`ರೋಗ ಪೂರ್ವಪತ್ತೆಯಿಂದ ಜೀವ ಹಾನಿ ತಡೆಯಲು ಸಾಧ್ಯ’ ಎಂದು ಶಿರಸಿ ವಿಭಾಗೀಯ ದಂಡಾಧಿಕಾರಿ ಚಂದ್ರಶೇಖರ್ ಆರ್ ಜಿ ಅವರು ಹೇಳಿದ್ದಾರೆ. ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದ್ದು, `ಆಗಾಗ ತಜ್ಞ ವೈದ್ಯರ ಶಿಬಿರ ನಡೆಯುವುದರಿಂದ ಜನರಿಗೂ ಅನುಕೂಲ ಆಗುತ್ತದೆ’ ಎಂದಿದ್ದಾರೆ.
Advertisement. Scroll to continue reading.
ಸ್ಕೊಡ್‌ವೆಸ್ ಸಂಸ್ಥೆ, ರೋಟರಿ ಕ್ಲಬ್, ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್, ನಾರಾಯಣ ಹೆಲ್ತ್ ಶಿವಮೊಗ್ಗ ಹಾಗೂ ಐಎಂಎ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆದಿದ್ದು 500ಕ್ಕೂ ಅಧಿಕ ಜನ ತಪಾಸಣೆಗೆ ಒಳಗಾಗಿದ್ದಾರೆ. `ಈ ವೇಲೆ ಮಾತನಾಡಿದ ಚಂದ್ರಶೇಖರ್ ಆರ್ ಜಿ ಅವರು `ಉತ್ತರ ಕನ್ನಡದಂತಹ ಗುಡ್ಡಗಾಡು ಪ್ರದೇಶದ ಜನ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ, ಮಂಗಳೂರು, ಗೋವಾ, ಬೆಳಗಾವಿ, ಶಿವಮೊಗ್ಗದಂತಹ ಪ್ರದೇಶಗಳಿಗೆ ತೆರಳಬೇಕಾಗಿದೆ. ಆರಂಭದಲ್ಲೇ ರೋಗ ಪತ್ತೆಯಾಗದಿದ್ದರೆ ಜೀವ ಹಾನಿಯಂತಹ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ತಜ್ಞ ವೈದ್ಯರ ಬೃಹತ್ ಶಿಬಿರಗಳು ಅಸಹಾಯಕರಿಗೆ ರೋಗ ಪೂರ್ವಪತ್ತೆಗೆ ತುಂಬ ಸಹಾಯಕವಾಗುತ್ತದೆ’ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ `ಶಿರಸಿ ತಾಲೂಕಿನ ಹೆಚ್ಚಿನ ಗ್ರಾಮಗಳು ನಗರ ಪ್ರದೇಶದಿಂದ ದೂರ ಇರುವುದರಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಇಂತಹ ಆರೋಗ್ಯ ಶಿಬಿರಗಳು ತುಂಬಾ ಅನುಕೂಲವಾಗುತ್ತದೆ. ಅಲ್ಲದೇ ಅನಾವಶ್ಯಕ ಆರ್ಥಿಕ ನಷ್ಟವನ್ನು ತಡೆದು ಜೀವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಶಿರಸಿ ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀನಿವಾಸ ನಾಯ್ಕರವರು `ಸಮಾಜದ ಅವಶ್ಯಕತೆ ಮತ್ತು ಬೇಡಿಕೆಗಳನ್ನಾಧರಿಸಿ ರೋಟರಿ ಸಂಸ್ಥೆ ಸೇವೆ ಸಲ್ಲಿಸುತ್ತಿದ್ದು, ಸ್ಕೊಡ್‌ವೆಸ್ ಸಂಸ್ಥೆ ಆಯೋಜಿಸಿದ ಬೃಹತ್ ಆರೋಗ್ಯ ಶಿಬಿರದ ಯಶಸ್ವಿಗೆ ಸಾಥ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಮಟ್ಟದಲ್ಲೂ ಆಯೋಜಿಸುವ ಉದ್ದೇಶ ಹೊಂದಲಾಗಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು `ಸ್ಕೊಡ್‌ವೆಸ್ ಸಂಸ್ಥೆ, ಗುಜರಾತ್‌ನ ದೇಸಾಯಿ ಫೌಂಡೇಶನ್‌ನ ಸಹಯೋಗ ಹಾಗೂ ಸ್ಥಳೀಯ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ’ ಎಂದರು. ವೇದಿಕೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಶಿರಸಿಯ ಐಎಂಎ ಕಾರ್ಯದರ್ಶಿ ಡಾ ಹರ್ಷ ನಾಡಿಗೇರ್, ಶಿರಸಿ ಮಹಾಲಕ್ಷಿö್ಮÃ ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಹೆಗಡೆ, ಶಿವಮೊಗ್ಗದ ನಾರಾಯಣ ಹೆಲ್ತ್ನ ಹೃದ್ರೋಗ ತಜ್ಞ ಡಾ ಶಶಾಂಕ್, ಎಲುಬು ತಜ್ಞ ಡಾ ರಿತಿನ್, ಶಿರಸಿಯ ಶ್ರೀಗಂಧ ಕಣ್ಣಿನ ಆಸ್ಪತ್ರೆಯ ಶ್ರೀಶ್ರುತಿ ಹೆಗಡೆ, ಮನಸ್ವಿತಾ ಸ್ಪೆಷಾಲಿಟಿ ಕ್ಲಿನಿಕ್‌ನ ಮನೋವೈದ್ಯ ಡಾ. ಆಶಯ್ ತೇಲಂಗ, ಡಾ ಎಲ್ ಎಚ್ ಪೈ ಆಸ್ಪತ್ರೆಯ ಎಲುಬು ಶಸ್ತç ಚಿಕಿತ್ಸಕ ಡಾ ಕೈಲಾಶ ಪೈ, ಕೃಪಾ ನರ್ಸಿಂಗ್ ಹೋಮ್‌ನ ಸಾಮಾನ್ಯ ಶಸ್ತç ಚಿಕಿತ್ಸಕರಾದ ಡಾ ಅನಿತಾ, ಡಾ ಕಿಶೋರ್ ಪವಾರ್, ನಾಗೇಶ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ ನಾಗೇಶ್ ತುಂಬಾಡಿ, ಶಿರಸಿ ಸ್ಕಿನ್‌ಕೇರ್‌ನ ಚರ್ಮರೋಗ ತಜ್ಞ ಡಾ ಮಂಜುನಾಥ ಕನ್ನಂತ, ಶಿರಸಿ ಟಿ ಎಸ್ ಎಸ್. ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞ ಡಾ ವಿರೇಶ್ ಬಾಲೆಹೊಸೂರು, ಸ್ತಿ ರೋಗ ತಜ್ಞೆ ಡಾ ವೀಣಾ ವೆರ್ಣೇಕರ್, ಸ್ಕೊಡ್‌ವೆಸ್ ಇಲಾಜ್ ಸ್ಮಾರ್ಟ್ ಕ್ಲಿನಿಕ್‌ನ ಸಾಮಾನ್ಯ ರೋಗ ತಜ್ಞ ಡಾ. ಸಿದ್ದನಗೌಡ ಉಪಸ್ಥಿತರಿದ್ದರು.
ಶಿಬಿರದಲ್ಲಿ 16ಕ್ಕೂ ಅಧಿಕ ತಜ್ಞ ವೈದ್ಯರು ಭಾಗಿಯಾಗಿ ತಪಾಸಣೆ ನಡೆಸಿದರು ಹಾಗೂ 500ಕ್ಕೂ ಹೆಚ್ಚು ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಸ್ಕೊಡ್‌ವೆಸ್‌ನ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.