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಈ ಅಪಘಾತದಿಂದ ಸ್ಕೂಟಿಯ ಜೊತೆ ಅಲ್ಲಿದ್ದ ಗೋಡೆಯೊಂದಕ್ಕೆ ಹಾನಿ ಆಗಿದೆ. ಅಪಘಾತ ನಡೆದ ತಕ್ಷಣ ಜನ ಅಲ್ಲಿ ಆಗಮಿಸಿದ್ದು, ಬಸ್ಸಿನ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.
ಇದೇ ಪ್ರದೇಶದಲ್ಲಿ ಬಸ್ಸಿನ ತಾಂತ್ರಿಕ ದೋಷದ ಕಾರಣ ನಾಲ್ಕು ಅಪಘಾತ ನಡೆದ ಬಗ್ಗೆ ಜನ ದೂರಿದ್ದಾರೆ. `ಬಸ್ಸುಗಳ ಸರಿಯಾದ ನಿರ್ವಹಣೆ ಮತ್ತು ತಪಾಸಣೆ ನಡೆಯದಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂದು ದೂರಿದ್ದಾರೆ. ಡಿಪೋ ಮಟ್ಟದಲ್ಲಿ ಬಸ್‌ಗಳ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯವಹಿಸಿದ ಆರೋಪವ್ಯಕ್ತವಾಗಿದೆ.
`ಪ್ರತಿ ಬಾರಿ ಇದೇ ರೀತಿಯ ಸಮಸ್ಯೆ ಆಗುತ್ತಿದೆ. ಅಧಿಕಾರಿಗಳು ತಕ್ಷಣ ಗಮನ ಕೊಡಬೇಕು’ ಎಂದು ಜನ ಆಗ್ರಹಿಸಿದ್ದಾರೆ. `ಹಳೆಯ ಹಾಗೂ ದೋಷಪೂರಿತ ಬಸ್‌ಗಳ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.