ಉತ್ತರ ಕನ್ನಡ ಉಸ್ತುವಾರಿ ಸಚಿವರೂ ಆಗಿರುವ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅವರಿಗೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ವಿವಿಧ ಬಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಚುಕ್ಕಿ ಗುರುತಿನ ಪ್ರಶ್ನೆಗೆ ಸೂಕ್ತ ಉತ್ತರ ಸಿಗದ ಕಾರಣ ಗಣಪತಿ ಉಳ್ವೇಕರ್ ಅವರು ಸದನಲ್ಲಿ ಎದ್ದು ನಿಂತು ಪ್ರಶ್ನಿಸಿದ್ದು, ಅದಕ್ಕೆ ಮಂಕಾಳು ವೈದ್ಯ ಅವರು ಸಮಾಧಾನದ ಉತ್ತರ ನೀಡಿದ್ದಾರೆ.
Advertisement. Scroll to continue reading.
ಬಂದರು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಲು ಕೈಗೊಂಡ ಕ್ರಮ, ಹುದ್ದೆ ನೇಮಕಾತಿ ವಿಷಯದಲ್ಲಿನ ಗೊಂದಲ, ನಿರ್ದೇಶಕ ಹುದ್ದೆಗೆ ಅರ್ಹತೆಯ ಕುರಿತು ಗಣಪತಿ ಉಳ್ವೇಕರ್ ಅವರು ಪ್ರಶ್ನಿಸಿದ್ದಾರೆ. ಅದರೊಂದಿಗೆ ಕಾರವಾರದ ಸದಾಶಿವಗಡದಲ್ಲಿ ತೇಲುವ ಜಟ್ಟಿ ಎಲ್ಲಿದೆ? ಎಂದು ಕಾಣಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಮಂಕಾಳು ವೈದ್ಯ ಅವರು `ಬಂದರು ನಿರ್ದೇಶಕಕ್ಕೆ ಸಂಬAಧಿಸಿ ಮೂರು ಹುದ್ದೆ ಖಾಲಿ, ಒಂದು ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿದೆ’ ಎಂದಿದ್ದಾರೆ. `ಇನ್ನೆರಡು ಹುದ್ದೆಯನ್ನು ಆದಷ್ಟು ಬೇಗ ಭರ್ತಿ ಮಾಡಬೇಕು’ ಎಂದು ಗಣಪತಿ ಉಳ್ವೇಕರ್ ಅವರು ಆಗ್ರಹಿಸಿದ್ದು, ಅದಕ್ಕೂ ಮಂಕಾಳು ವೈದ್ಯ ಅವರು ಭರವಸೆ ನೀಡಿದ್ದರೆ. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು `ಎರಡು ತಿಂಗಳು ಅಥವಾ ನಾಲ್ಕು ತಿಂಗಳ ಒಳಗೆ ಹುದ್ದೆ ಭರ್ತಿ ಮಾಡುತ್ತೇನೆ ಎಂದು ಖಚಿತವಾಗಿ ತಿಳಿಸಬೇಕು’ ಎಂದು ತಾಕೀತು ಮಾಡಿದ್ದಾರೆ.
`ಹುದ್ದೆಗೆ ಅರ್ಜಿ ಕರೆಯಲಾಗಿದೆ. ಯಾರೂ ಅರ್ಜಿ ಹಾಕುತ್ತಿಲ್ಲ’ ಎಂದು ಈ ವೇಳೆ ಮಂಕಾಳು ವೈದ್ಯ ಅವರು ಸದನಕ್ಕೆ ತಿಳಿಸಿದ್ದು, ಶೀಘ್ರದಲ್ಲಿಯೇ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಅದಾದ ನಂತರ `ಕಾರವಾರದ ಸದಾಶಿವಗಡದಲ್ಲಿ ತೇಲುವ ಜಟ್ಟಿ ನಿರ್ಮಿಸಲಾಗಿದೆ ಎಂದು ತಮಗೆ ಉತ್ತರ ಸಿಕ್ಕಿದೆ. ಆದರೆ, ಆ ಜಟ್ಟಿ ಎಲ್ಲಿದೆ?’ ಎಂದು ಗಣಪತಿ ಉಳ್ವೇಕರ್ ಅವರು ಪ್ರಶ್ನಿಸಿದ್ದಾರೆ. `ಹಿಂದಿನ ಸರ್ಕಾರದವರು ಸಿಆರ್‌ಜಡ್ ಅನುಮತಿಪಡೆಯದೇ ತೇಲುವ ಜಟ್ಟಿ ನಿರ್ಮಿಸಿದ್ದರು. ಸದ್ಯ ತೇಲುವ ಜಟ್ಟಿ ತೆರವು ಮಾಡಲಾಗಿದ್ದು, ಸಿಆರ್‌ಜಡ್ ಅನುಮತಿಪಡೆದು ಅದನ್ನು ಮತ್ತೆ ನಿರ್ಮಿಸುತ್ತೇವೆ’ ಎಂದು ಮಂಕಾಳು ವೈದ್ಯ ಅವರು ಹೇಳಿದ್ದಾರೆ.