ಕಾರವಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದ್ದು, ಬಜೆಟ್ ಭಾಷಣದಲ್ಲಿಯೂ ಆ ವಿಷಯವನ್ನು ಅಧಿಕೃತಗೊಳಿಸಿದ್ದಾರೆ. `ಸುಸಜ್ಜಿತ ಆಸ್ಪತ್ರೆಗೆ ತಕರಾರು ಇಲ್ಲ. ಆದರೆ, ಅದನ್ನು ಕುಮಟಾದಲ್ಲಿ ನಿರ್ಮಿಸಿದರೆ ಎಲ್ಲರಿಗೂ ಅನುಕೂಲ’ ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸದನದಲ್ಲಿ ಹೇಳಿದ್ದಾರೆ.
Advertisement. Scroll to continue reading.
`ಗೋವಾ ಗಡಿಯಲ್ಲಿರುವ ಕಾರವಾರಕ್ಕಿಂತಲೂ ಕುಮಟಾ ಮಧ್ಯವರ್ತಿ ಸ್ಥಳ. ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದರೆ ಶಿರಸಿ, ಸಿದ್ದಾಪುರ, ಭಟ್ಕಳ ಹಾಗೂ ಅಂಕೋಲಾದವರಿಗೆ ಸಹ ಸಾಕಷ್ಟು ಅನುಕೂಲ ಆಗಲಿದೆ. `ಕಾರವಾರ ಗೋವಾದ ಅಂಚಿನಲ್ಲಿರುವುದರಿAದ ಅಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ಮಾಡಿದರೆ ಕಾರವಾರದವರಿಗೆ ಎಷ್ಟು ಉಪಯೋಗವಾಗುತ್ತದೆ? ಎಂಬುದು ಗೊತ್ತಿಲ್ಲ. ಕಾರವಾರ ದೂರ ಎನ್ನುವುದರ ಜೊತೆ ಅಲ್ಲಿಗಿಂತಲೂ ಜನರಿಗೆ ಉಡುಪಿ, ಮಣಿಪಾಲ, ಮಂಗಳೂರು ಆಸ್ಪತ್ರೆ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಹೀಗಾಗಿ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ರೈಲು ನಿಲ್ದಾಣ ಸಹ ಪಟ್ಟಣದಲ್ಲಿಯೇ ಇದ್ದು, ಇಲ್ಲಿಯೇ ಆಸ್ಪತ್ರೆ ನಿರ್ಮಿಸಿದರೆ ರೈಲಿನಲ್ಲಿ ಬರುವ ರೋಗಿಗಳಿಗೂ ಅನುಕೂಲ’ ಎಂದು ಹೇಳಿದ್ದಾರೆ.
`ಮಾದನಗೇರಿಯಲ್ಲಿ ಸರ್ಕಾರದ ಅಧೀನದಲ್ಲಿಯೇ ಕೆಐಡಿಬಿಗೆ ಸೇರಿದ 1800 ಏಕರೆ ಜಮೀನು ಪಾಳು ಬಿದ್ದಿದೆ. ಈ ಜಾಗ ಅಂಕೋಲಾ ಅಂಚಿನಲ್ಲಿದ್ದು, ಅಲ್ಲಿಯೇ ಆಸ್ಪತ್ರೆ ಮಾಡಿದರೆ ಕಾರವಾರ ಮತಕ್ಷೇತ್ರದ ಜನರಿಗೂ ಅನುಕೂಲ ಆಗಲಿದೆ. ಹಾಗಾಗಿ ಈ ಸ್ಥಳದಲ್ಲಿ ಈ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸರ್ಕಾರ ಸ್ಥಾಪಿಸಿದರೆ ಕಾರವಾರ ಮತಕ್ಷೇತ್ರದಲ್ಲೇ ಈ ಆಸ್ಪತ್ರೆ ಸ್ಥಾಪಿಸಿದ ಹಾಗಾಗುತ್ತದೆ’ ಎಂದು ಅವರು ವಿವರಿಸಿದರು. `ಅದಾದ ನಂತರ ಮತ್ತೊಮ್ಮೆ ಕುಮಟಾ ಬಳಿಯೇ ಆಸ್ಪತ್ರೆ ನಿರ್ಮಿಸುವುದು ಸೂಕ್ತ’ ಎಂದು ಪುನರುಚ್ಚರಿಸಿದರು.